More

    ಒಂದು ವೇಳೆ ರಷ್ಯಾ-ಯೂಕ್ರೇನ್​ ಯುದ್ಧಕ್ಕೆ ಮುಂದಾದ್ರೆ ಭಾರತದಲ್ಲಿ ಏನೆಲ್ಲಾ ದುಬಾರಿಯಾಗಲಿದೆ?

    ನವದೆಹಲಿ: ಯೂಕ್ರೇನ್​ ಮತ್ತು ರಷ್ಯಾ ನಡುವಿನ ಬಿಕ್ಕಟ್ಟು ಸದ್ಯಕ್ಕೆ ಸರಿದಾರಿಗೆ ಬರುವ ಲಕ್ಷಣಗಳು ಗೋಚರಿಸುತ್ತಿಲ್ಲ. ನಿನ್ನೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯಲ್ಲಿ ಬ್ರಿಟನ್​, ಜರ್ಮನಿ, ಅಮೆರಿಕ ಸೇರಿದಂತೆ ಅನೇಕ ರಾಷ್ಟ್ರಗಳು ರಷ್ಯಾ ನಡೆಯನ್ನು ಟೀಕಿಸಿದರೂ ಸಹ ತನ್ನ ನಿಲುವು ಬದಲಿಸಿದ ರಷ್ಯಾ, ಯೂಕ್ರೇನ್​ನ ಎರಡು ಬಂಡಾಯದ ಪ್ರಾಂತ್ಯಗಳಿಗೆ ತನ್ನ ಸೇನೆಯನ್ನು ನಿಯೋಜಿಸಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಒಂದು ವೇಳೆ ಯೂಕ್ರೇನ್​ ಮತ್ತು ರಷ್ಯಾ ನಡುವೆ ಯುದ್ಧ ಸಂಭವಿಸಿದರೆ ಅದರ ಪರಿಣಾಮವನ್ನು ಭಾರತವೂ ಎದುರಿಸಲಿದೆ. ಭಾರತದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಲಿದೆ.

    ಯೂಕ್ರೇನ್​ ಮತ್ತು ರಷ್ಯಾ ನಡುವಿನ ಉದ್ವಿಗ್ನತೆ ಹೆಚ್ಚಾಗುತ್ತಿರುವಾಗ ಜಾಗತಿಕ ಆರ್ಥಿಕತೆಯು ಕೂಡ ತುಂಬಾ ಕಳವಳಕಾರಿಯಾಗಿದೆ. ನೈಸರ್ಗಿಕ ಅನಿಲದಿಂದಿಡಿದು ಗೋಧಿಯು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಭವಿಷ್ಯದಲ್ಲಿ ಏರಿಕೆಯಾಗಲಿವೆ. ಉಭಯ ದೇಶಗಳ ಸಂಘರ್ಷದಿಂದ ಮುಂದಿನ ದಿನಗಳಲ್ಲಿ ಏನು ಪರಿಣಾಮ ಬೀರಬಹುದು ಎಂಬ ಮಾಹಿತಿ ಈ ಕೆಳಕಂಡತಿದೆ.

    ನೈಸರ್ಗಿಕ ಅನಿಲ ಬೆಲೆ ಏರಿಕೆ
    ಯೂಕ್ರೇನ್​-ರಷ್ಯಾ ಬಿಕ್ಕಟ್ಟು ಪ್ರಸ್ತುತ ಬ್ರೆಂಟ್​ ಕಚ್ಚಾ ತೈಲ ಬೆಲೆಯನ್ನು ಒಂದು ಬ್ಯಾರೆಲ್​ಗೆ 96.7 ಡಾಲರ್​ಗೆ ಹೆಚ್ಚಿಸಿದೆ. ಇದು 2014ರ ಸೆಪ್ಟೆಂಬರ್​ ನಂತರದಲ್ಲಿ ಕಂಡುಬಂದಂತಹ ಅತ್ಯಧಿಕ ಬೆಲೆಯಾಗಿದೆ. ಅತ್ಯಧಿಕ ಕಚ್ಚಾ ತೈಲ ಉತ್ಪಾದನೆ ರಾಷ್ಟ್ರಗಳಲ್ಲಿ ರಷ್ಯಾ ಕೂಡ ಒಂದಾಗಿದೆ. ಪ್ರಸ್ತುತ ಬಿಕ್ಕಟ್ಟು ಇನ್ನು ಹೆಚ್ಚಿನ ಬೆಲೆ ಏರಿಕೆಗೆ ಕಾರಣವಾಗಲಿದ್ದು, ಒಂದು ಬ್ಯಾರೆಲ್​ ಕಚ್ಚಾ ತೈಲಕ್ಕೆ 100 ಡಾಲರ್​ ಗಡಿ ದಾಟಿದರೂ ಅಚ್ಚರಿಪಡಬೇಕಾಗಿಲ್ಲ. ಸಹಜವಾಗಿಯೇ ಕಚ್ಚಾ ತೈಲ ಹೆಚ್ಚಾದಲ್ಲಿ ಜಾಗತಿಕ ಜಿಡಿಪಿ ಮೇಲೆ ತೀವ್ರ ಪರಿಣಾಮವನ್ನು ಬೀರಲಿದೆ.

    ಆರ್ಥಿಕ ಪರಿಣಿತರ ವಿಶ್ಲೇಷಣೆ ಪ್ರಕಾರ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್​ಗೆ 150 ಡಾಲರ್​ ಆದಲ್ಲಿ ಜಾಗತಿಕ ಜಿಡಿಪಿ ಮಟ್ಟ ಶೇ. 0.9ಕ್ಕೆ ಕುಸಿಯಲಿದೆಯಂತೆ. ಕಚ್ಚಾ ತೈಲ ಸಂಬಂಧಿತ ಉತ್ಪನ್ನಗಳು ಸಗಟು ಬೆಲೆ ಸೂಚ್ಯಂಕ (WPI) ಬುಟ್ಟಿಯಲ್ಲಿ 9 ಪ್ರತಿಶತದಷ್ಟು ನೇರ ಪಾಲನ್ನು ಹೊಂದಿವೆ. ಬ್ರೆಂಟ್​ ಕಚ್ಚಾ ತೈಲ ಬೆಲೆ ಏರಿಕೆಯಾದಲ್ಲಿ ಭಾರತದ ಸಗಟು ಬೆಲೆ ಸೂಚ್ಯಂಕದ ಹಣದುಬ್ಬರವನ್ನು ಶೆ. 0.9ರಷ್ಟು ಏರಿಸಲಿದೆ. ರಷ್ಯಾ, ಯೂಕ್ರೇನ್ ಜತೆ ಯುದ್ಧ ಸಾರಿದ್ದೇ ಆದಲ್ಲಿ ಗೃಹಬಳಕೆಯ ನೈಸರ್ಗಿಕ ಅನಿಲ (ಸಿಎನ್​ಜಿ, ಪಿಎನ್​ಜಿ, ಎಲೆಕ್ಟ್ರಿಸಿಟಿ)​ ಹತ್ತು ಪಟ್ಟು ಹೆಚ್ಚಾಗಲಿದೆ.

    ಎಲ್​ಪಿಜಿ, ಸೀಮೆಎಣ್ಣೆ ಸಬ್ಸಿಡಿ ಹೆಚ್ಚಳ
    ಕಚ್ಚಾ ತೈಲ ಬೆಲೆಯಲ್ಲಿ ಏರಿಕೆಯಾದರೆ ಎಲ್​ಪಿಜಿ ಮತ್ತು ಸೀಮೆಎಣ್ಣೆ ಮೇಲಿನ ಸಬ್ಸಿಡಿ ಕೂಡ ಏರಿಕೆಯಾಗುವ ನಿರೀಕ್ಷೆಯಿದೆ.

    ಪೆಟ್ರೋಲ್​, ಡೀಸೆಲ್​ ಬೆಲೆಯಲ್ಲಿ ಏರಿಕೆ
    ಪೆಟ್ರೋಲ್​ ಮತ್ತು ಡೀಸೆಲ್​ ಬೆಲೆಯು ಕಚ್ಚಾ ತೈಲ ಬೆಲೆಯನ್ನು ಅವಲಂಬಿಸಿರುತ್ತದೆ. ಹೀಗಾಗಿ ಕಚ್ಚಾ ತೈಲ ಬೆಲೆಯಲ್ಲಿ ಏರಿಕೆಯಾದರೆ ಸಹಜವಾಗಿಯೇ ಪೆಟ್ರೋಲ್​, ಡೀಸೆಲ್​ ಬೆಲೆಯಲ್ಲೂ ಏರಿಕೆಯಾಗಲಿದೆ. ಈಗಾಗಲೇ 2021ರಿಂದ ಭಾರತದಲ್ಲಿ ಇಂಧನ ದರ ನೂರರ ಗಡಿ ದಾಟಿದ್ದು, ಯೂಕ್ರೇನ್​-ರಷ್ಯಾ ಸಂಘರ್ಷ ಮುಂದುವರಿಸಿದ್ದಲ್ಲಿ, ಮುಂದಿನ ದಿನಗಳಲ್ಲಿ ಇನ್ನಷ್ಟು ದರ ಏರಿಕೆಯಾದರೂ ಅಚ್ಚರಿಪಡಬೇಕಾಗಿಲ್ಲ.

    ಭಾರತದ ಒಟ್ಟು ಆಮದುಗಳಲ್ಲಿ ತೈಲವು ಸುಮಾರು 25 ಪ್ರತಿಶತವನ್ನು ಒಳಗೊಂಡಿದೆ. ಭಾರತವು ತನ್ನ ತೈಲ ಅಗತ್ಯದ ಶೇಕಡಾ 80 ಕ್ಕಿಂತ ಹೆಚ್ಚು ಆಮದು ಮಾಡಿಕೊಳ್ಳುತ್ತದೆ. ತೈಲ ಬೆಲೆಗಳ ಏರಿಕೆಯು ಚಾಲ್ತಿ ಖಾತೆ ಕೊರತೆಯ ಮೇಲೆ ಪರಿಣಾಮ ಬೀರುತ್ತದೆ.

    ಗೋಧಿ ಬೆಲೆಯಲ್ಲಿ ಏರಿಕೆಯಾಗಬಹುದು
    ಒಂದು ವೇಳೆ ಧಾನ್ಯಗಳ ಆಮದಿಗೆ ಅಡಚಣೆ ಉಂಟಾದರೆ, ಇಂಧನ ಆಹಾರ ಹಣದುಬ್ಬರ ಮತ್ತು ಬೆಲೆಯ ಮೇಲೆ ಭಾರೀ ಪರಿಣಾಮ ಬೀರಲಿದೆ. ಗೋಧಿ ರಫ್ತಿನಲ್ಲಿ ರಷ್ಯಾ ಜಗತ್ತಿನಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಉಕ್ರೇನ್​ 4ನೇ ಸ್ಥಾನದಲ್ಲಿದೆ. ಉಭಯ ದೇಶಗಳು ಗೋಧಿಯ ಒಟ್ಟು ಜಾಗತಿಕ ರಫ್ತಿನ ಕಾಲು ಭಾಗವನ್ನು ಹೊಂದಿವೆ. ಸಾಂಕ್ರಮಿಕ ಕಾರಣದಿಂದ ಪೂರೈಕೆ ಸರಪಳಿಯ ಮೇಲೆ ಬೀರಿರುವ ಪರಿಣಾಮದಿಂದ ಜಾಗತಿಕವಾಗಿ ಈಗಾಗಲೇ ಆಹಾರ ದರಗಳು ಏರಿಕೆಯಾಗಿದೆ ಎಂದು ವಿಶ್ವಸಂಸ್ಥೆ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಹೀಗಾಗಿ ಯೂಕ್ರೇನ್​-ರಷ್ಯಾ ಸಂಘರ್ಷ ಮುಂದುವರಿದರೆ ಪೂರೈಕೆ ಸರಪಳಿಯಲ್ಲಿ ಮತ್ತೊಮ್ಮೆ ಏರುಪೇರಾಗುವ ಸಾಧ್ಯತೆ ಇದೆ.

    ಲೋಹಗಳ ದರ ಏರಿಕೆ ಸಾಧ್ಯತೆ
    ರಷ್ಯಾ ಮೇಲೆ ಅನೇಕ ದೇಶಗಳು ಆರ್ಥಿಕ ನಿರ್ಬಂಧ ಹೇರಿರುವ ಕಾರಣ ಮುಂಬರುವ ವಾರಗಳಲ್ಲಿ ಆಟೋಮೋಟಿವ್ ಎಕ್ಸ್​ಹಾಸ್ಟ್​ ಸಿಸ್ಟಮ್​ ಮತ್ತು ಮೊಬೈಲ್​​ ಫೋನ್​ನಲ್ಲಿ ಬಳಸುವ​ ಪಲ್ಲಾಡಿಯಮ್ ಲೋಹದ ದರ ಏರಿಕೆಯಾಗುವ ಭೀತಿ ಇದೆ. ಪಲ್ಲಾಡಿಯಮ್ ರಫ್ತಿನಲ್ಲಿ ಜಾಗತಿಕವಾಗಿ ರಷ್ಯಾ ಮೊದಲ ಸ್ಥಾನದಲ್ಲಿದೆ. (ಏಜೆನ್ಸೀಸ್​)

    ಫಲಿಸಿತು 20 ವರ್ಷಗಳ ಹುಡುಕಾಟದ ಶ್ರಮ: ಪತ್ತೆಯಾದ ವಜ್ರದ ತುಣುಕಿನ ಬೆಲೆ ಕೇಳಿದ್ರೆ ಬೆರಗಾಗ್ತೀರಾ!

    ಮಹಿಳೆಯನ್ನು ಬಲವಂತದ ಸಂಭೋಗಕ್ಕೆ ಕರೆದು ಪೊಲೀಸರ ಅತಿಥಿಯಾದ ವಕೀಲ

    ಮದ್ಯ ಇಟ್ಟುಕೊಂಡಿದ್ದ ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ ಮಲಪುತ್ರನನ್ನು ಬಂಧಿಸಿದ ಪೊಲೀಸರು: ಮುಂದೇನಾಯ್ತು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts