More

    ಅಂತಾರಾಷ್ಟ್ರೀಯ ಯೋಗ ದಿನ: 17 ಸಾವಿರ ಅಡಿ ಎತ್ತರ ಪ್ರದೇಶದಲ್ಲಿ ITBP ಹಿಮವೀರರ ಯೋಗ ಪ್ರದರ್ಶನ

    ನವದೆಹಲಿ: ಇಂದು ವಿಶ್ವದಾದ್ಯಂತ 8ನೇ ವರ್ಷದ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತಿದೆ. ಯೋಗ ತವರು ಭಾರತದ ಮೂಲೆ ಮೂಲೆಯಲ್ಲಿ ಯೋಗ ದಿನದ ಸಂಭ್ರಮ ಮನೆ ಮಾಡಿದೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಪ್ರಧಾನಿ ಮೋದಿ ಯೋಗ ದಿನದ ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಯೋಗ ದಿನದ ಕೇಂದ್ರ ಬಿಂದುವಾದರೆ, ದೇಶದ ಹಲವೆಡೆ ಅನೇಕ ಗಣ್ಯಾತಿಗಣ್ಯರು ಯೋಗಾಭ್ಯಾಸ ಮಾಡುವ ಮೂಲಕ ವಿಶೇಷ ದಿನದಲ್ಲಿ ಭಾಗಿಯಾದರು.

    ಎಲ್ಲರ ಗಮನ ಸೆಳೆದಿದ್ದರೆ, ಕೇಂದ್ರಾಡಳಿತ ಪ್ರದೇಶ ಲಡಾಖ್​ನ ಸಮುದ್ರ ಮಟ್ಟದಿಂದ 17 ಸಾವಿರ ಅಡಿ ಎತ್ತರವಿರುವ ಪ್ರದೇಶದಲ್ಲಿ ಇಂಡೋ-ಟಿಬೆಟನ್​ ಬಾರ್ಡರ್​ ಪೊಲೀಸ್ (ಐಟಿಬಿಪಿ)​ ಪಡೆಯ ಹಿಮವೀರರು ಕೊರೆಯುವ ಚಳಿಯಲ್ಲಿ ಪ್ಯಾಂಟ್​ ಮಾತ್ರ ಧರಿಸಿ, ಬರಿ ಮೈಯಲ್ಲಿ ಯೋಗಾಭ್ಯಾಸ ಮಾಡುವ ಮೂಲಕ ತಮ್ಮ ಸಾಮರ್ಥ್ಯವನ್ನು ಪ್ರದರ್ಶನ ಮಾಡಿದರು.

    ಇಷ್ಟೇ ಅಲ್ಲದೆ, ಹಿಮಾಚಲ ಪ್ರದೇಶದಲ್ಲಿ ಸಮುದ್ರ ಮಟ್ಟದಿಂದ 16,500 ಅಡಿ ಎತ್ತರವಿರುವ ಪ್ರದೇಶದಲ್ಲಿ ಹಾಗೂ ಉತ್ತರಾಖಂಡದಲ್ಲಿ ಸಮುದ್ರ ಮಟ್ಟದಿಂದ 14,500 ಅಡಿ ಎತ್ತರ ಇರುವ ಪ್ರದೇಶದಲ್ಲಿ ಐಟಿಬಿಪಿ ಹಿಮವೀರರು ಯೋಗಾಸನ ಮಾಡಿ ಯೋಗ ದಿನವನ್ನು ಸಂಭ್ರಮಿಸಿದರು.

    ಇಂಡೋ-ಚೀನಾ ಗಡಿಗಳಾದ ಲಡಾಖ್​, ಹಿಮಾಚಲ ಪ್ರದೇಶ, ಉತ್ತರಾಖಂಡ, ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶದ ಅತಿ ಎತ್ತರ ಪ್ರದೇಶಗಳಲ್ಲಿ ಹಿಮವೀರರು ಕನಿಷ್ಠ ಉಷ್ಣಾಂಶ ಇರುವ ಪ್ರದೇಶಗಳಲ್ಲಿ ಯೋಗಾಸನ ಮಾಡಿದ್ದು, ಭಾರತೀಯ ಸೇನೆಯ ಸಾಮರ್ಥ್ಯವನ್ನು ಸಾರುವಂತಿತ್ತು.

    ಯೋಧರ ಯೋಗಾಭ್ಯಾಸದ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಅವರ ಸಾಮರ್ಥ್ಯ ಮತ್ತು ಕರ್ತವ್ಯ ನಿಷ್ಠೆ ಹಾಗೂ ಬದ್ಧತೆಯನ್ನು ನೋಡಿ ಭಾರೀ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ. (ಏಜೆನ್ಸೀಸ್​)

    ಯೋಗ ವ್ಯಕ್ತಿಗಾಗಿ ಮಾತ್ರವಲ್ಲ ಅದು ಮನುಕುಲದ ಒಳಿತಿಗಾಗಿ, ವಿಶ್ವಕ್ಕೆ ಶಾಂತಿ ನೀಡುವ ಶಕ್ತಿ ಯೋಗಕ್ಕಿದೆ: ಪ್ರಧಾನಿ ಮೋದಿ

    ಮೈಸೂರಲ್ಲಿ ನಮೋ ಯೋಗ: 15 ಸಾವಿರ ಯೋಗಪಟುಗಳ ಜತೆ ಮೋದಿ

    ವುಹಾನ್ ಲ್ಯಾಬ್ ಸೋಂಕಿನ ಮೂಲ; ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೊಸ್ ಅದಾನೊಮ್ ಹೇಳಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts