More

    ಮೊಸಳೆ ವೇಗವಾಗಿ ಓಡೋದನ್ನ ಎಂದಾದ್ರೂ ನೋಡಿದ್ದೀರಾ? ಈ ವಿಡಿಯೋ ನೋಡಿದ್ರೆ ನಿಮ್ಮ ಹುಬ್ಬೇರೋದು ಗ್ಯಾರೆಂಟಿ

    ನವದೆಹಲಿ: ಮೊಸಳೆ ಎಂಬ ಪದ ಕೇಳಿದರೆ ಸಾಕು ಎಲ್ಲರ ಕೈ-ಕಾಲು ನಡುಗುತ್ತದೆ. ಬಹುಶಃ ಆಸ್ಟ್ರೇಲಿಯನ್ ಝೂಕೀಪರ್ ದಿವಂಗತ ಸ್ಟೀವ್​ ಇರ್ವಿನ್​ ಮಾತ್ರ ಮೊಸಳೆ ಪದ ಕೇಳಿದರೆ ಎಲ್ಲಿಲ್ಲದ ಉತ್ಸಾಹ ಬರುತ್ತಿತ್ತು. ಮೊಸಳೆಯ ಹರಿತವಾದ ಹಲ್ಲು, ದೊಡ್ಡ ದವಡೆ ಮತ್ತು ತೀವ್ರ ನೋಟ ಸಾಕು ಯಾವುದೇ ವ್ಯಕ್ತಿ ಭಯ ಬೀಳಲು, ಅಂತಹುದರಲ್ಲಿ ಮೊಸಲೇ ಏನಾದರೂ ತುಂಬಾ ಹತ್ತಿರಕ್ಕೆ ಬಂದಲ್ಲಿ ಆ ವ್ಯಕ್ತಿ ಭಯದಲೇ ಹೆಪ್ಪುಗಟ್ಟಿಬಿಡುತ್ತಾನೆ

    ಇನ್ನು ಮೊಸಳೆ ನೀರನಲ್ಲಿ ವೇಗವಾಗಿ ಈಜುವಷ್ಟು ನೆಲದ ಮೇಲೆ ಓಡುವುದಿಲ್ಲ. ತುಂಬಾ ಮಂದಗತಿಯ ಉಭಯವಾಸಿ ಎಂಬುದು ಎಲ್ಲರಿಗೂ ತಿಳಿದೇ ಇದೆ. ಆದರೆ, ಮೊಸಳೆಗಳು ವೇಗವಾಗಿ ಓಡಬಲ್ಲದು ಎಂಬುದನ್ನು ಈ ವಿಡಿಯೋ ನಿರೂಪಿಸಿದೆ. ಮೊಸಳೆಯ ಅಪರೂಪದ ವಿಡಿಯೋವನ್ನು ಭಾರತೀಯ ಅರಣ್ಯಾಧಿಕಾರಿ (ಐಎಫ್​ಎಸ್​) ಸುಶಾಂತ್​ ನಂದ ಅವರು ತಮ್ಮ ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಆ ವಿಡಿಯೋ ನೋಡುಗರ ಎದೆ ನಡುಗಿಸುವಂತಿದೆ.

    ವಿಡಿಯೋದಲ್ಲಿ ಏನಿದೆ?
    ವ್ಯಕ್ತಿಯೊಬ್ಬ ಮೊಸಳೆ ಇರುವ ಬೇಲಿಯ ಒಳಗಡೆ ಪ್ರವೇಶಿಸುತ್ತಾನೆ. ಇದರಿಂದ ಕೆಂಡಾಮಂಡಲವಾಗುವ ಮೊಸಳೆ ಆ ವ್ಯಕ್ತಿಯನ್ನು ಅಟ್ಟಿಸಿಕೊಂಡು ಬರುವುದು ವಿಡಿಯೋದಲ್ಲಿದೆ. ಗಮನಾರ್ಹವೆಂದರೆ, ಮೊಸಳೆಯು ಜಿಗಿಯುತ್ತಾ, ವೇಗವಾಗಿ ವ್ಯಕ್ತಿಯ ಕಡೆ ಬರುತ್ತಿರುವುದನ್ನು ನೋಡಿದರೆ, ಮೊಸಳೆ ಹೀಗೂ ಓಡುತ್ತಾ ಎಂಬ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಮೂಡುವುದು ಖಂಡಿತ.

    ಸುಶಾಂತ್​ ನಂದ ಅವರು ಶೇರ್​ ಮಾಡಿಕೊಂಡಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ಈಗಾಗಲೇ 50 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಸಾವಿರಕ್ಕೂ ಹೆಚ್ಚು ಮಂದಿ ವಿಡಿಯೋವನ್ನು ಲೈಕ್​ ಮಾಡಿದ್ದಾರೆ. ವಿಡಿಯೋ ನೋಡಿ ನಿಮಗೆ ಏನನಿಸಿತು ಎಂಬುದನ್ನು ಕಾಮೆಂಟ್​ ಮಾಡಿ ನಮಗೆ ತಿಳಿಸಿ…(ಏಜೆನ್ಸೀಸ್​)

    ಆರ್ಥಿಕ ಪ್ರಗತಿ ಆಶಾದಾಯಕ: ಮೊದಲ ತ್ರೖೆಮಾಸಿಕದಲ್ಲಿ ಜಿಡಿಪಿ ದರ ಶೇ.15.7ಕ್ಕೆ ವೃದ್ಧಿಸುವ ನಿರೀಕ್ಷೆ

    ಡಿವೋರ್ಸ್​ ವದಂತಿಗೆ ಬ್ರೇಕ್​: 1 ತಿಂಗಳು ತವರಿಗೆ ಹೋಗ್ತೀನೆಂದು ಹೆಂಡ್ತಿ ಹೇಳಿದ್ದಕ್ಕೆ ಕುಣಿದು ಕುಪ್ಪಳಿಸಿದ ಚಹಾಲ್​

    ಭಾರತದ ಸ್ಟಾರ್ಟಪ್ ವಿಭಾಗದಲ್ಲಿ ದೇಶದಲ್ಲೇ ಮೊದಲ ಸ್ಥಾನ ಪಡೆದ ಬೆಂಗಳೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts