More

    VIDEO| ಊಟದಲ್ಲಿ ಹಾವಿನ ತಲೆ ಕಂಡು ಬೆಚ್ಚಿಬಿದ್ದ ವಿಮಾನ ಸಿಬ್ಬಂದಿ: ಭಯಾನಕ ವಿಡಿಯೋ ವೈರಲ್​!

    ಅಂಕಾರ: ಊಟದಲ್ಲಿ ಕ್ರಿಮಿ ಕೀಟಗಳು ಇರುವುದನ್ನು ನೋಡಿದ್ದೇವೆ. ಅಷ್ಟೇ ಯಾಕೆ ಹಲ್ಲಿ ಬಿದ್ದಿರುವುದನ್ನು ಕೇಳಿದ್ದೇವೆ. ಆದರೆ, ಹಾವಿನ ತಲೆ ಊಟದಲ್ಲಿ ಸಿಗುತ್ತದೆ ಅಂದರೆ, ಅದಕ್ಕಿಂತ ಭಯಾನಕ ಸಂಗತಿ ಮತ್ತೊಂದಿಲ್ಲ. ಇದೀಗ ಇಂಥದ್ದೆ ಅನುಭವ ಟರ್ಕಿ ಮೂಲದ ಏರ್​ಲೈನ್​​ ಕಂಪನಿಯ ಸಿಬ್ಬಂದಿ ಒಬ್ಬರಿಗೆ ಆಗಿದೆ. ವಿಮಾನದಲ್ಲಿ ತಮಗೆ ಸಿಕ್ಕ ಊಟದಲ್ಲಿ ಹಾವಿನ ತಲೆ ಕಂಡು ಕಂಗಾಲಾಗಿದ್ದಾರೆ.

    ಈ ಬಗ್ಗೆ ನಾಗರಿಕ ವಿಮಾನಯಾನ ಬ್ಲಾಗ್​ ಒನ್​ ಮೈಲ್​ ಅಟ್​ ಎ ಟೈಮ್​ ವರದಿ ಮಾಡಿದೆ. ಜುಲೈ 21ರಂದು ಟರ್ಕಿಯ ರಾಜಧಾನಿ ಅಂಕಾರದಿಂದ ಜರ್ಮನಿಯ ಡುಸ್ಸೆಲ್​ಡಾರ್ಫ್​ಗೆ ತೆರಳುತ್ತಿದ್ದ ಸನ್​ ಎಕ್ಸ್​ಪ್ರೆಸ್​​ ವಿಮಾನದಲ್ಲಿ ಈ ಘಟನೆ ನಡೆದಿದೆ. ಸಿಬ್ಬಂದಿಗಾಗಿ ನೀಡಲಾಗಿದ್ದ ಊಟವನ್ನು ಸೇವಿಸುತ್ತಿದ್ದೆವು. ಈ ವೇಳೆ ಬೇಯಿಸಿದ ಆಲುಗೆಡ್ಡೆ ಮತ್ತು ತರಕಾರಿಗಳ ನಡುವೆ ಸಣ್ಣ ಹಾವಿನ ಎಲೆ ಇರುವುದನ್ನು ನೋಡಿದೆವು ಎಂದು ಸಿಬ್ಬಂದಿಯೊಬ್ಬರು ಹೇಳಿದ್ದಾರೆ.

    ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಹ್ಯಾಂಡಿ ಜೋ ಹೆಸರಿನ ಟ್ವಿಟರ್​ ಖಾತೆಯಲ್ಲಿ ಶೇರ್​ ಮಾಡಿಕೊಳ್ಳಲಾಗಿದೆ. ವಿಡಿಯೋದಲ್ಲಿ ಹಾವಿನ ಶಿರಚ್ಛೇದಿತ ತಲೆಯು ಆಹಾರದ ತಟ್ಟೆಯ ಮಧ್ಯದಲ್ಲಿ ಬಿದ್ದಿರುವುದನ್ನು ಕಾಣಬಹುದಾಗಿದೆ.

    ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಏರ್​ಲೈನ್​ ಕಂಪನಿ ತಕ್ಷಣ ಪ್ರತಿಕ್ರಿಯೆ ನೀಡಿದೆ. ಸನ್​ಎಕ್ಸ್​ಪ್ರೆಸ್​ ಕಂಪನಿಯ ಪ್ರತಿನಿಧಿಯೊಬ್ಬರು ಟರ್ಕಿಯ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದು, ಈ ಘಟನೆ ಸಂಪೂರ್ಣವಾಗಿ ಸ್ವೀಕಾರ್ಹವಲ್ಲ. ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಆಹಾರ ಒಪ್ಪಂದಕ್ಕೆ ತಡೆಹಿಡಿಯಲಾಗಿದ್ದು, ಉತ್ತರ ನೀಡುವಂತೆ ಕೇಳಿದ್ದೇವೆ. ಈ ಕುರಿತು ತನಿಖೆಯನ್ನು ಆರಂಭಿಸಿದ್ದೇವೆ ಎಂದು ಹೇಳಿದ್ದಾರೆ.

    ವಿಮಾನಯಾನ ಇಂಡಸ್ಟ್ರಿಯಲ್ಲಿ 30 ವರ್ಷಕ್ಕೂ ಹೆಚ್ಚು ಕಾಲದ ಅನುಭವದಲ್ಲಿ ನಮ್ಮ ಅತಿಥಿಗಳಿಗೆ ಮತ್ತು ಸಿಬ್ಬಂದಿಗೆ ಉತ್ತಮ ಗುಣಮಟ್ಟದ ಸೇವೆಯನ್ನು ಒದಗಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ. ಅವರು ಸುರಕ್ಷಿತ ಹಾಗೂ ನೆಮ್ಮದಿಯುತ ಪ್ರಯಾಣ ಅನುಭವಿಸೇಬೇಕೆಂಬುದೇ ನಮ್ಮ ಆಶಯವಾಗಿದೆ ಎಂದು ಏರ್​ಲೈನ್​ ಕಂಪನಿ ಮಾಧ್ಯಮಕ್ಕೆ ನೀಡಿರುವ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

    ಇನ್ನೊಂದೆಡೆ ವಿಮಾನಕ್ಕೆ ಆಹಾರ ಸರಬರಾಜು ಮಾಡಿರುವ ಕ್ಯಾಟರಿಂಗ್​ ಕಂಪನಿ ಆರೋಪವನ್ನು ನಿರಾಕರಿಸಿದೆ. ಹಾವಿನ ತಲೆಯು ಅವರ ಸೌಲಭ್ಯಗಳಿಂದಲೇ ಹುಟ್ಟಿಕೊಂಡಿರಬಹುದು ಎಂದಿದ್ದಾರೆ. ನಾವು 280 ಡಿಗ್ರಿ ಸೆಲ್ಸಿಯಸ್​ನಲ್ಲಿ ಆಹಾರವನ್ನು ಬೇಯಿಸುತ್ತೇವೆ. ಇದೀಹ ಹಾವಿನ ತಲೆ ಸ್ಪಷ್ಟವಾಗಿ ಕಾಣುವುದನ್ನು ನೋಡಿದರೆ, ಆಹಾರವನ್ನು ಸರಬರಾಜು ಮಾಡಿದ ಮೇಲೆ ಅದಕ್ಕೆ ಸೇರಿಸಿರುವ ರೀತಿಯಲ್ಲಿ ಕಾಣುತ್ತಿದೆ ಎಂದು ಕಂಪನಿ ಹೇಳಿದೆ. (ಏಜೆನ್ಸೀಸ್​)

    ನೀವು ಹೀಗೆ ಮಾಡಿದ್ರೆ ಮೊಸಳೆಗಳು ನಿಮ್ಮನ್ನು ಕಚ್ಚದೇ ಬಿಡುವುದಿಲ್ಲ: ಬಿಜೆಪಿಗೆ ಸಿಎಂ ಮಮತಾ ವಾರ್ನಿಂಗ್​

    ಕೂಡ್ಲಿಗಿಯಲ್ಲಿ ಯುವತಿಯ ರುಂಡ ಕಡಿದು ಠಾಣೆಗೆ ತಂದಿದ್ದ ಆರೋಪಿ ವಿರುದ್ಧ ದಾಖಲಾಯ್ತು ಮತ್ತೊಂದು ಕೇಸ್​!

    ಮಾಲಕಿಯನ್ನೇ ಭೀಕರವಾಗಿ ಕೊಂದ ಪಿಟ್​ಬುಲ್​ ಶ್ವಾನವನ್ನು ದತ್ತು ಪಡೆಯಲು ಜನರು ಮುಗಿಬೀಳುತ್ತಿರುವುದೇಕೆ!?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts