More

    ಅಪ್ಪ ಬಿಜೆಪಿ, ಮಗ ಕಾಂಗ್ರೆಸ್: ಮಾಜಿ ಸಚಿವ ಎ. ಮಂಜು ಕೊಟ್ಟ ಸ್ಪಷ್ಟನೆ ಹೀಗಿದೆ…

    ಹಾಸನ: ನನ್ನ ಮಗ ಮಂತರ್ ಗೌಡನಿಗೆ ಬಿಜೆಪಿಯಿಂದನೇ ಹಾಸನಕ್ಕೆ ವಿಧಾನ ಪರಿಷತ್​ ಚುನಾವಣೆ ಟಿಕೆಟ್ ಸಿಗಬೇಕಿತ್ತು. ಆದರೆ, ಅದು ಹೇಗೆ ತಪ್ಪಿ ಹೋಯ್ತು ಅಂತಾ ಸಮಯ ಬಂದಾಗ ಹೇಳ್ತಿನಿ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಎ. ಮಂಜು ಹೇಳಿದರು,

    ಅಪ್ಪ ಬಿಜೆಪಿ, ಮಗ ಕೊಡಗು ಕಾಂಗ್ರೆಸ್​ ಎಂಎಲ್​ಸಿ ಅಭ್ಯರ್ಥಿ ವಿಚಾರವಾಗಿ ಮಾತನಾಡಿದ ಮಂಜು, ಅಪ್ಪ ಬಿಜೆಪಿ ,ಮಗ ಕಾಂಗ್ರೆಸ್ ಹೇಗೆ ಅನ್ನೊ ಭಾವನೆ ಇದೆ. ಸೋನಿಯಾ ಗಾಂಧಿ, ಮೇನಕಾ ಗಾಂಧಿ ಕಾಂಗ್ರೆಸ್-ಬಿಜೆಪಿ ಬೇರೆ ಬೇರೆ ಪಕ್ಷದಲ್ಲಿಲ್ವ? ಈಗ ದೇವೇಗೌಡರ ಕುಟುಂಬದವರು ಜನತಾದಳ ಅಂತ ಇದ್ದಾರಷ್ಟೆ. ಅವರು ಎಲ್ಲಾ ಪಾರ್ಟಿಯಲ್ಲೂ ಇದ್ದಾರೆ. ಇಲ್ಲಿ ಒಳ ಒಪ್ಪಂದದ ಚುನಾವಣೆ ಮಾಡ್ತಾರೆ. ಆದರೆ, ನಾನು ಅವರಥರ ಅಲ್ಲ ಎಂದರು.

    ಸಿದ್ದರಾಮಯ್ಯ ಭೇಟಿ ವಿಚಾರವಾಗಿ ಮಾತನಾಡಿದ ಅವರು ಆರೋಗ್ಯ ಕೆಟ್ಟ ಸಮಯದಲ್ಲಿ ಅವರು ಭೇಟಿ ಮಾಡಿದ್ದಾರಷ್ಟೇ. ವಿಶ್ವಾಸದಲ್ಲಿ ಡಿಕೆಶಿ, ಸಿದ್ದರಾಮಯ್ಯ, ಕುಮಾರಸ್ವಾಮಿ, ರೇವಣ್ಣ ಎಲ್ಲಾ ಮಾತನಾಡಿಸಿದ್ದಾರೆ. ಅದು ಮುಖ್ಯ ಅಲ್ಲ. ಇದು ಮಾಧ್ಯಮದಲ್ಲಿ ಸೃಷ್ಟಿ ಎಂದರು.

    ಗ್ರಾಮ ಪಂಚಾಯತಿ ನಿಂತು ಗೆದ್ದು ಬಾರದವರನ್ನ ನಮ್ಮ ಜಿಲ್ಲೆಯ ಪ್ರಜ್ಞಾವಂತ ಮತದಾರರು ತಿರಸ್ಕಾರ ಮಾಡ್ತಾರೆ. ಜೆಡಿಎಸ್ ಅಭ್ಯರ್ಥಿ ಸೂರಜ್ ರೇವಣ್ಣ ವಿರುದ್ಧ ದೇವೇಗೌಡರ ಕುಟುಂಬ ಒಳ ಒಪ್ಪಂದದ ರಾಜಕೀಯ ಮಾಡ್ತಾರೆ ಎಂದು ಟೀಕಿಸಿದರು. (ದಿಗ್ವಿಜಯ ನ್ಯೂಸ್​)

    ಟಿಕ್​ಟಾಕ್​ನಿಂದ ಶುರುವಾದ ಲವ್ ಸೂಸೈಡ್​ನಲ್ಲಿ ಅಂತ್ಯ: ಮೊಬೈಲ್​ನಲ್ಲಿದೆ ಪ್ರೇಮಿಗಳಿಬ್ಬರ ಸಾವಿನ ರಹಸ್ಯ

    ಕೇವಲ 99 ರೂ. ಹೆಡ್​ಫೋನ್​ ಆಸೆಗೆ ಗಂಡನ 40 ಲಕ್ಷ ರೂ. ಇನ್ಸುರೆನ್ಸ್​ ಹಣ ಕಳ್ಕೊಂಡ ಮಹಿಳೆ..!

    ನವೆಂಬರ್​-ಡಿಸೆಂಬರಲ್ಲಿ ದೇಶಾದ್ಯಂತ 25 ಲಕ್ಷ ಮದುವೆ: ನಿಯಮ ಪಾಲಿಸದೇ ಕರೊನಾ 3ನೇ ಅಲೆಗೆ ಆಹ್ವಾನ

    ನಿರಂತರ ಮಳೆಯಿಂದ ಬೇಸತ್ತ ಜನತೆಗೆ ಗುಡ್​ನ್ಯೂಸ್​: ಬದಲಾದ ಹವಾಮಾನ ಹಿನ್ನೆಲೆ ಸೈಕ್ಲೋನ್ ಇಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts