More

    ಜೈಭೀಮ್​ ವಿವಾದ: ಮದ್ರಾಸ್​ ಹೈಕೋರ್ಟ್​ನಿಂದ​ ಮಹತ್ವದ ತೀರ್ಪು, ಬರ್ತಡೇಗೂ ಮುನ್ನವೇ ಸೂರ್ಯಗೆ ಬಿಗ್​ ರಿಲೀಫ್​

    ಚೆನ್ನೈ: ಸೂಪರ್​ ಸ್ಟಾರ್​ ಸೂರ್ಯ ಅವರ ತಮಿಳು ಚಲನಚಿತ್ರ ‘ಜೈಭೀಮ್​’ ವಿಶ್ವದಾದ್ಯಂತ ಮೆಚ್ಚುಗೆ ಪಾತ್ರವಾಗಿದ್ದಲ್ಲದೆ, ತಮಿಳುನಾಡಿನಲ್ಲಿ ವಿವಾದಕ್ಕೆ ಸಿಲುಕಿತು. ಚಿತ್ರದ ಕೆಲವು ಅಂಶಗಳು ಸ್ಥಳೀಯ ವನ್ನಿಯಾರ್​​ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿವೆ ಆರೋಪ ಕೇಳಿಬಂದಿತ್ತು. ಈ ಸಂಬಂಧ ಸೂರ್ಯ ವಿರುದ್ಧ ಎಫ್​ಐಆರ್​ ಸಹ ದಾಖಲಾಗಿತ್ತು. ಇದೀಗ ಈ ಪ್ರಕರಣದಲ್ಲಿ ಮದ್ರಾಸ್​ ಹೈಕೋರ್ಟ್​ ಮಹತ್ವದ ತೀರ್ಪು ಪ್ರಕಟಿಸಿದೆ.

    ಕಳೆದ ಭಾನುವಾರ ನಟ ಸೂರ್ಯ, ನಿರ್ದೇಶಕ ಜ್ಞಾನವೇಲು ಜೊತೆಯಾಗಿ ಹೈಕೋರ್ಟ್​ ಮೆಟ್ಟಿಲೇರಿ, ತಮ್ಮ ವಿರುದ್ಧ ಚೆನ್ನೈನ ವೇಲಚಾರಿ ಪೊಲೀಸ್​ ಠಾಣೆಯಲ್ಲಿ ದಾಖಲಾಗಿರುವ ಎಫ್​ಐಆರ್ ಅನ್ನು ರದ್ದು ಪಡಿಸುವಂತೆ ಅರ್ಜಿ ಸಲ್ಲಿಸಿ ಮನವಿ ಮಾಡಿದ್ದರು. ಈ ಸಂಬಂಧ ನಿನ್ನೆ (ಜುಲೈ 18) ತೀರ್ಪು ನೀಡಿರುವ ಮದ್ರಾಸ್​ ಹೈಕೋರ್ಟ್,​ ಜುಲೈ 23ರ ಸೂರ್ಯ ಹುಟ್ಟುಹಬ್ಬಕ್ಕೂ ಮುನ್ನವೇ ಉಡುಗೊರೆಯನ್ನು ನೀಡಿದೆ.

    ಚಿತ್ರದಲ್ಲಿ ವನ್ನಿಯಾರ್​​ ಸಮುದಾಯವನ್ನು ತಪ್ಪಾಗಿ ಚಿತ್ರೀಕರಿಸಲಾಗಿದೆ ಎಂದು ಆರೋಪಿ ರುದ್ರ ವನ್ನಿಯಾರ್ ಸೇನೆಯ ಕೆ.ಸಂತೋಷ್​ ಎಂಬುವರು ತಮ್ಮ ಸಮುದಾಯಗ ಸಂಘಟನೆ ಜೊತೆ ಸೇರಿ ಸೂರ್ಯ ಮತ್ತು ಜ್ಞಾನವೇಲು ವಿರುದ್ಧ ದೂರು ದಾಖಲಿಸಿದ್ದರು. ಚಿತ್ರದಲ್ಲಿ ಖಳನಾಯಕನಿಗೆ ಗುರು ಎಂದು ಹೆಸರಿಸಿರುವುದು ಅವರ ಸಮುದಾಯದ ನಾಯಕರೊಬ್ಬರ ಮೇಲಿನ ದಾಳಿಯಾಗಿದೆ. ಈ ಚಲನಚಿತ್ರವನ್ನು “ವನ್ನಿಯಾರ್ ಫೋಬಿಯಾ” ದಿಂದ ನಿರ್ಮಿಸಲಾಗಿದೆ ಮತ್ತು “ಸಮುದಾಯಗಳ ನಡುವೆ ಕೋಮುಗಲಭೆಯನ್ನು ಪ್ರಚೋದಿಸುವ ಉದ್ದೇಶವನ್ನು ಹೊಂದಿದೆ” ಎಂದು ಅರ್ಜಿದಾರರು ಆರೋಪಿಸಿದ್ದರು.

    ನಿನ್ನೆ ಇದರ ವಿಚಾರಣೆ ನಡೆಸಿದ ಹೈಕೋರ್ಟ್​, ದೂರು ಸಂಬಂಧ ಸೂರ್ಯ ಮತ್ತು ಜ್ಞಾನವೇಲು ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುವಂತಿಲ್ಲ ಎಂದು ಹೇಳಿದೆ ಮತ್ತು ಈ ಪ್ರಕರಣವನ್ನು ಮತ್ತೆ ಜುಲೈ 21ಕ್ಕೆ ಮುಂದೂಡಿದೆ.

    ಅಂದಹಾಗೆ ಜೈಭೀಮ್​ ಸಿನಿಮಾ 2021ರಲ್ಲಿ ಅಮೇಜಾನ್​ ಪ್ರೈಮ್​ ವಿಡಿಯೋದಲ್ಲಿ ಬಿಡುಗಡೆಯಾಯಿತು. ಇದು ನೈಜ ಕತೆಯಾಧಾರಿತ ಸಿನಿಮಾ ಆಗಿದ್ದು, ವಿಶ್ವದಾದ್ಯಂತ ಭಾರೀ ಮೆಚ್ಚುಗೆ ಗಳಿಸಿತು. ಅಲ್ಲದೆ, ಆಸ್ಕರ್​ ನಾಮಿನೇಷನ್​ ರೇಸ್​ನಲ್ಲೂ ಈ ಸಿನಿಮಾ ಇತ್ತು. ಬುಡಕಟ್ಟು ಜನಾಂಗದ ಮೇಲೆ ಪೊಲೀಸ್​ ದೌರ್ಜನ್ಯವನ್ನು ಸಾರುವ ಈ ಸಿನಿಮಾವನ್ನು ಇಡೀ ದೇಶವೇ ಕೊಂಡಾಡಿತು. ಸೂರ್ಯ ಅವರ ನಟನೆಗೆ ಎಲ್ಲರೂ ತಲೆಬಾಗಿದರು. (ಏಜೆನ್ಸೀಸ್​)

    ನೀವೂ ಗೆಲ್ಲಿ.. ಪಕ್ಕದ ಕ್ಷೇತ್ರದವರನ್ನೂ ಗೆಲ್ಲಿಸಿ: ಬಿಜೆಪಿ ಒನ್ ಪ್ಲಸ್ ಒನ್ ಪ್ಲ್ಯಾನ್; ವಿಧಾನಸಭೆ ಚುನಾವಣೆಗೆ ಕಾರ್ಯತಂತ್ರ

    ಕಿಚ್ಚನ ಕಾಫಿ-ಬನ್ಸ್; ಹೋಟೆಲ್ ಉದ್ಯಮದತ್ತ ಸುದೀಪ್ ಚಿತ್ತ..

    80ರ ಗಡಿ ಮುಟ್ಟಿದ ರೂಪಾಯಿ: 79.98 ರೂ.ಗೆ ದಿನ ಅಂತ್ಯಕ್ಕೆ ವಿನಿಮಯ ದರ ಸ್ಥಿರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts