More

    ಕೊನೆಗೂ ಮೌನ ಮುರಿದ ಭಾವನಾ: ಕೆಲ ವರ್ಷಗಳ ಹಿಂದೆ ನಡೆದ ಕರಾಳ ಘಟನೆಯ ಬಗ್ಗೆ ನಟಿ ಹೇಳಿದ್ದು ಹೀಗೆ

    ಚೆನ್ನೈ: ಘಟನೆ ನಡೆದು ಸುಮಾರು ಐದು ವರ್ಷವೇ ಕಳೆದಿವೆ. ಇದುವರೆಗೂ ಸಂತ್ರಸ್ತ ನಟ ಭಾವನಾ ಹೆಸರನ್ನು ಎಲ್ಲಿಯೂ ಉಲ್ಲೇಖಿಸಿರಲಿಲ್ಲ. ಅಲ್ಲದೆ, ಯಾವುದೇ ವರದಿಯಲ್ಲೂ ಪ್ರಕಟಿಸಿರಲಿಲ್ಲ. ಹೆಸರು ಬಳಸಿದ್ದಲ್ಲಿ ಕಾನೂನು ಕ್ರಮದ ಎಚ್ಚರಿಕೆಯು ಇತ್ತು. ಆದರೆ, ಸ್ವತಃ ಭಾವನಾರೇ ಅಂದು ನಡೆದ ಘಟನೆಯ ಬಗ್ಗೆ ತುಟಿ ಬಿಚ್ಚಿದ್ದಾರೆ. ಕೆಲವೇ ಕ್ಷಣಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ತಮಗನಿಸಿದ್ದನ್ನು ಭಾವನಾ ಬರೆದುಕೊಂಡಿದ್ದಾರೆ.

    ಅಂದಹಾಗೆ ಭಾವನಾ ಸಾಮಾನ್ಯ ನಟಿಯೇನಲ್ಲ. ತಮಿಳು, ತೆಲುಗು, ಮಲಯಾಳಂ ಹಾಗೂ ಕನ್ನಡದಲ್ಲಿ ಸಾಕಷ್ಟು ಸಿನಿಮಾ ಮಾಡಿರುವ ಬಹುಭಾಷಾ ನಟಿ. ಐದು ವರ್ಷಗಳ ಹಿಂದೆ ಶೂಟಿಂಗ್​ ಮುಗಿಸಿ ಕಾರಿನಲ್ಲಿ ಹಿಂದಿರುಗುವಾಗ ಕಿಡಿಗೇಡಿಗಳ ಗುಂಪೊಂದು ಭಾವನಾರನ್ನು ಅಪಹರಿಸಿ, ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು ಹೇಳಲಾಗಿದೆ. ಇದೇ ಪ್ರಕರಣದಲ್ಲಿ ತದನಂತರದಲ್ಲಿ ಮಲಯಾಳಂ ನಟ ದಿಲೀಪ್​ರನ್ನು ಬಂಧಿಸಲಾಗಿತ್ತು. ಸದ್ಯ ಜಾಮೀನಿನ ಮೇಲೆ ಹೊರಗಡೆ ಇದ್ದಾರೆ. ಇನ್ನು ಪ್ರಕರಣ ಹಾಗೇ ಮುಂದುವರಿದಿದೆ.

    ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಭಾವನಾ, ಓರ್ವ ಸಂತ್ರಸ್ತೆಯಾಗಿ ಬದುಕುಳಿಯುವುದು ಸುಲಭದ ಮಾತಲ್ಲ. ಅನೇಕ ವರ್ಷಗಳವರೆಗೆ ನನ್ನ ಹೆಸರು ಮತ್ತು ಗುರುತನ್ನು ನನ್ನ ಮೇಲೆ ಮಾಡಿದ ಹಲ್ಲೆಯ ಭಾರದಲ್ಲಿ ನಿಗ್ರಹಿಸಲಾಯಿತು. ಯಾವುದೇ ಅಪರಾಧ ಮಾಡದಿದ್ದರೂ ನನ್ನ ಧ್ವನಿ ಮೌನವಾಯಿತು. ನನ್ನನ್ನು ಅವಮಾನಿಸಲು ಸಾಕಷ್ಟು ಬಾರಿ ಪ್ರಯತ್ನಿಸಲಾಯಿತು. ನನ್ನ ಧ್ವನಿ ಮಟ್ಟಹಾಕಲು ಮತ್ತು ನನ್ನನ್ನು ಒಬ್ಬಂಟಿಯನ್ನಾಗಿ ಮಾಡಲು ಪ್ರಯತ್ನಿಸಿದರು. ಈಗ ಬಹಳಷ್ಟು ಜನರು ನನಗಾಗಿ ಹೋರಾಡುತ್ತಿದ್ದಾರೆ. ನನಗೆ ಧ್ವನಿಯಾಗಿದ್ದಾರೆ. ಅವರೆಲ್ಲರ ಬೆಂಬಲದಿಂದಾಗಿ ಸಂತೋಷವಾಗಿದ್ದೇನೆ ಎಂದು ಭಾವನಾ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

    ತಪ್ಪಿತಸ್ಥರನ್ನು ಶಿಕ್ಷಿಸಲು ನ್ಯಾಯವು ಮೇಲುಗೈ ಸಾಧಿಸುವುದನ್ನು ನೋಡಲು ಮತ್ತು ಯಾರೂ ಮತ್ತೆ ಅಂತಹ ಅಗ್ನಿಪರೀಕ್ಷೆಗೆ ಒಳಗಾಗಬಾರದು ಎಂದು ಖಚಿತಪಡಿಸಿಕೊಳ್ಳಲು, ನಾನು ಈ ಪ್ರಯಾಣವನ್ನು ಮುಂದುವರಿಸುತ್ತೇನೆ. ನನ್ನ ಜತೆ ನಿಂತು ಧ್ವನಿ ಎತ್ತಿದ ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು ಎಂದು ಭಾವನಾ ಹೇಳಿದ್ದಾರೆ.

    ದೌರ್ಜನ್ಯ ನಡೆದ ಕೆಲವು ವರ್ಷಗಳ ನಂತರ ಭಾವನಾ, ನವೀನ್ ಎಂಬುವರನ್ನು ವಿವಾಹವಾದರು. ಕೆಲವು ಪ್ರಭಾವಿ ವ್ಯಕ್ತಿಗಳಿಂದ ಮಲಯಾಳಂ ಆಫರ್‌ಗಳು ಸಿಗದಿದ್ದರಿಂದ ಭಾವನಾ ಅವರು ಕನ್ನಡ ಚಲನಚಿತ್ರಗಳಲ್ಲಿ ನಿರತರಾಗಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts