More

    10 ವರ್ಷದ ಬಳಿಕ ಜನಾರ್ದನ ರೆಡ್ಡಿ ಬಳ್ಳಾರಿಗೆ ಬಂದ್ರೂ ಮನೆಯಿಂದ ಆಚೆ ಬರುತ್ತಿಲ್ಲವೇಕೆ? ಇಲ್ಲಿದೆ ಅಚ್ಚರಿಯ ಕಾರಣ..!

    ಬಳ್ಳಾರಿ: ಸಾರ್ವಜನಿಕವಾಗಿ ಮಾತನಾಡದಂತೆ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರಿಗೆ ಬಿಜೆಪಿ ಕಡಿವಾಣ ಹಾಕಿದೆ ಎಂಬ ಮಾತುಗಳು ರಾಜಕೀಯ ಪಡಸಾಲೆಯಿಂದ ಕೇಳಿಬರುತ್ತಿದೆ.

    ಈ ಹಿಂದಿನ ಘಟನೆಗಳನ್ನು ಒಮ್ಮೆ ರಿವೈಂಡ್​ ಮಾಡಿರುವ ಬಿಜೆಪಿ, ಮನಸ್ಸಿಗೆ ಬಂದಂತೆ ಮಾತನಾಡಿದರೆ ಪಕ್ಷಕ್ಕೆ ಹೊಡೆತ ಬೀಳಲಿದೆ ಎಂದರಿತು ಗಣಿಧಣಿ ಜನಾರ್ದನ ರೆಡ್ಡಿ ಅವರ ಬಾಯಿಗೆ ಬೀಗ ಹಾಕಿದೆ ಎಂದು ಹೇಳಲಾಗುತ್ತದೆ.

    ಈ ಹಿಂದೆ ಬಳ್ಳಾರಿಗೆ ಬಂದಾಗ ರೆಡ್ಡಿ ಅಡ್ಡದಿಡ್ಡಿ ಮಾತನಾಡಿದ್ದಕ್ಕೆ ಬಿಜೆಪಿಗೆ ಹೊಡೆತ ಬಿದ್ದುತ್ತು. ಹೀಗಾಗಿ ಮಾಧ್ಯಮಗಳು ಸೇರಿದಂತೆ ಯಾರೊಬ್ಬರ ಬಳಿ ಪಕ್ಷದ ವಿಚಾರವಾಗಿ ಮಾತನಾಡದಂತೆ ಬಿಜೆಪಿಯಿಂದ ಸೂಚನೆ ಹೋಗಿದೆ ಎನ್ನಲಾಗುತ್ತಿದೆ.

    2010ರಲ್ಲಿ ಮಾಜಿ ಉಪಮುಖ್ಯಮಂತ್ರಿ ಎಂ.ಪಿ. ಪ್ರಕಾಶ ಸಾವು ಹಾಗೂ 2018ರಲ್ಲಿ ಸಿದ್ದರಾಮಯ್ಯ ಮಗನ ಸಾವಿನ ಬಗ್ಗೆ ರೆಡ್ಡಿ ಹಗುರವಾಗಿ ಮಾತನಾಡಿದ್ದರಿಂದ ಬಿಜೆಪಿಗೆ ಭಾರಿ ಹೊಡೆತ ಬಿದ್ದಿತ್ತು. 2018ರಲ್ಲಿ ಸಿದ್ದರಾಮಯ್ಯ ಮಗನ ಸಾವಿನ ಕುರಿತು ಮಾತನಾಡಿದ್ದರಿಂದ ಆಗ ನಡೆದ ಲೋಕಸಭೆ ಉಪಚುನಾಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪ 2.5 ಲಕ್ಷ ಅಂತರದಿಂದ ಗೆದ್ದರು. ಹೀಗಾಗಿ ರೆಡ್ಡಿ ರಾಜಕೀಯ ವಿಚಾರ ಮಾತನಾಡೋವಾಗ ಮಾತಿನ ಮೇಲೆ ನಿಗಾ ಇರಲಿ ಎನ್ನುವ ಸ್ಪಷ್ಟ ಸಂದೇಶವನ್ನು ಬಿಜೆಪಿ ರವಾನಿಸಿದೆ ಎಂಬ ಮಾತುಗಳು ರಾಜಕೀಯ ವಲಯದಿಂದ ಕೇಳಿಬರುತ್ತಿದೆ.

    ಹೀಗಾಗಿಯೇ ಹತ್ತು ವರ್ಷದ ಬಳಿಕ ರೆಡ್ಡಿ ಬಳ್ಳಾರಿಗೆ ಬಂದ್ರೂ ಕೂಡ ಮನೆಯಿಂದ ಆಚೆ ಬಂದಿಲ್ಲ. ಅಲ್ಲದೆ, ಕಾರ್ಯಕರ್ತರು ಸೇರಿದಂತೆ ಯಾರೊಬ್ಬರನ್ನೂ ಭೇಟಿಯಾಗಿಲ್ಲ. ಬಹಿರಂಗವಾಗಿ ಕಾಣಿಸಿಕೊಳ್ಳದೇ ಕೇವಲ ದೇವಸ್ಥಾನಗಳನ್ನು ರೆಡ್ಡಿ ಸುತ್ತಾಡುತ್ತಿದ್ದಾರೆ. ಇದೆಲ್ಲ ಬಿಜೆಪಿ ಎಫೆಕ್ಟ್​ ಅನ್ನುತ್ತಿದ್ದಾರೆ ಅಲ್ಲಿನ ಕೆಲ ನಾಯಕರುಗಳು. ಆದ್ರೆ ಮುಂದಿನ ದಿನಗಳಲ್ಲಿ ಎಲ್ಲರನ್ನೂ ಭೇಟಿ ಮಾಡ್ತಾರಾ ಅಂತಾ ಕಾದು ನೋಡಬೇಕಿದೆ. (ದಿಗ್ವಿಜಯ ನ್ಯೂಸ್​)

    ಪ್ರಿಯಕರನಿಂದ ಚೂರಿ ಇರಿತ ಪ್ರಕರಣ: ನಿಶ್ಚಿತಾರ್ಥ ನೆರವೇರಿದ ಒಂದೇ ವಾರದಲ್ಲಿ ಯುವತಿ ದುರಂತ ಸಾವು

    ಪುಟ್​ಪಾತ್​ ಮೇಲಿದ್ದ ಕಂಬಕ್ಕೆ ಡಿಕ್ಕಿ: ಭೀಕರ ಅಪಘಾತಕ್ಕೆ 3 ಯುವತಿಯರು ಸೇರಿ 7 ಮಂದಿಯ ದುರಂತ ಅಂತ್ಯ

    ಪುಟ್​ಪಾತ್​ ಮೇಲಿದ್ದ ಕಂಬಕ್ಕೆ ಡಿಕ್ಕಿ: ಭೀಕರ ಅಪಘಾತಕ್ಕೆ 3 ಯುವತಿಯರು ಸೇರಿ 7 ಮಂದಿಯ ದುರಂತ ಅಂತ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts