More

    ಪ್ರತಿನಿತ್ಯ ಯೋಗ ಸಾಧನೆಯಿಂದ ಮನಸ್ಸಿನ ಹತೋಟಿ ಸಾಧ್ಯ: ಡಾ. ಡಿ.ಎಸ್. ಒಡೆಯರ್

    ಬೆಂಗಳೂರು: ಬಿಎಂಟಿಸಿ ಚಾಲಕರ ಮತ್ತು ನಿರ್ವಾಹಕರ ಪುನರ್ಮನನ ತರಬೇತಿಯ ಅಂಗವಾಗಿ ವಡ್ಡರಹಳ್ಳಿ ಬಿಎಂಟಿಸಿ ತರಬೇತಿ ಕೇಂದ್ರದಲ್ಲಿ ಕಾರ್ಯಾಗಾರ ನಡೆಯಿತು.

    ನೆಲಮಂಗಲ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯ ಹಿರಿಯ ಮೋಟಾರು ವಾಹನ ನಿರೀಕ್ಷಕ ಡಾ. ಡಿ.ಎಸ್. ಒಡೆಯರ್ ಮಾತನಾಡಿದರು. ‘‘ಸಂಶೋಧನೆ ಪ್ರಕಾರ ಶೇಕಡ 90ರಷ್ಟು ಅಪಘಾತಗಳು ಚಾಲಕನ ತಪ್ಪಿನಿಂದ ಉಂಟಾಗುತ್ತವೆ. ರಸ್ತೆ ಅಪಘಾತಕ್ಕೆ ಕಾರಣ ಅತಿ ವೇಗ ಮತ್ತು ನಿರ್ಲಕ್ಷೃದ ಚಾಲನೆ. ಚಾಲಕರು ಪ್ರತಿನಿತ್ಯ ಕರ್ತವ್ಯದಲ್ಲಿ ಅನುಭವಿಸುವ ದೈಹಿಕ, ಮಾನಸಿಕ ಒತ್ತಡವೂ ಅಪಘಾತಗಳಿಗೆ ಕಾರಣ ಎಂದು ಹೇಳಿದರು.

    ಪ್ರತಿ ನಿತ್ಯ ಸೂರ್ಯ ನಮಸ್ಕಾರ, ಪ್ರಾಣಾಯಾಮ, ಧ್ಯಾನ ಮಾಡಿದರೆ ದೈಹಿಕ ಮತ್ತು ಮಾನಸಿಕ ಒತ್ತಡ ನಿವಾರಣೆ ಮಾಡಿಕೊಳ್ಳಬಹುದು’’ ಎಂದು ಹೇಳಿದರು. ಸುಮಾರು 56 ಚಾಲಕರು ಮತ್ತು ನಿರ್ವಾಹಕರಿಗೆ ಪ್ರಾಯೋಗಿಕವಾಗಿ ತರಬೇತಿ ನೀಡಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯಸ್ಥ ರಾಜೀವಲೋಚನ ಉಪಸ್ಥಿತರಿದ್ದರು.

    ಯುವತಿಯ ಸಂಕಲ್ಪಕ್ಕೆ ಸಿಕ್ತು ಜಯ: ಅಂತೂ ಇಂತೂ ಎಚ್.ರಾಂಪುರಕ್ಕೆ ರೋಡು ಆಯ್ತು, KSRTC ಬಸ್ಸೂ ಬಂತು!

    ಡೆತ್​ನೋಟ್​ ಬರೆದಿಟ್ಟು ಸಕಲೇಶಪುರ ಪುರಸಭೆ ಕಂದಾಯ ಅಧಿಕಾರಿ ಆತ್ಮಹತ್ಯೆಗೆ ಶರಣು

    ಆರ್​ಜಿವಿ ಸಂದರ್ಶನದಲ್ಲಿ ಲೈಂಗಿಕತೆ ಬಗ್ಗೆ ಬಿಚ್ಚು ಮಾತು: ನಟಿ ಆಶು ರೆಡ್ಡಿ ಕುಟುಂಬದಲ್ಲಿ ಅಲ್ಲೋಲ ಕಲ್ಲೋಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts