More

    ಹೆಣ್ಣು ಮಗು ಜನಿಸಿದ ಖುಷಿ: ಹೆಲಿಕಾಪ್ಟರ್​ ಮೂಲಕ ಮಗಳನ್ನು ಅದ್ಧೂರಿಯಾಗಿ ಮನೆಗೆ ಬರಮಾಡಿಕೊಂಡ ತಂದೆ!

    ಪುಣೆ: ಹೆಣ್ಣು ಮಕ್ಕಳು ಜನಿಸಿದರೆ ಮೂಗು ಮುರಿಯುವ ಮಂದಿ ಈಗಲೂ ಇರುವುದು ದುರಾದೃಷ್ಟಕರ. ಸಾಂಸ್ಕೃತಿಕ ನಂಬಿಕೆಗಳು, ಸಾಮಾಜಿಕ ನಿಯಮಗಳು, ವರದಕ್ಷಿಣೆ ಮತ್ತು ಬಡತನ ಮುಂತಾದ ಕಾರಣಗಳಿಂದ ಹೆಣ್ಣು ಮಕ್ಕಳೆಂದರೆ ಕೆಲವರು ಯೋಚಿಸುತ್ತಾರೆ. ಇನ್ನು ಕೆಲವರು ಹೆಣ್ಣು ಮಕ್ಕಳನ್ನು ಅನಾಥವಾಗಿ ಎಸೆದು ಬಂದ ಉದಾಹರಣೆಗಳು ಇವೆ. ಆದರೆ, ಇಲ್ಲೊಂದು ಕುಟುಂಬ ಹೆಣ್ಣು ಮಗು ಜನಿಸಿದ್ದಕ್ಕೆ ಮಗುವನ್ನು ಬರಮಾಡಿಕೊಂಡ ರೀತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

    ಹೆಣ್ಣು ಮಗು ಜನಸಿದ ಖುಷಿಯಲ್ಲಿ ಮಹಾರಾಷ್ಟ್ರದ ಪುಣೆ ಜಿಲ್ಲೆಯ ಖೇಡ್ ತಾಲೂಕಿನಲ್ಲಿರುವ ಕುಟುಂಬವೊಂದು ಹೆಣ್ಣು ಮಗುವನ್ನು ತಮ್ಮ ಮನೆಗೆ ಬರ ಮಾಡಿಕೊಳ್ಳಲು ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಹೆಲಿಕಾಪ್ಟರ್ ಬುಕ್​ ಮಾಡಿದ ಕುಟುಂಬ ಹೆಣ್ಣು ಮಗುವನ್ನು ಚಾಪರ್​ ಮೂಲಕ ಕರೆತರುವುದರೊಂದಿಗೆ ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ.

    ಹೆಣ್ಣು ಮಗುವಿನ ಹೆಸರು ರಾಜಲಕ್ಷ್ಮಿ. ಕಳೆದ ಜನವರಿ 22 ರಂದು ತನ್ನ ತಾಯಿಯ ತವರು ಭೋಸಾರಿಯಲ್ಲಿ ಹುಟ್ಟಿದಳು. ಮಗುವನ್ನು ಖೇಡ್‌ನ ಶೆಲ್ಗಾಂವ್​ನಲ್ಲಿರುವ ಗಂಡನ ಮನೆಗೆ ಕರೆತರಲು ಪತಿಯ ಕುಟುಂಬವೇ ಹೆಲಿಕಾಪ್ಟರ್ ವ್ಯವಸ್ಥೆ ಮಾಡಿತು. ಹೆಲಿಕಾಪ್ಟರ್​ನಲ್ಲಿ ಆಗಮಿಸಿದ ಹೆಣ್ಣು ಮಗುವನ್ನು ಸ್ವಾಗತಿಸಲು ಹೂವಿನ ದಳಗಳನ್ನು ಹಾಕಲಾಯಿತು. ತಾಯಿ ಮತ್ತು ಹೆಣ್ಣು ಮಗುವನ್ನು ಗುಲಾಬಿ ದಳಗಳ ಮಳೆಯ ಮೂಲಕ ಅದ್ಧೂರಿಯಾಗಿ ಸ್ವಾಗತಿಸಲಾಯಿತು.

    ದಂಪತಿಗಳು ಮಗುವಿನೊಂದಿಗೆ ಆಗಮಿಸುತ್ತಿದ್ದಂತೆ, ಹೆಲಿಕಾಪ್ಟರ್ ಲ್ಯಾಂಡಿಂಗ್ ಮತ್ತು ನವಜಾತ ಶಿಶುವಿಗೆ ಕುಟುಂಬದಿಂದ ಭವ್ಯ ಸ್ವಾಗತವನ್ನು ನೋಡಲು ಇಡೀ ಗ್ರಾಮದ ಜನರೆಲ್ಲರು ಒಂದೆಡೆ ಸೇರಿದ್ದರು.

    ಈ ಬಗ್ಗೆ ಮಾತನಾಡಿರುವ ಹೆಣ್ಣು ಮಗುವಿನ ತಂದೆ ವಿಶಾಲ್ ಝರೇಕರ್, ನಮ್ಮ ಇಡೀ ಕುಟುಂಬದಲ್ಲಿ ನಮಗೆ ಹೆಣ್ಣು ಮಗು ಇರಲಿಲ್ಲ, ಆದ್ದರಿಂದ, ನಮ್ಮ ಮಗಳು ನಮಗೆ ವಿಶೇಷವಾಗಿದ್ದು, ನಾವು 1 ಲಕ್ಷ ರೂಪಾಯಿ ಮೌಲ್ಯದ ಚಾಪರ್ ರೈಡ್ ಅನ್ನು ಏರ್ಪಡಿಸಿದ್ದೆವು ಎಂದು ತಿಳಿಸಿದ್ದಾರೆ.

    ಬಹಳ ದಿನಗಳ ನಂತರ ನಮ್ಮ ಮನೆಯಲ್ಲಿ ಹೆಣ್ಣು ಮಗು ಜನಿಸಿದ್ದು, ಸಂತಸ ಅಪಾರವಾಗಿದೆ. ಹಾಗಾಗಿ ನಾನು ಮತ್ತು ನನ್ನ ಹೆಂಡತಿ ರಾಜಲಕ್ಷ್ಮಿ ಅವರನ್ನು ಏಪ್ರಿಲ್ 2 ರಂದು ಹೆಲಿಕಾಪ್ಟರ್‌ನಲ್ಲಿ ಮನೆಗೆ ಕರೆತಂದಿದ್ದೇವೆ. ನಾವು ದೇವರ ಆಶೀರ್ವಾದ ಪಡೆಯಲು ಜೆಜೂರಿಗೆ ಹೋಗಿದ್ದೆವು, ಆದರೆ ನಮಗೆ ಅನುಮತಿಯಿಲ್ಲದ ಕಾರಣ. ಆ ಭೂಮಿಗೆ, ನಾವು ಆಕಾಶದಿಂದಲೇ ಪ್ರಾರ್ಥಿಸಿದೆವು ಎಂದು ವಿಶಾಲ್ ಝರೇಕರ್ ಹೇಳಿದರು. (ಏಜೆನ್ಸೀಸ್​)

    ನಿಮಗೋಸ್ಕರ ಟೀ ಶರ್ಟ್​ ಬಿಚ್ತೀನಿ: ವೀಕ್ಷಕರಿಗೆ ಕೊಟ್ಟ ಭರವಸೆ ಉಳಿಸಿಕೊಂಡ ಪೂನಂ ಪಾಂಡೆ!

    ಥೂ ಇದೆಂಥಾ ಅಸಹ್ಯ? ಮೂವರು ಬಾಲಕರ ಜತೆ ಗುಂಪು ಲೈಂಗಿಕ ಕ್ರಿಯೆ ನಡೆಸಿದ ಶಿಕ್ಷಕಿ! ವಿಡಿಯೋ ವೈರಲ್​

    ಮಂಡ್ಯದ ಮುಸ್ಕಾನ್​ಗೆ ಅಲ್​ಖೈದಾ ಮುಖ್ಯಸ್ಥನಿಂದ ಶಹಬ್ಬಾಸ್​ಗಿರಿ! ಆಕೆ ಹೆಸರಲ್ಲಿ ಕವನ ಬರೆದು ವಿಡಿಯೋ ಬಿಡುಗಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts