More

    ಎಲ್​ಪಿಜಿ ಸಿಲಿಂಡರ್​ ಮೇಲೆ ಕೇಂದ್ರಕ್ಕಿಂತ ರಾಜ್ಯ ಸರ್ಕಾರ ಇಷ್ಟೊಂದು ತೆರಿಗೆ ಪಡೆಯುತ್ತಾ? ಇಲ್ಲಿದೆ ಅಸಲಿ ವಿಚಾರ!

    ನವದೆಹಲಿ: ಇಂಧನ ದರ ಏರಿಕೆಯ ನಡುವೆಯೇ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್​ ಒಂದು ವೈರಲ್​ ಆಗಿದ್ದು, ಅದರಲ್ಲಿ ಎಲ್​ಪಿಜಿ ಸಿಲಿಂಡರ್​ ಮೇಲೆ ಕೇಂದ್ರ ಸರ್ಕಾರ ಕೇವಲ 5 ರಷ್ಟು ಮಾತ್ರ ತೆರಿಗೆ ವಿಧಿಸಿದರೆ, ರಾಜ್ಯ ಸರ್ಕಾರ 55 ರಷ್ಟು ತೆರಿಗೆ ಪಡೆಯುತ್ತದೆ ಎಂದು ಬರೆಯಲಾಗಿದೆ.

    ಎಲ್​ಪಿಜಿ ಸಿಲಿಂಡರ್​ ಬೆಲೆ ಎಂದು ತೋರಿಸಲಾಗಿರುವ ಪೋಸ್ಟರ್​ ಅನ್ನು ಅನೇಕ ಫೇಸ್​ಬುಕ್​ ಬಳಕೆದಾರರು ಶೇರ್​ ಮಾಡಿಕೊಂಡಿದ್ದು, ದೇಶದಲ್ಲಿ ಎಲ್​ಪಿಜಿ ಬೆಲೆ ಏರಿಕೆಗೆ ರಾಜ್ಯ ಸರ್ಕಾರದ ತೆರಿಗೆಯೇ ಕಾರಣ ಎಂದು ಆರೋಪಿಸಿದ್ದಾರೆ. ಆದರೆ, ವೈರಲ್​ ಪೋಸ್ಟ್​ನಲ್ಲಿ ಉಲ್ಲೇಖವಾಗಿರುವುದು ಸುಳ್ಳು ಮತ್ತು ಇದರ ಹಿಂದೆ ಅಪಪ್ರಚಾರದ ಉದ್ದೇಶವಿದೆ ಎಂಬುದು ಇಂಡಿಯಾ ಟುಡೆ ಆ್ಯಂಟಿ ನ್ಯೂಸ್​ ಫೇಕ್​ ನ್ಯೂಸ್​ ವಾರ್​ ರೂಮ್​ ನಡೆಸಿದ ಫ್ಯಾಕ್ಟ್​ಚೆಕ್​ ಮೂಲಕ ತಿಳಿದುಬಂದಿದೆ.

    ಎಲ್​ಪಿಜಿ ಸಿಲಿಂಡರ್​ ಮೇಲೆ ಕೇಂದ್ರಕ್ಕಿಂತ ರಾಜ್ಯ ಸರ್ಕಾರ ಇಷ್ಟೊಂದು ತೆರಿಗೆ ಪಡೆಯುತ್ತಾ? ಇಲ್ಲಿದೆ ಅಸಲಿ ವಿಚಾರ!

    ಅಂದಹಾಗೆ ಎಲ್​ಪಿಸಿ ಸಿಲಿಂಡರ್​ ಜಿಎಸ್​ಟಿ ಅಡಿಯಲ್ಲಿ ಬರುತ್ತದೆ. ಗೃಹ ಬಳಕೆಯ ಎಲ್​ಪಿಜಿ ಸಿಲಿಂಡರ್​ಗೆ ಶೇ 5 ರಷ್ಟು ಜಿಎಸ್​ಟಿ ವಿಧಿಸಲಾಗಿದ್ದು, ಕೇಂದ್ರ ಮತ್ತು ರಾಜ್ಯಗಳ ನಡುವೆ ಸಮಾನವಾಗಿ ವಿಂಗಡಿಸಲಾಗಿದೆ. ಹೀಗಾಗಿ ಎಲ್‌ಪಿಜಿ ಸಿಲಿಂಡರ್‌ಗೆ ವಿಧಿಸುವ ತೆರಿಗೆಗಳಲ್ಲಿ ಯಾವುದೇ ಅಸಮಾನತೆ ಕಂಡುಬರುವುದಿಲ್ಲ.

    ಇನ್ನು ವೈರಲ್​ ಪೋಸ್ಟ್​ನಲ್ಲಿ ಗೃಹಬಳಕೆ ಅಥವಾ ವಾಣಿಜ್ಯಾತ್ಮಕ ಬಳಕೆ, ಇದರಲ್ಲಿ ಯಾವ ಸಿಲಿಂಡರ್​ ಬಗ್ಗೆ ಹೇಳಿದ್ದಾರೆ ಎಂಬ ಉಲ್ಲೇಖವಿಲ್ಲ. ಅಲ್ಲದೆ, ಇದು ಯಾವ ರಾಜ್ಯದ ತೆರಿಗೆ ಪದ್ಧತಿ ಎಂಬುದನ್ನು ತಿಳಿಸಿಲ್ಲ. ಏಕೆಂದರೆ ಎಲ್​ಪಿಜಿ ಬೆಲೆ ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತಿರುತ್ತದೆ.

    ಮೂರು ಪೆಟ್ರೋಲಿಯಂ ಉತ್ಪನ್ನಗಳಲ್ಲಿ ಎಲ್​ಪಿಜಿಯು ಒಂದು. ಕಳೆದ ಕೆಲ ವರ್ಷಗಳಿಂದ ಇದು ಜಿಎಸ್​ಟಿ ಅಡಿಯಲ್ಲಿ ಸೇರಿಸಲಾಗಿದೆ. ಗೃಹಬಳಕೆಯ ಎಲ್​ಪಿಜಿ ಜಿಎಸ್​ಟಿಯ ಶೇ 5 ರಷ್ಟು ಸ್ಲ್ಯಾಬ್​ ಅಡಿಯಲ್ಲಿ ಬರುತ್ತದೆ. ಕೇಂದ್ರ (2.5) ಮತ್ತು ರಾಜ್ಯ (2.5) ಸರ್ಕಾರಗಳ ನಡುವೆ ಸಮಾನವಾಗಿ ಹಂಚಿಕೆಯಾಗಿರುತ್ತದೆ. ಹೀಗಾಗಿ ಎಲ್‌ಪಿಜಿ ಸಿಲಿಂಡರ್‌ಗೆ ವಿಧಿಸುವ ತೆರಿಗೆಗಳಲ್ಲಿ ಯಾವುದೇ ಅಸಮಾನತೆ ಕಂಡುಬರುವುದಿಲ್ಲ.

    ಇಂಡಿಯನ್ ಆಯಿಲ್ ಕಾರ್ಪೊರೇಶನ್‌ನ ಗ್ಯಾಸ್ ಏಜೆನ್ಸಿಯ ಎಲ್‌ಪಿಜಿ ಸಿಲಿಂಡರ್‌ನ ಇತ್ತೀಚಿನ ಮೂಲ ಗ್ರಾಹಕ ರಶೀದಿಯನ್ನು ನೋಡಿದರೆ, ಶೇಕಡಾ 5 ರಷ್ಟು ಜಿಎಸ್‌ಟಿ ಶುಲ್ಕವನ್ನು ವಿಧಿಸಿರುವುದು ಖಚಿತವಾಗಿದೆ. ಎಲ್‌ಪಿಜಿ ದರ ಜಿಎಸ್‌ಟಿ ವ್ಯಾಪ್ತಿಗೆ ಬರುವುದರಿಂದ, ರಾಜ್ಯ ಸರ್ಕಾರವು ಕೇಂದ್ರಕ್ಕಿಂತ ಹೆಚ್ಚಿನ ತೆರಿಗೆಯನ್ನು ಅನುಭವಿಸುವ ಪ್ರಶ್ನೆಯೇ ಇಲ್ಲ ಎಂದು ಅಧಿಕಾರಿಯೊಬ್ಬರು ಇಂಡಿಯಾ ಟುಡೆಗೆ ತಿಳಿಸಿದ್ದಾರೆ.

    ಭಾರತದಲ್ಲಿ ಎಲ್‌ಪಿಜಿ ಬೆಲೆಯನ್ನು ಹಲವಾರು ಅಂಶಗಳಿಂದ ನಿರ್ಧರಿಸಲಾಗುತ್ತದೆ. ಇದನ್ನು ಆಮದು ಸಮಾನತೆ ಬೆಲೆ (ಐಪಿಪಿ) ಸೂತ್ರದ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಎಲ್‌ಪಿಜಿ ಬೆಲೆಗಳ ಆಧಾರದ ಮೇಲೆ ಐಪಿಪಿಯನ್ನು ನಿರ್ಧರಿಸಲಾಗುತ್ತದೆ. ಏಕೆಂದರೆ ಭಾರತವು ಇಂಧನವನ್ನು ಹೆಚ್ಚಾಗಿ ಆಮದು ಮಾಡಿಕೊಳ್ಳುತ್ತದೆ.

    ಎಫ್‌ಒಬಿ (ಫ್ರೀ ಆನ್​ ಬೋರ್ಡ್​) ಬೆಲೆ, ಸಾಗರ ಸರಕು ಸಾಗಣೆ, ವಿಮೆ, ಕಸ್ಟಮ್ಸ್ ಸುಂಕ, ಬಂದರು ಬಾಕಿ ಸೇರಿದಂತೆ ಇತ್ಯಾದಿಗಳನ್ನು ಒಳಗೊಂಡಿರುವ ಸೌದಿ ಸರಾಮ್ಕೋ ಎಲ್​ಪಿಜಿ ಬೆಲೆಯ ಆಧಾರದ ಮೇಲೆ ಐಪಿಪಿ ಅನ್ನು ನಿರ್ಧರಿಸಲಾಗುತ್ತದೆ. ಡಾಲರ್‌ಗಳಲ್ಲಿ ಉಲ್ಲೇಖಿಸಲಾದ ಬೆಲೆಯನ್ನು ನಂತರ ರೂಪಾಯಿಗಳಾಗಿ ಪರಿವರ್ತಿಸಲಾಗುತ್ತದೆ. ಅದರನಂತರ ಒಳನಾಡಿನ ಸರಕು ಸಾಗಣೆ ವೆಚ್ಚ, ಮಾರುಕಟ್ಟೆ ವೆಚ್ಚಗಳು ಮತ್ತು ತೈಲ ಕಂಪನಿಗಳು ವಿಧಿಸುವ ಸೇವಾ ಶುಲ್ಕ, ಬಾಟ್ಲಿಂಗ್ ಶುಲ್ಕಗಳು, ಡೀಲರ್​ ಕಮಿಷನ್​ ಮತ್ತು ಜಿಎಸ್‌ಟಿ ಎಲ್ಲವನ್ನೂ ಸೇರಿಸಲಾಗುತ್ತದೆ.

    ದೇಶದ ವಿವಿಧ ಸ್ಥಳಗಳಲ್ಲಿನ ಸಾರಿಗೆ ವೆಚ್ಚವು ವಿಭಿನ್ನ ರಾಜ್ಯಗಳ ನಡುವೆ ಒಂದೇ ದಿನ ಎಲ್‌ಪಿಜಿ ಬೆಲೆಯಲ್ಲಿನ ವ್ಯತ್ಯಾಸವನ್ನು ನಿರ್ಧರಿಸುತ್ತದೆ. ಪ್ರತಿ ಮನೆಗೆ ವರ್ಷಕ್ಕೆ 12 ದೇಶೀಯ ಎಲ್‌ಪಿಜಿ ಸಿಲಿಂಡರ್‌ಗಳನ್ನು (14.2 ಕೆಜಿ) ನೀಡಲಾಗುತ್ತದೆ. ಎಲ್​ಪಿಜಿಗೆ ಕೇಂದ್ರ ಸರ್ಕಾರದಿಂದ ಸಬ್ಸಿಡಿ ಸಹ ಸಿಗಲಿದ್ದು, ಅದನ್ನು ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆ ಮಾಡುತ್ತದೆ. ವರ್ಷಕ್ಕೆ 12 ಸಿಲಿಂಡರ್‌ಗಳನ್ನು ಮೀರಿದರೆ, ಸಬ್ಸಿಡಿ ರಹಿತ ಬೆಲೆಯನ್ನು ಪಾವತಿಸಬೇಕಾಗುತ್ತದೆ. ಭಾರತ ಸರ್ಕಾರ ಪ್ರತಿ ತಿಂಗಳು ಎಲ್‌ಪಿಜಿ ಬೆಲೆಯನ್ನು ಪರಿಷ್ಕರಿಸುತ್ತದೆ.

    ಒಟ್ಟಾರೆ ಮಾಹಿತಿಯ ಆಧಾರದ ಮೇಲೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಎಲ್​ಪಿಜಿ ತೆರಿಗೆ ಕುರಿತಾದ ಪೋಸ್ಟ್​ ಒಂದು ನಕಲಿ. ಇದರ ಹಿಂದೆ ಅಪಪ್ರಚಾರದ ದುರುದ್ದೇಶವಿದೆ ಎಂದು ತಿಳಿದುಬಂದಿದೆ. (ಏಜೆನ್ಸೀಸ್​)

    ಮಗುವಿಗಾಗಿ ಮಗಳನ್ನೇ ಮದುವೆಯಾದನಾ 75ರ ವೃದ್ಧ!? ವೈರಲ್​ ಫೋಟೋ ಕುರಿತ ಅಸಲಿ ಕಹಾನಿ ಇಲ್ಲಿದೆ

    Fact Check| ಮಧುರ ಕಂಠದ ಈ ಗಾಯಕಿ ದಿಗ್ಗಜ ಗಾಯಕ ಯೇಸುದಾಸ್​ ಮೊಮ್ಮಗಳಲ್ಲ, ಮತ್ಯಾರು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts