More

    ಉಳುಮೆಗೆ ಹೊರಟ ರೈತನಿಗೆ ಪೆಟ್ರೋಲ್ ಸುರಿದು ಬೆಂಕಿ: ದಾಯಾದಿಯಿಂದ ಅಮಾನವೀಯ ಕೃತ್ಯ

    ಬೆಂಗಳೂರು ಗ್ರಾಮಾಂತರ: ವಿವಾದಿತ ಜಮೀನಿನಲ್ಲಿ ಹೊಲ ಉಳುಮೆಗೆ ಟ್ರ್ಯಾಕ್ಟರ್ ತಂದಿದ್ದ ವ್ಯಕ್ತಿ ಮೇಲೆ ಪೆಟ್ರೋಲ್ ಸುರಿದು ದಾಯಾದಿಗಳು ಬೆಂಕಿ ಹಚ್ಚಿರುವ ಪ್ರಕರಣ ಭಾನುವಾರ ದೊಡ್ಡಬಳ್ಳಾಪುರ ತಾಲೂಕು ಮಾಕಳಿ ಗ್ರಾಮದಲ್ಲಿ ನಡೆದಿದೆ.

    65 ವರ್ಷದ ರಾಮಯ್ಯ ಸುಟ್ಟಗಾಯಗಳಿಂದ ನರಳುತ್ತಿದ್ದು, ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ, ಈ ಮಧ್ಯೆ ಘಟನೆಯಲ್ಲಿ ಪುತ್ರ ಲಕ್ಷ್ಮೀನಾರಾಯಣನಿಗೂ ಬೆಂಕಿ ತಗಲಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

    ದಾಯಾದಿಗಳಾದ ವೆಂಕಟೇಶ್ ಹಾಗೂ ರಾಮಯ್ಯ ಕುಟುಂಬದ ನಡುವೆ ಹಿಂದಿನಿಂದಲೂ ವೈಷಮ್ಯವಿತ್ತು, ಉಳುಮೆ ಮಾಡಲು ಹೊರಟಿದ್ದ ಜಮೀನನ ಆಸ್ತಿ ಬಗ್ಗೆ ಬಹಳ ವರ್ಷದಿಂದ ಎರಡೂ ಕುಟುಂಬದ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಭಾನುವಾರ ಬಾಡಿಗೆ ಟ್ರ್ಯಾಕ್ಟರ್ ಪಡೆದು ವಿವಾದಿತ ಜಮೀನಿಗೆ ಕಾಲಿಟ್ಟ ರಾಮಯ್ಯ ಹಾಗೂ ಮಗನ ಮೇಲೆ ದಾಯಾದಿ ವೆಂಕಟೇಶ್ ಹಾಗೂ ಮತ್ತಿಬ್ಬರು ಜಗಳ ತೆಗೆದಿದ್ದಾರೆ, ಜಗಳ ತಾರಕ್ಕೇರಿದಾಗ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿದೆ.

    ಪೂರ್ವ ನಿಯೋಜನೆಯಂತೆ ಆರೋಪಿ ವೆಂಕಟೇಶ್ ಜಮೀನಿನಲ್ಲಿ ಪೆಟ್ರೋಲ್ ತಂದುಟ್ಟುಕೊಂಡಿದ್ದ ಎನ್ನುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹೊಸಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಒಟ್ಟಿಗೆ ಬಾಳಲು ಬಿಡ್ತಿಲ್ಲ ನಮಗೆ ರಕ್ಷಣೆ ಕೊಡಿ… ಎಸ್ಪಿ ಮುಂದೆ ಕಣ್ಣೀರಿಟ್ಟ ಯುವತಿಯರು!

    ಅಸಾನಿ ಚಂಡಮಾರುತ ಸೃಷ್ಟಿ: 27 ಜಿಲ್ಲೆಗಳಲ್ಲಿ ನಾಳೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ

    ಬಿಕಿನಿ ಫೋಟೋಗಳನ್ನು ಹರಿಬಿಟ್ಟು ಪಡ್ಡೆ ಹುಡುಗರ ನಿದ್ದೆಗೆಡಿಸಿದ ಮಸ್ತ್​ ಮೊಹಬ್ಬತ್​ ಬೆಡಗಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts