More

    ದ್ವಿತೀಯ ಪಿಯು ಪರೀಕ್ಷೆ ಆರಂಭ: ಹಿಜಾಬ್​ ನಿರಾಕರಿಸಿದ್ದಕ್ಕೆ ಪರೀಕ್ಷಾ ಕೇಂದ್ರ ತೊರೆದ ಇಬ್ಬರು ವಿದ್ಯಾರ್ಥಿನಿಯರು

    ಬೆಂಗಳೂರು/ಉಡುಪಿ: ಇಂದು ರಾಜ್ಯಾದ್ಯಂತ ದ್ವಿತೀಯ ಪಿಯು ಪರೀಕ್ಷೆ ಆರಂಭವಾಗಿದೆ. ಸಮವಸ್ತ್ರ ಧರಿಸಿ ಬಂದವರಿಗೆ ಮಾತ್ರ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು ಎಂದು ಸರ್ಕಾರ ಈ ಹಿಂದೆಯೇ ಹೇಳಿದೆ. ಹೀಗಿದ್ದರೂ ಕೆಲವೆಡೆ ಹಿಜಾಬ್​ ಧರಿಸಿ ವಿದ್ಯಾರ್ಥಿನಿಯರು ಆಗಮಿಸಿದ್ದು, ಮನವೊಲಿಕೆಯ ಬಳಿಕ ಕೆಲವರು ಹಿಜಾಬ್​ ಕಳಚಿಟ್ಟು ಪರೀಕ್ಷೆ ಎದುರಿಸಿದರೆ, ಇಬ್ಬರು ವಿದ್ಯಾರ್ಥಿನಿಯರು ಕಾಲೇಜು ಆವರಣದಿಂದ ಹೊರ ನಡೆದ ಘಟನೆ ವರದಿಯಾಗಿದೆ.

    ಹಿಜಾಬ್​ಗೆ ಅವಕಾಶ ನಿರಾಕರಿಸಿದ ಹಿನ್ನೆಲೆಯಲ್ಲಿ ಇಬ್ಬರು ಹಿಜಾಬ್ ಹೋರಾಟಗಾರ್ತಿಯರಾದ ಆಲಿಯಾ ಅಸಾದಿ ಹಾಗೂ ರೇಶಂ ಪರೀಕ್ಷೆ ಬರೆಯದೇ ಪರೀಕ್ಷಾ ಕೇಂದ್ರದಿಂದ ಹೊರ ನಡೆದಿದ್ದಾರೆ. ಒಂದು ಕೋರ್ಟ್​ ಆದೇಶ ಹಾಗೂ ಇನ್ನೊಂದೆಡೆ ಸರ್ಕಾರದ ಸೂಚನೆ ಇದ್ದರೂ ವಿದ್ಯಾರ್ಥಿನಿಯರು ಮಾತ್ರ ಮೊಂಡುತನವನ್ನು ಪ್ರದರ್ಶನ ಮಾಡಿದ್ದಾರೆ.

    ಹಿಜಾಬ್​ ಧರಿಸಿ ಬಂದವರಿಗೆ ಅದನ್ನು ತೆಗೆದಿಡಲು ಪ್ರತ್ಯೇಕ ಕೊಠಡಿ ವ್ಯವಸ್ಥೆಯನ್ನು ಸಹ ಮಾಡಲಾಗಿದೆ. ಪರೀಕ್ಷೆ ಬರೆದ ಬಳಿಕ ಮತ್ತೆ ಹಿಜಾಬ್​ ಧರಿಸಿ ಹೋಗಬಹುದು. ಆದರೆ, ಹಿಜಾಬ್​ ಧರಿಸಿಯೇ ಪರೀಕ್ಷೆ ಬರೆಯುತ್ತೇವೆ ಎಂಬ ಹಠಕ್ಕೆ ಬಿದ್ದ ಇಬ್ಬರು ವಿದ್ಯಾರ್ಥಿನಿಯರಿಗೆ ಅವಕಾಶ ನೀಡದಿದ್ದಕ್ಕೆ ಪರೀಕ್ಷಾ ಕೇಂದ್ರದಿಂದ ಹೊರ ನಡೆದಿದ್ದಾರೆ. ಉಡುಪಿಯ ವಿದ್ಯೋದಯ ಪದವಿ ಪೂರ್ವ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. (ದಿಗ್ವಿಜಯ ನ್ಯೂಸ್​)

    ಪ್ರಶಾಂತ್​ ನೀಲ್​ ತಪ್ಪು ಮಾಡಿದ್ರಾ? KGF-2 ಯಶಸ್ಸಿನ ನಡುವೆಯೇ ಚಿತ್ರತಂಡಕ್ಕೆ ಎದುರಾಯ್ತು ಹೊಸ ಸಂಕಷ್ಟ!

    21ನೇ ವಯಸ್ಸಿಗೆ ಅಮೇಜಾನ್​ ಲಂಡನ್​ನಲ್ಲಿ ಕೆಲಸ ಗಿಟ್ಟಿಸಿದ ಕುವರಿ: ಸಂಬಳ ಕೇಳಿದ್ರೆ ಹುಬ್ಬೇರೋದು ಖಂಡಿತ!

    ಬಗೆದಷ್ಟು ಹೊರ ಬರ್ತಿದೆ PSI ಪರೀಕ್ಷಾ ಅಕ್ರಮ: ಮುನ್ನಾಭಾಯಿ MBBS ಸ್ಟೈಲ್​ನಲ್ಲಿ ಪರೀಕ್ಷೆ ಬರೆದಿರುವ ಅಭ್ಯರ್ಥಿಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts