More

    VIDEO| ಎಮ್ಮೆ ಮುಂದೆ ವಿಚಿತ್ರವಾಗಿ ಡಾನ್ಸ್​ ಮಾಡಿದ ಹುಡುಗಿ: ಮುಂದೇನಾಯ್ತು ನೀವೇ ನೋಡಿ…

    ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಸಾಕಷ್ಟು ವಿಡಿಯೋಗಳು ಪೋಸ್ಟ್​ ಆಗುತ್ತಿರುತ್ತವೆ. ಅವುಗಳಲ್ಲಿ ಕೆಲವೊಂದು ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿಬಿಡುತ್ತವೆ. ಕೆಲವೊಂದು ವಿಡಿಯೋಗಳು ತುಂಬಾ ಫನ್ನಿಯಾಗಿರುತ್ತವೆ ಮತ್ತು ನೋಡುಗರನ್ನು ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುತ್ತವೆ. ಆ ಸಾಲಿಗೆ ಇದೀಗ ಮತ್ತೊಂದು ವಿಡಿಯೋ ಸೇರ್ಪಡೆಯಾಗಿದೆ.

    ಸದ್ಯ ವೈರಲ್​ ಆಗಿರುವ ವಿಡಿಯೋದಲ್ಲಿ ಹುಡುಗಿಯೊಬ್ಬಳು ಎಮ್ಮೆ ಮುಂದೆ ಡಾನ್ಸ್​ ಮಾಡಿ, ಅದನ್ನು ಕೆರಳಿಸಿ ಗುಮ್ಮಿಸಿಕೊಂಡಿದ್ದಾಳೆ. ಪ್ರಾಣಿಗಳನ್ನು ಕೆಣಕುವುದು ಮೊದಲೇ ತಪ್ಪು. ಅಂತಹುದರಲ್ಲಿ ಎಮ್ಮೆ ಮುಂದೆ ವಿಚಿತ್ರವಾಗಿ ಡಾನ್ಸ್​ ಮಾಡಿದರೆ, ಅದು ಸುಮ್ಮನೆ ಇರುತ್ತದೆಯೇ ಎಂದು ನೆಟ್ಟಿಗರು ವಿಡಿಯೋ ನೋಡಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

    ವಿಡಿಯೋದಲ್ಲಿ ಏನಿದೆ?
    ಬಕೆಟ್​ ಹಿಡಿದು ಬರುವ ಹುಡುಗಿ ಎಮ್ಮೆ ಮುಂದಿರುವ ತೊಟ್ಟಿಗೆ ಬಕೆಟ್​ನಲ್ಲಿದ್ದ ಆಹಾರವನ್ನು ಸುರಿಯುತ್ತಾಳೆ. ಬಳಿಕ ಎಮ್ಮೆ ಮುಂದೆ ವಿಚಿತ್ರವಾಗಿ ಡಾನ್ಸ್​ ಮಾಡುತ್ತಾಳೆ. ಆದರೆ, ಅದರಿಂದ ಕೆರಳುವ ಎಮ್ಮೆ ಆಕೆ ಗುಮ್ಮುತ್ತದೆ. ಬಳಿಕ ಹುಡುಗಿ ಮತ್ತೊಂದು ತೊಟ್ಟಿಯ ಒಳಗೆ ಬೀಳುತ್ತಾಳೆ.

    ಈ ವಿಡಿಯೋವನ್ನು ಸೈಕೋ ಬಿಹಾರಿ ಮತ್ತು ಫನ್​ ಫ್ಯಾಕ್ಟರ್ಸ್​ ಎಂಬ ಇನ್​ಸ್ಟಾಗ್ರಾಂ ಪೇಜ್​ನಲ್ಲಿ ಜುಲೈ 4ರಂದು ಪೋಸ್ಟ್​ ಮಾಡಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. 4 ಲಕ್ಷಕ್ಕೂ ಅಧಿಕ ವೀಕ್ಷಣೆ ಗಿಟ್ಟಿಸಿಕೊಂಡಿದ್ದು, 23 ಸಾವಿರಕ್ಕೂ ಹೆಚ್ಚು ಲೈಕ್ಸ್​ಗಳ ಹರಿದುಬಂದಿವೆ.

    ವಿಡಿಯೋ ಕುರಿತು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಬಹುಶಃ ಹುಡುಗಿ ಎಮ್ಮೆಯನ್ನು ಮೆಚ್ಚಿಸಲು ಯತ್ನಿಸಿರಬೇಕು ಎಂದು ಕೆಲವರು ತಮಾಷೆಯಾಗಿ ತೆಗೆದುಕೊಂಡಿದ್ದಾರೆ. ಇನ್ನು ಕೆಲವರು ಪ್ರಾಣಿಗಳನ್ನು ಕೆರಳಿಸುವುದು ಸರಿಯಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ. ಆದರೂ ವಿಡಿಯೋ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದೆ. (ಏಜೆನ್ಸೀಸ್​)

    ಹುಡುಗಿಯರು ಲೈಂಗಿಕ ಸುಖ ಬಯಸಿದರೆ… ಶಕ್ತಿಮಾನ್​ ಖ್ಯಾತಿಯ ಮುಕೇಶ್​ ಖನ್ನಾ ಹೇಳಿಕೆಗೆ ಭಾರಿ ಆಕ್ರೋಶ!

    VIDEO| ಪ್ರಾಣಿಗಳು ಸಹ ಇದನ್ನು ತಿನ್ನುವುದಿಲ್ಲ: ಊಟದ ತಟ್ಟೆ ಹಿಡಿದು ರಸ್ತೆಯಲ್ಲೇ ಕಣ್ಣೀರಾಕಿದ ಕಾನ್ಸ್​ಟೇಬಲ್​

    ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೂ ತಾಜ್​ಮಹಲ್​ಗಿಲ್ಲ ತ್ರಿವರ್ಣ ದೀಪಗಳ ಅಲಂಕಾರ: ಕಾರಣ ಹೀಗಿದೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts