More

    ಪ. ಬಂಗಾಳ ಚುನಾವಣಾ ಬೆನ್ನಲ್ಲೇ ಯುವತಿಯ ಅತ್ಯಾಚಾರ, ಕೊಲೆ? ಫ್ಯಾಕ್ಟ್​ಚೆಕ್​ನಲ್ಲಿ ಸತ್ಯಾಂಶ ಬಯಲು!

    ಕೋಲ್ಕತ: ಪಶ್ಚಿಮ ಬಂಗಾಳ ಚುನಾವಣಾ ಫಲಿತಾಂಶದ ಬಳಿಕ ನಡೆದ ಅತ್ಯಾಚಾರ ಮತ್ತು ಕೊಲೆಯ ಸಂತ್ರಸ್ತೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹುಡುಗಿಯೊಬ್ಬಳ ಅನೇಕ ಫೋಟೋಗಳು ವೈರಲ್​ ಆಗುತ್ತಿದೆ. ಆದರೆ, ಈ ಕುರಿತು ನಡೆದ ಫ್ಯಾಕ್ಟ್​ಚೆಕ್​ನಲ್ಲಿ ಅಸಲಿ ಸತ್ಯ ಬಯಲಾಗಿದೆ.

    ಅನೇಕ ಫೇಸ್​ಬುಕ್​ ಮತ್ತು ಟ್ವಿಟರ್​ ಬಳಕೆದಾರರು ಹುಡುಗಿಯ ಫೋಟೋವನ್ನು ಶೇರ್​ ಮಾಡಿಕೊಂಡಿದ್ದಾರೆ. ಬಿಜೆಪಿಗೆ ಬೆಂಬಲ ನೀಡಿದ್ದಕ್ಕೆ ಪಶ್ಚಿಮ ಬಂಗಾಳದ ಪಶ್ಚಿಮ ಮಿದ್ನಾಪೊರ್​ ಜಿಲ್ಲೆಯ 20 ವರ್ಷದ ಯುವತಿಯನ್ನು ರೊಹಿಂಗ್ಯಾ ಮತ್ತು ಬಾಂಗ್ಲಾದೇಶಿ ಜಿಹಾದಿಗಳು ಅತ್ಯಾಚಾರ ಗೈದು ಕೊಲೆ ಮಾಡಿದ್ದಾರೆ ಎಂದು ಫೋಟೋಗೆ ಅಡಿಬರಹ ಬರೆಯಲಾಗಿದ್ದು, ಇದೀಗ ಫೋಟೋ ಸಿಕ್ಕಾಪಟ್ಟೆ ವೈರಲ್​ ಆಗಿ ಭಾರಿ ಚರ್ಚೆ ಆಗುತ್ತಿದೆ.

    ಪ. ಬಂಗಾಳ ಚುನಾವಣಾ ಬೆನ್ನಲ್ಲೇ ಯುವತಿಯ ಅತ್ಯಾಚಾರ, ಕೊಲೆ? ಫ್ಯಾಕ್ಟ್​ಚೆಕ್​ನಲ್ಲಿ ಸತ್ಯಾಂಶ ಬಯಲು!

    ಈ ಮಾಹಿತಿ ಎಷ್ಟು ಸತ್ಯ ಎಂಬುದನ್ನು ತಿಳಿಯಲು ಇಂಡಿಯಾ ಟುಡೆ ಆ್ಯಂಟಿ ಫೇಕ್​ ನ್ಯೂಸ್​ ವಾರ್​ ರೂಮ್​ ಫ್ಯಾಕ್ಟ್​ಚೆಕ್​ ನಡೆಸಿದಾಗ ಅಸಲಿ ಮಾಹಿತಿ ಬಹಿರಂಗವಾಗಿದೆ. ಹುಡುಗಿ ರೇಪ್​ ಅಂಡ್​ ಮರ್ಡರ್​ ಆಗಿರುವುದು ಸತ್ಯ. ಆದರೆ, ಕುಟುಂಬಸ್ಥರು ಹೇಳುವ ಪ್ರಕಾರ ಈ ಪ್ರಕರಣಕ್ಕೆ ಯಾವುದೇ ಕೋಮು ಅಥವಾ ರಾಜಕೀಯ ಲಿಂಕ್​ ಇಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಮೇಸನ್​ ಮತ್ತು ಯುವತಿ ಕುಟುಂಬಕ್ಕೆ ಸೇರಿದ ಓರ್ವನನ್ನು ಬಂಧಿಸಲಾಗಿದೆ. ಇಲ್ಲಿ ಸಂತ್ರಸ್ತೆ ಮತ್ತು ಆರೋಪಿಗಳು ಒಂದೇ ಧರ್ಮಕ್ಕೆ ಸೇರಿದವರಾಗಿದ್ದಾರೆ.

    ಇಂಡಿಯಾ ಟುಡೆ ಜತೆ ಮಾತನಾಡಿರುವ ಸಂತ್ರಸ್ತೆ ತಂದೆ, ಘಟನೆ ರಾಜಕೀಯ ಲಿಂಕ್​ ಇರುವುದನ್ನು ತಳ್ಳಿಹಾಕಿದ್ದಾರೆ. ಊಟದ ಬಳಿಕ ಎಂದಿನಂತೆಯೇ ಮಗಳು ಪಾತ್ರೆಗಳನ್ನು ಸ್ವಚ್ಛ ಮಾಡಲು ತೆರಳಿದಳು. ಆದರೆ, ಅಂದಿನಿಂದ ಅವಳು ನಾಪತ್ತೆಯಾದಳು. ನಾವು ಎಲ್ಲಾ ಕಡೆ ಹುಡುಕಾಡಿದೆವು. ಕೊನೆಗೆ ನಮ್ಮ ಮನೆಯ ಸಮೀಪ ಇರುವ ನಿರ್ಮಾಣ ಹಂತದ ಕಟ್ಟಡದಲ್ಲಿ ಅವಳ ಮೃತದೇಹ ಪತ್ತೆಯಾಯಿತು. ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ಓರ್ವ ಮಹಿಳೆ ಮತ್ತು ಇಬ್ಬರು ಮೇಸನ್​ ವಿರುದ್ಧ ನಾನು ಎಫ್​ಐಆರ್​ ದಾಖಲಿಸಿದೆವು ಎಂದು ಹೇಳಿದ್ದಾರೆ.

    ಎಫ್​ಐಆರ್​ ಆಧಾರದ ಮೇಲೆ ಪಿಂಗ್ಲಾ ಪೊಲೀಸರ ಮೂವರು ಆರೋಪಿಗಳನ್ನು ಬಂಧಿಸುತ್ತಾರೆ. ಅವರನ್ನು ಬೆಲ್ದ ಮೂಲದ ಬಿ ಮರ್ಮು, ಜಾರ್ಖಂಡ್​ ಮೂಲದ ಚೋಟು ಮುಂಡಾ ಮತ್ತು ಸಬಾಂಗ್​ನ ತಾಪತಿ ಪತ್ರಾ ಎಂದು ಗುರುತಿಸಲಾಗಿದೆ.

    ಪ್ರಕರಣ ಬಗ್ಗೆ ಮಾತನಾಡಿರುವ ಖರಗ್​ಪುರ್​ನ ಹೆಚ್ಚುವರಿ ಎಸ್​ಪಿ, ಪ್ರಕರಣಕ್ಕೆ ಯಾವುದೇ ಕೋಮು ಮತ್ತು ರಾಜಕೀಯ ಆ್ಯಂಗಲ್​ ಇಲ್ಲ. ಎಫ್​ಐಆರ್​ ಆಧಾರದ ಮೇಲೆ ಮೂವರನ್ನು ಬಂಧಿಸಲಾಗಿದೆ. ಮೂವರು ಸಹ ಎಸ್​ಸಿ/ಎಸ್​ಟಿ ಸಮುದಾಯದವರು. ಅವರು ತಪ್ಪೊಪ್ಪಿಕೊಂಡಿದ್ದಾರೆ. ಡಿಎನ್​ಎ ವರದಿಯಲ್ಲೂ ರೇಪ್​ ಆಗಿರುವುದು ಖಚಿತವಾಗಿದೆ ಎಂದು ತಿಳಿಸಿದ್ದಾರೆ.

    ಪಶ್ಚಿಮ ಬಂಗಾಳ ಚುನಾವಣೆ ಬಳಿಕ ನಡೆದಿರುವ ಹಿಂಸಾಚಾರದ ಬಗ್ಗೆ ಅನೇಕ ವರದಿಗಳು ಆಗಿವೆ. ಆದರೆ, ಈ ನಿರ್ದಿಷ್ಟ ಅತ್ಯಾಚಾರ ಮತ್ತು ಕೊಲೆ ಘಟನೆ ಈ ಹಿಂಸಾಚಾರಕ್ಕೆ ಸಂಬಂಧಿಸಿದ್ದಲ್ಲ ಎಂಬುದು ಫ್ಯಾಕ್ಟ್​ಚೆಕ್​ನಿಂದ ಬಯಲಾಗಿದೆ. ಇದರ ಹಿಂದೆ ಅಪಪ್ರಚಾರ ಮಾಡುವ ಉದ್ಚೇಶವಿದೆ ಎಂಬುದು ಸ್ಪಷ್ಟವಾಗಿದೆ. (ಏಜೆನ್ಸೀಸ್​)

    ನೇಪಾಳದಲ್ಲಿ ಬಹುಮತ ಕಳೆದುಕೊಂಡ ಸರ್ಕಾರ

    ಡೇವಿಡ್ ವಾರ್ನರ್ ನಾಯಕತ್ವ ಕಳೆದುಕೊಳ್ಳಲು ‘ಆ ಒಂದು ಹೇಳಿಕೆ’ ಕಾರಣ ಎಂದ ಇಂಗ್ಲೆಂಡ್‌ನ ಮಾಜಿ ಆಟಗಾರ..!

    ಕಲಬುರಗಿಯಲ್ಲಿ ಹಿಂದೂಪರ ಸಂಘಟನೆ ಕಾರ್ಯಕರ್ತನ ಭೀಕರ ಕೊಲೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts