More

    ಬ್ಲೂ ಫಿಲ್ಮ್ ದಂಧೆ ಪ್ರಕರಣ: ರಾಜ್​ ಕುಂದ್ರಾರಿಗೆ 4 ವಾರಗಳ ರಿಲೀಫ್​ ನೀಡಿದ ಸುಪ್ರೀಂಕೋರ್ಟ್​

    ನವದೆಹಲಿ: ಬ್ಲೂ ಫಿಲ್ಮ್ ದಂಧೆಗೆ ಸಂಬಂಧಿಸಿದ ಹಲವು ಪ್ರಕರಣಗಳಲ್ಲಿ ಒಂದು ಪ್ರಕರಣಕ್ಕೆ ನಟಿ ಶಿಲ್ಪಾ ಶೆಟ್ಟಿ ಪತಿ ಹಾಗೂ ಉದ್ಯಮಿ ರಾಜ್​ ಕುಂದ್ರಾರಿಗೆ ಸುಪ್ರೀಂಕೋರ್ಟ್​ ಬುಧವಾರ ನಾಲ್ಕು ವಾರಗಳ ರಿಲೀಫ್​ ನೀಡಿದೆ.

    ನಾಲ್ಕು ವಾರಗಳ ಕಾಲ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಕುಂದ್ರಾರನ್ನು ಬಂಧಿಸದಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್​ ನೋಟಿಸ್​ ನೀಡಿದೆ. ನಿರೀಕ್ಷಣಾ ಜಾಮೀನು ನೀಡಲು ಬಾಂಬೆ ಹೈಕೋರ್ಟ್ ನ. 25ರಂದು ನಿರಾಕರಿಸಿದ್ದರಿಂದ ಕುಂದ್ರಾ ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದರು.

    ವಿಡಿಯೋಗಳು ಎರೋಟಿಕ್​ ವಿಡಿಯೋಗಳಾಗಿದ್ದು, ಅದರಲ್ಲಿ ಯಾವುದೇ ದೈಹಿಕ ಮತ್ತು ಲೈಂಗಿಕ ಚಟುವಟಿಕೆಯನ್ನು ಪ್ರದರ್ಶಿಸಿಲ್ಲ ಎಂದು ಹೈಕೋರ್ಟ್​ಗೆ ಸಲ್ಲಿಸಿದ್ದ ಅರ್ಜಿಯಲ್ಲಿ ಕುಂದ್ರಾ ಉಲ್ಲೇಖಿಸಿದ್ದರು. ಅಲ್ಲದೆ, ಅಶ್ಲೀಲ ವಿಡಿಯೋಗಳನ್ನು ನಿರ್ಮಿಸುವ ಹಾಗೂ ಪ್ರಚಾರ ಮಾಡುವುದರಲ್ಲಿ ನನ್ನ ಪಾತ್ರ ಇಲ್ಲ. ಈ ಪ್ರಕರಣದಲ್ಲಿ ತಪ್ಪಾಗಿ ನನ್ನನ್ನು ಸಿಲುಕಿಸಲಾಗಿದೆ ಎಂದು ಹೇಳಿದ್ದರು. ಆದರೆ, ಹೈಕೋರ್ಟ್​ ನಿರೀಕ್ಷಣಾ ಜಾಮೀನನ್ನು ತಿರಸ್ಕರಿಸಿತ್ತು. ಅಲ್ಲದೆ, ಇದೇ ಪ್ರಕರಣದಲ್ಲಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದ ಇತರೆ ಐವರಿಗೂ ಬಾಂಬೆ ಹೈಕೋರ್ಟ್​ ಜಾಮೀನು ನಿರಾಕರಿಸಿತ್ತು. ನಟಿ ಪೂನಮ್​ ಪಾಂಡೆ ಮತ್ತು ಶೆರ್ಲಿನ್​ ಚೋಪ್ರಾ ಕೂಡ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು.

    ಅಶ್ಲೀಲ ವಿಡಿಯೋ ಪ್ರಕರಣದ ತನಿಖೆ ನಡೆಸುತ್ತಿದ್ದ ಮುಂಬೈ ಕ್ರೈಂ ಬ್ರಾಂಚ್​ ಕಳೆದ ಜುಲೈನಲ್ಲಿ ರಾಜ್​ ಕುಂದ್ರಾರನ್ನು ಬಂಧಿಸಿತ್ತು. ಅಶ್ಲೀಲ ವಿಡಿಯೋಗಳನ್ನು ನಿರ್ಮಿಸಿ, ಅವುಗಳನ್ನು ಚಂದಾದಾರ ಆಧಾರಿತ ಮೊಬೈಲ್​ ಆ್ಯಪ್​ಗಳ ಮೂಲಕ ವಿತರಣೆ ಮಾಡುತ್ತಿದ್ದ ಆರೋಪದ ಮೇಲೆ ಬಂಧಿಸಲಾಗಿತ್ತು. ಕಳೆದ ಸೆಪ್ಟೆಂಬರ್​ನಲ್ಲೇ ಈ ಪ್ರಕರಣ ಸಂಬಂಧ 50 ಸಾವಿರ ಬಾಂಡ್​ ಶ್ಯೂರಿಟಿಯೊಂದಿಗೆ ಜಾಮೀನು ದೊರಕಿತ್ತು.

    ಆದರೆ, ಇನ್ನು ಕೆಲವು ಪ್ರಕರಣಗಳು ಕುಂದ್ರಾ ಮೇಲಿವೆ, ಹೀಗಾಗಿ ಯಾವುದೇ ಕ್ಷಣದಲ್ಲಿ ಬಂಧನವಾಗುವ ಭೀತಿ ಕುಂದ್ರಾಗಿದೆ. ಹೀಗಾಗಿ ಬಾಂಬೆ ಹೈಕೋರ್ಟ್​ ಜಾಮೀನು ನಿರಾಕರಿಸಿದ್ದರಿಂದ ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದ ಕುಂದ್ರಾಗೆ ಸದ್ಯ ನಾಲ್ಕು ವಾರಗಳ ರಿಲೀಫ್​ ಸಿಕ್ಕಿದೆ. (ಏಜೆನ್ಸೀಸ್​)

    ಇತಿಹಾಸದಲ್ಲೇ ಮೊದಲ ಬಾರಿಗೆ ಸೂರ್ಯನನ್ನು ಸ್ಪರ್ಶಿಸಿತು ನಾಸಾದ ಪಾರ್ಕರ್​ ಸೋಲಾರ್​ ಪ್ರೋಬ್​!

    ಸಿದ್ದರಾಮಯ್ಯ ವೇಸ್ಟ್ ಬಾಡಿ, ಅವನ ಕಥೆ ಮುಗಿದಿದೆ: ಏಕವಚನದಲ್ಲೇ ರಮೇಶ್​ ಜಾರಕಿಹೊಳಿ ವಾಗ್ದಾಳಿ

    ಅಬ್ಬಬ್ಬಾ, ಅಡುಗೆ ಮನೆಯ ಕಿಟಕಿ ಮುರಿದು ಆಹಾರ ದೋಚಿದ ಆನೆ! ಸಖತ್​ ವೈರಲ್​ ಆಗ್ತಿದೆ ಈ ವಿಡಿಯೋ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts