More

    ರೂಪಾಂತರಿ ಒಮಿಕ್ರಾನ್​ಗೆ ಜರ್ಮನಿಯಲ್ಲಿ ಮೊದಲ ಬಲಿ

    ಬರ್ಲಿನ್​: ಮಹಾಮಾರಿ ಕರೊನಾ ವೈರಸ್​ ರೂಪಾಂತರಿ ಒಮಿಕ್ರಾನ್​ಗೆ ಜರ್ಮನಿಯಲ್ಲಿ ಮೊದಲ ಬಲಿಯಾಗಿದೆ. ಗುರುವಾರ ಒಮಿಕ್ರಾನ್​ ಸೋಂಕಿತನೊಬ್ಬ ಮೃತಪಟ್ಟಿರುವುದಾಗಿ ಜರ್ಮನಿಯ ರಾಬರ್ಟ್ ಕೋಚ್ ಇನ್ಸ್ಟಿಟ್ಯೂಟ್ ತಿಳಿಸಿದೆ.

    ಮೃತ ವ್ಯಕ್ರಿಯು 60 ರಿಂದ 79ರ ನಡುವಿನ ವಯೋಮಾನದವರು ಎಂದು ಇನ್ಸ್ಟಿಟ್ಯೂಟ್ ಹೇಳಿದೆ. ಜರ್ಮನಿಯಲ್ಲಿ 810 ಹೊಸ ಒಮಿಕ್ರಾನ್​ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 3,198ಕ್ಕೆ ಏರಿದೆ.

    ಎಣಿಕೆ ಮಾಡಲಾದ ಪ್ರಕರಣಗಳನ್ನು ಸಂಪೂರ್ಣ ಜೀನೋಮ್ ಸೀಕ್ವೆನ್ಸಿಂಗ್​ ಅಥವಾ ವೇರಿಯಂಟ್​ ಪಿಸಿಆರ್ ಪರೀಕ್ಷೆಯ ಆಧಾರದ ಮೇಲೆ ಪತ್ತೆಹಚ್ಚಲಾಗಿದೆ.

    ಇನ್ನು ಚೀನಾದ ಪಶ್ಚಿಮದ ಕ್ಸಿಯಾನ್ ನಗರದಲ್ಲಿ ಕೋವಿಡ್ ಆಸ್ಪೋಟ ತಡೆಯಲು ಚೀನಾ ಗುರುವಾರ ಲಾಕ್​ಡೌನ್ ವಿಧಿಸಿದೆ. ಇದು ಮಹಾಮಾರಿ ಆಸ್ಪೋಟಗೊಂಡಾಗಿನಿಂದ ಅತಿ ದೊಡ್ಡ ನಿಯಂತ್ರಣ ಕ್ರಮವಾಗಿದೆ. ಕ್ಸಿಯಾನ್ ನಗರದ ಸುಮಾರು 1.3 ಕೋಟಿ ನಿವಾಸಿಗಳಿಗೆ ಮನೆಗಳಲ್ಲೇ ಇರುವಂತೆ ಆದೇಶಿಸಲಾಗಿದೆ. ಅನಗತ್ಯ ಪ್ರವಾಸಗಳನ್ನು ನಿಷೇಧಿಸಲಾಗಿದೆ. ಅಗತ್ಯ ವಸ್ತುಗಳನ್ನು ತರಲು ಪ್ರತಿ ಮನೆಯಿಂದ ಒಬ್ಬರನ್ನು ನಿಯೋಜಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಇದರಿಂದಾಗಿ ಆಹಾರ ವಸ್ತು ಪಡೆಯಲು ಜನರು ಸಾಹಸಪಡುವ ಸನ್ನಿವೇಶ ನಿರ್ವಣವಾಗಿದೆ. ಕ್ಸಿಯಾನ್ ಪ್ರಾಂತ್ಯದ 14 ಜಿಲ್ಲೆಗಳಲ್ಲಿ ಎರಡನೇ ಸುತ್ತಿನ ಸಾಮೂಹಿಕ ಟೆಸ್ಟ್ ನಡೆಸಿದಾಗ 127 ಪಾಸಿಟಿವ್ ಪ್ರಕರಣ ದೃಢಪಟ್ಟ ಹಿನ್ನೆಲೆಯಲ್ಲಿ ಲಾಕ್​ಡೌನ್ ವಿಧಿಸಲಾಗಿದೆ.

    ಭಾರತದಲ್ಲಿ ಕೋವಿಶೀಲ್ಡ್ ಹೆಸರಿನಲ್ಲಿ ಬಳಕೆಯಾಗುತ್ತಿರುವ ಆಕ್ಸ್​ಫರ್ಡ್- ಅಸ್ಟ್ರಾಜೆನಿಕಾ ಲಸಿಕೆಯ ಬೂಸ್ಟರ್ ಡೋಸ್ ಒಮಿಕ್ರಾನ್ ರೂಪಾಂತರಿ ವಿರುದ್ಧ ಪರಿಣಾಮಕಾರಿಯಾಗಲಿದೆ ಎಂದು ಆಸ್ಟ್ರಾಜೆನಿಕಾ ಔಷಧ ಕಂಪನಿ ಗುರುವಾರ ಹೇಳಿದೆ. ಮೂರು ಡೋಸ್ ಲಸಿಕೆಯ ಲ್ಯಾಬ್ ಪ್ರಯೋಗದಿಂದ ಈ ಫಲಿತಾಂಶ ಹೊರಹೊಮ್ಮಿದೆ. ಡೆಲ್ಟಾ ಪ್ರಭೇದದ ವಿರುದ್ಧವೂ ಕೋವಿಶೀಲ್ಡ್ ಬೂಸ್ಟರ್ ಡೋಸ್ ಹೆಚ್ಚಿನ ರಕ್ಷಣೆ ಒದಗಿಸುತ್ತದೆ. ಕೋವಿಡ್ ಸೋಂಕಿತರಾಗಿ ನೈಸರ್ಗಿಕವಾಗಿ ಗುಣಮುಖ ಹೊಂದಿದವರಲ್ಲಿ ಇರುವ ಪ್ರತಿಕಾಯಕ್ಕಿಂತ ಕೋವಿಶೀಲ್ಡ್ ಮೂರನೇ ಡೋಸ್ ಪಡೆದವರಲ್ಲಿ ಹೆಚ್ಚಿರುತ್ತದೆ.

    ದೇಶದಲ್ಲಿ ಹೆಚ್ಚುತ್ತಿರುವ ಕರೊನಾ ವೈರಸ್​ನ ಒಮಿಕ್ರಾನ್ ಪ್ರಭೇದದಿಂದ ಉಂಟಾಗಿರುವ ಆತಂಕಕಾರಿ ಪರಿಸ್ಥಿತಿಯನ್ನು ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ ಗುರುವಾರ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಹೊಸ ತಳಿಯ ಸೋಂಕು ಹೆಚ್ಚಾಗದಂತೆ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಮೋದಿ ಸಭೆಯಲ್ಲಿ ನಿರ್ದೇಶನ ನೀಡಿದರು ಎಂದು ತಿಳಿದು ಬಂದಿದೆ. ದೆಹಲಿ ಮತ್ತು ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗಿದ್ದು ದೇಶದಲ್ಲಿ ಹೊಸ ತಳಿಯ ಕೇಸ್ ಸಂಖ್ಯೆ 300ನ್ನು ದಾಟಿದೆ. ದೆಹಲಿ ಮತ್ತು ಮಹಾರಾಷ್ಟ್ರ ಅಲ್ಲದೆ ತೆಲಂಗಾಣ, ಕರ್ನಾಟಕ, ರಾಜಸ್ಥಾನ, ಕೇರಳ, ಗುಜರಾತ್, ಜಮ್ಮು-ಕಾಶ್ಮೀರ, ಒಡಿಶಾ, ಉತ್ತರ ಪ್ರದೇಶ, ಆಂಧ್ರ ಪ್ರದೇಶ, ಚಂಡೀಗಢ, ಲಡಾಖ್ ಕೂಡ ಒಮಿಕ್ರಾನ್ ಸೋಂಕಿತರು ಕಂಡು ಬಂದಿದ್ದಾರೆ. (ಏಜೆನ್ಸೀಸ್​)

    ಒಮಿಕ್ರಾನ್​ ವಕ್ಕರಿಸುತ್ತಿದ್ದಂತೆ ಈ ಗ್ರಾಮದಲ್ಲಿ 10 ದಿನಗಳ ಕಾಲ ಸ್ವಯಂ ಲಾಕ್​ಡೌನ್​ ಘೋಷಣೆ!

    ಪರೀಕ್ಷೆ ಇಲ್ಲದೇ 10ನೇ ತರಗತಿ ಪಾಸ್​: ಪಿಯು ವಿದ್ಯಾರ್ಥಿನಿಯ ಸಾವಿಗೆ ಕಾರಣವಾಯ್ತು ಆನ್​ಲೈನ್​ ಕ್ಲಾಸ್!​

    ಚೀನಾದಲ್ಲಿ ಲಾಕ್​ಡೌನ್​; ಬ್ರಿಟನ್​ನಲ್ಲಿ ಮುಂದುವರಿದ ಆತಂಕ, ಗರಿಷ್ಠ ದೈನಿಕ ಪ್ರಕರಣ ಪತ್ತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts