More

    500 ರೂ. ನೋಟಿನಲ್ಲಿ ಹಸಿರು ಪಟ್ಟಿಯು ಗಾಂಧಿ ಫೋಟೋ ಬಳಿಯಿದ್ದರೆ ಅದು ನಕಲಿನಾ? ಇಲ್ಲಿದೆ ನಿಜಾಂಶ!

    ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಸಾವಿರಾರು ಫೋಟೋ ಮತ್ತು ವಿಡಿಯೋಗಳು ಹರಿದಾಡುತ್ತಿರುತ್ತವೆ. ಹಾಗಂತ ಅವೆಲ್ಲವನ್ನು ಸತ್ಯ ಎಂದು ನಂಬಬಾರದು. ಪರಿಶೀಲಿಸುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು. ಏಕೆಂದರೆ, ಅವುಗಳಲ್ಲಿ ಕೆಲವೊಂದು ಸುಳ್ಳುಗಳು ಇರುತ್ತವೆ. ಅದರಲ್ಲೂ ನಕಲಿ ನೋಟಿಗೆ ಸಂಬಂಧಿಸಿದ ಅನೇಕ ಫೋಟೋ-ವಿಡಿಯೋಗಳನ್ನು ನೋಡಿದ್ದೇವೆ. ನಕಲಿ ನೋಟು ಹಾಗೂ ನಾಣ್ಯವನ್ನು ಪತ್ತೆಹಚ್ಚುವ ಟ್ರಿಕ್ಸ್​ ಗೊತ್ತಿದೆ ಎಂದು ಸಾಮಾಜಿ ಜಾಲತಾಣದಲ್ಲಿ ಹೇಳಿಕೊಳ್ಳುವ ಮಂದಿಯು ಇದ್ದಾರೆ.

    ಇತ್ತೀಚೆಗೆ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್​ ಆಗಿದೆ. ಹೊಸ 500 ರೂಪಾಯಿ ನೋಟಿನಲ್ಲಿ ಹಸಿರು ಪಟ್ಟಿಯು ಮಹಾತ್ಮ ಗಾಂಧಿ ಫೋಟೋ ಬಳಿಯಿದ್ದರೆ ಅದು ನಕಲಿ ನೋಟೆಂದು ಮತ್ತು ಹಸಿರು ಪಟ್ಟಿಯು ಆರ್​ಬಿಐ ಗವರ್ನರ್​ ಹಸ್ತಾಕ್ಷರದ ಬಳಿ ಇದ್ದರೆ ಅದು ಅಧಿಕೃತ ನೋಟೆಂದು ಹೇಳಿ ವಿಡಿಯೋವೊಂದನ್ನು ವೈರಲ್​ ಮಾಡಿದ್ದಾರೆ. ಇದು ನಿಜಾನಾ? ಅಥವಾ ಸುಳ್ಳಾ? ಎಂಬ ಗೊಂದಲ್ಲಿ ಅನೇಕರಿದ್ದು, ಅವರ ಸಂಶಯಗಳಿಗೆ ಉತ್ತರ ಇಲ್ಲಿದೆ.

    ಈ ವದಂತಿ ಹರಿದಾಡುತ್ತಿದ್ದಂತೆ ಈ ಬಗ್ಗೆ ಪ್ರೆಸ್​ ಇನ್ಫರ್ಮೇಶನ್​ ಬ್ಯೂರೋ (ಪಿಐಬಿ) ಫ್ಯಾಕ್ಟ್​ಚೆಕ್​ ಮಾಡಿದೆ. ಪಿಐಬಿ ಪ್ರಕಾರ ಇದೊಂದು ಸಂಪೂರ್ಣ ವದಂತಿಯಾಗಿದ್ದು, ಎರಡು ನೋಟುಗಳು ಕೂಡ ಸ್ವೀಕೃತವಾಗಿದೆ. ಅಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋ ನಕಲಿ ಎಂದು ಪಿಐಬಿ ತಿಳಿಸಿದೆ.

    ಪಿಐಬಿ ಫ್ಯಾಕ್ಟ್ ಚೆಕ್, ವರ್ಗೀಯವಾಗಿ ಎರಡೂ ರೀತಿಯ ನೋಟುಗಳನ್ನು ವಿವರಿಸುವ ವೀಡಿಯೊವನ್ನು ಪೋಸ್ಟ್ ಮಾಡಿದೆ ಮತ್ತು ಎರಡೂ ನೋಟುಗಳು ನಿಜವಾದ ಕರೆನ್ಸಿ ನೋಟುಗಳಾಗಿವೆ ಎಂದು ಹೇಳಿದೆ. ಅಲ್ಲದೆ, ಭಾರತೀಯ ರಿಸರ್ವ್ ಬ್ಯಾಂಕ್ ಒದಗಿಸಿದ ಪಿಡಿಎಫ್​ ಫೈಲ್ ಅನ್ನು ಸಹ ಪಿಐಬಿ ಲಗತ್ತಿಸಿದ್ದು, ನೈಜ ಮತ್ತು ನಕಲಿ ಕರೆನ್ಸಿಗಳ ನಡುವೆ ವ್ಯತ್ಯಾಸವನ್ನು ಕಂಡುಹಿಡಿಯಲು ಜನರಿಗೆ ಸಹಾಯ ಮಾಡುತ್ತದೆ. (ಏಜೆನ್ಸೀಸ್​)

    ಎನ್ಇಟಿ ಪರೀಕ್ಷೆಯಲ್ಲಿ ಹಿಂದಿ ಹೇರಿಕೆ: ಕೇಂದ್ರದ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಆಕ್ರೋಶ

    ಅಶ್ಲೀಲವಾಗಿ ಸೊಂಟ ಬಳುಕಿಸಿದ ಸನ್ನಿ ಲಿಯೋನ್​ಗೆ ಇನ್ನು ಮೂರೇ ದಿನ ಟೈಂ! ಕಂಗಾಲಾಗಿ ಕೈಮುಗಿದ ಕಂಪನಿ

    ಹೊಸ ಗೂಡಲ್ಲಿ ಭರವಸೆಯ ಬದುಕಿನ ಪುಟ ತೆರೆದ ನಾಗಮ್ಮಜ್ಜಿ!; ವಿಜಯವಾಣಿ, ದಾನಿಗಳ ನೆರವಿಗೆ ಭಾವುಕ ಕೃತಜ್ಞತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts