More

    ಉಗ್ರರ ತವರು ಪಾಕಿಸ್ತಾನಕ್ಕೆ ಇಂಗ್ಲೆಂಡ್​ ಶಾಕ್​​: ವಿಶ್ವದ ಎದುರು ಮತ್ತೆ ಹರಾಜಾಯ್ತು ಪಾಕ್​ ಮಾನ!

    ಲಂಡನ್​: ಉಗ್ರರ ತವರಾಗಿರುವ ಪಾಪಿ ಪಾಕಿಸ್ತಾನದ ಮಾನ ಜಗತ್ತಿನ ಎದುರು ಹರಾಜಾಗುತ್ತಿದೆ. ಅಭದ್ರತೆಯ ಕಾರಣ ನೀಡಿ ನ್ಯೂಜಿಲೆಂಡ್​ ಕ್ರಿಕೆಟ್​ ಮಂಡಳಿ ಪಾಕಿಸ್ತಾನ ಪ್ರವಾಸವನ್ನು ರದ್ದುಪಡಿಸಿದ ಬೆನ್ನಲ್ಲೇ ಇಂಗ್ಲೆಂಡ್​ ಮತ್ತು ವೇಲ್ಸ್​ ಕ್ರಿಕೆಟ್​ ಬೋರ್ಡ್​ ಕೂಡ ಅದೇ ಹಾದಿಯನ್ನು ಹಿಡಿದಿದೆ. ಈ ಮೂಲಕ ಪಾಕಿಗಳ ನೆಲ ಜೀವ ಉಳಿಸುವ ನೆಲವಲ್ಲ, ಪ್ರತಿ ಕ್ಷಣ ಜೀವ ಭಯದಲ್ಲಿ ಕಳೆಯುವಂತಹ ನರಕ ಎಂಬುದು ಸಾಬೀತಾಗಿದೆ.

    ಕಿವೀಸ್ ತಂಡವು ಕಳೆದ ಶುಕ್ರವಾರದಿಂದ ಪಾಕ್‌ನಲ್ಲಿ 3 ಏಕದಿನ ಮತ್ತು 5 ಟಿ20 ಪಂದ್ಯಗಳ ಸರಣಿ ಆಡಬೇಕಾಗಿತ್ತು. ಆದರೆ ಅಭದ್ರತೆಯ ಕಾರಣ ನೀಡಿ ಕಿವೀಸ್ ತಂಡ ಮೊದಲ ಏಕದಿನ ಪಂದ್ಯ ಆಡಲು ಸ್ಟೇಡಿಯಂಗೆ ತೆರಳಲು ನಿರಾಕರಿಸಿತು. ಕರೊನಾ ಹಾವಳಿಯ ನಡುವೆ ರಾವಲ್ಪಿಂಡಿ ಸ್ಟೇಡಿಯಂನಲ್ಲಿ ಶೇ. 25 ಪ್ರೇಕ್ಷಕರಿಗೂ ಪ್ರವೇಶ ಅವಕಾಶ ಕಲ್ಪಿಸಲಾಗಿತ್ತು. ಆದರೆ ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿಯ ಭದ್ರತಾ ಸಲಹೆಗಾರರ ಸೂಚನೆಯ ಮೇರೆ ತಂಡ ಸ್ಟೇಡಿಯಂಗೆ ತೆರಳಲಿಲ್ಲ. ಬಳಿಕ ಪ್ರವಾಸ ರದ್ದುಗೊಂಡಿದ್ದು, ತಂಡ ಶೀಘ್ರದಲ್ಲೇ ತವರಿಗೆ ಮರಳಲಿದೆ ಎಂದು ಕಿವೀಸ್ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿತು.

    ಇದರ ಬೆನ್ನಲ್ಲೇ ಇಂಗ್ಲೆಂಡ್​, ಪಾಕಿಸ್ತಾನ ಪರಿಸ್ಥಿತಿಯನ್ನು ಪರಿಶೀಲಿಸಿ ಮುಂದಿನ 24 ಗಂಟೆಗಳಲ್ಲಿ ಪ್ರವಾಸ ಕೈಗೊಳ್ಳಬೇಕೋ? ಬೇಡವೋ? ಎಂಬ ನಿರ್ಧಾರವನ್ನು ತೆಗೆದುಕೊಳ್ಳುವುದಾಗಿ ಹೇಳಿತ್ತು. ಕೊನೆಗೂ ನಿರ್ಧಾರ ಪ್ರಕಟಿಸಿರುವ ಇಂಗ್ಲೆಂಡ್​ ಪಾಕ್​ ಪ್ರವಾಸ ಕೈಗೊಳ್ಳದಿರಲು ತೀರ್ಮಾನಿಸಿದೆ. ಇಂಗ್ಲೆಂಡ್​ನ ಪುರುಷ ಮತ್ತು ಮಹಿಳಾ ತಂಡಗಳೆರಡು ತಮ್ಮ ಸರಣಿಗಳನ್ನು ರದ್ದು ಪಡಿಸಿವೆ.

    ಇಂಗ್ಲೆಂಡ್​ನ ಪುರುಷ ಮತ್ತು ಮಹಿಳಾ ತಂಡ​ ಅಕ್ಟೋಬರ್ 13 ಮತ್ತು 14 ರಂದು ನಡೆಯಬೇಕಿದ್ದ ಎರಡು ಟಿ20 ಪಂದ್ಯಗಳಿಗಾಗಿ ಪಾಕ್​ ಪ್ರವಾಸ ಮಾಡಬೇಕಿತ್ತು. ಅಲ್ಲದೆ, ಮಹಿಳಾ ತಂಡ ಅ. 17 ರಿಂದ 21ರ ವರೆಗೆ ನಡೆಯಬೇಕಿದ್ದ ಮೂರು ಪಂದ್ಯಗಳ ಏಕದಿನ ಸರಣಿಗಾಗಿ ಪಾಕ್​ ನೆಲದಲ್ಲೇ ಉಳಿಯಬೇಕಿತ್ತು. ಆದರೆ, ಪಾಕ್​ನಲ್ಲಿ ಸದ್ಯದ ಪರಿಸ್ಥಿತಿ ಸರಿಯಿಲ್ಲದ ಕಾರಣ ಎರಡು ಸರಣಿಗಳಿಗೆ ಇಂಗ್ಲೆಂಡ್​ ಮತ್ತು ವೇಲ್ಸ್​ ಕ್ರಿಕೆಟ್​ ಬೋರ್ಡ್​ ಬ್ರೇಕ್​ ಹಾಕಿದೆ.

    ನಮ್ಮ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಯ ಮಾನಸಿಕ ಮತ್ತು ದೈಹಿಕ ಯೋಗಕ್ಷೇಮವು ನಮ್ಮ ಅತ್ಯುನ್ನತ ಆದ್ಯತೆಯಾಗಿದೆ ಮತ್ತು ನಾವು ಪ್ರಸ್ತುತ ವಾಸಿಸುತ್ತಿರುವ ಕಾಲಘಟ್ಟವನ್ನು ಗಮನಿಸಿದರೆ ಇದು ಹೆಚ್ಚು ನಿರ್ಣಾಯಕವಾಗಿದೆ. ಪಾಕ್​ಗೆ ಪ್ರಯಾಣಿಸುವುದರ ಬಗ್ಗೆ ಜಾಗತಿಕವಾಗಿ ಹೆಚ್ಚುತ್ತಿರುವ ಕಾಳಜಿಗಳು ನಮಗೆ ತಿಳಿದಿವೆ. ಅದರಲ್ಲೂ ಕೋವಿಡ್​ ಒತ್ತಡದ ನಡುವೆ ಪಾಕ್​ ನೆಲದಲ್ಲಿ ಹೋಗಿ ಆಡುವುದು ಮತ್ತಷ್ಟು ಒತ್ತಡಕ್ಕೆ ಕಾರಣವಾಗುತ್ತದೆ. ಅಲ್ಲದೆ, ನಮ್ಮ ಪುರುಷರ ಟಿ20 ತಂಡಕ್ಕೆ ಹೆಚ್ಚಿನ ಸಂಕೀರ್ಣತೆ ಇದೆ. ಇಂತಹ ಪರಿಸ್ಥಿತಿಗಳಲ್ಲಿ ಪಾಕ್​ ಪ್ರವಾಸವು ಐಸಿಸಿ ಪುರುಷರ ಟಿ20 ವಿಶ್ವಕಪ್‌ಗೆ ಸೂಕ್ತ ಸಿದ್ಧತೆಯಾಗುವುದಿಲ್ಲ ಎಂದು ನಾವು ನಂಬುತ್ತೇವೆ. ನಾವು ಪಾಕ್​ ಪ್ರವಾಸವನ್ನು ರದ್ದುಪಡಿಸುತ್ತಿರುವುದಕ್ಕೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ (ಪಿಸಿಬಿ) ಕ್ಷಮೆ ಕೇಳಲು ಇಚ್ಛಿಸುತ್ತೇವೆ ಎಂದು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಹೇಳಿದೆ.

    ಈ ನಿರ್ಧಾರವು ಪಾಕ್​ ಕ್ರಿಕೆಟ್​ ಮಂಡಳಿಗೆ ಭಾರೀ ನಿರಾಶೆಯಾಗಿದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಅವರು ತಮ್ಮ ದೇಶದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಮರಳಲು ಆತಿಥ್ಯ ವಹಿಸಲು ಅವಿರತವಾಗಿ ಶ್ರಮಿಸಿದ್ದಾರೆ. ಕಳೆದ ಎರಡು ಬೇಸಿಗೆಯಲ್ಲಿ ಅವರು ಇಂಗ್ಲೀಷ್ ಮತ್ತು ವೆಲ್ಸ್​ ಕ್ರಿಕೆಟ್​ಗೆ ನೀಡಿದ ಬೆಂಬಲವು ಸ್ನೇಹದ ದೊಡ್ಡ ಪ್ರದರ್ಶನವಾಗಿದೆ. ನಮ್ಮ ಇಂದಿನ ನಿರ್ಧಾರ ಪಾಕಿಸ್ತಾನದಲ್ಲಿ ಕ್ರಿಕೆಟ್ ಮೇಲೆ ಬೀರುವ ಪರಿಣಾಮಕ್ಕಾಗಿ ನಾವು ಪ್ರಾಮಾಣಿಕವಾಗಿ ವಿಷಾದಿಸುತ್ತೇವೆ ಎಂದು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

    ತಾಲಿಬಾನಿಗಳಿಗೆ ಬಹಿರಂಗವಾಗಿಯೇ ಬೆಂಬಲ ನೀಡುತ್ತಿರುವ ಪಾಕ್​, ತಾನೆಂದು ಉಗ್ರರ ಪರ ಎಂಬುದನ್ನು ಜಗತ್ತಿಗೆ ಸಾರಿದೆ. ಪಾಕ್​ ಉಗ್ರರರ ಬೀಡಾಗಿರುವ ಹಿನ್ನೆಲೆಯಲ್ಲಿ ಭದ್ರತೆಯ ಭಯದಿಂದ ನ್ಯೂಜಿಲೆಂಡ್​ ಟೂರ್ನಿಯನ್ನು ರದ್ದುಗೊಳಿಸಿದೆ. ಈ ಹಿಂದೆ ಶ್ರೀಲಂಕಾ ಪ್ರವಾಸದ ವೇಳೆ ಉಗ್ರರ ದಾಳಿ ನಡೆದಿದ್ದನ್ನು ನಾವಿಲ್ಲಿ ನೆನಪು ಮಾಡಿಕೊಳ್ಳಬಹುದು. ಸದ್ಯ ಪರಿಸ್ಥಿತಿ ಅದಕ್ಕಿಂತ ಘೋರವಾಗಿದ್ದು, ಈ ಹಿನ್ನೆಲೆಯಲ್ಲಿ ನ್ಯೂಜಿಲೆಂಡ್​ ಟೂರ್ನಿ ರದ್ದುಪಡಿಸಿದರೆ, ಇಂಗ್ಲೆಂಡ್​ ಕೂಡ ಅದೇ ಹಾದಿ ಹಿಡಿದಿದೆ. (ಏಜೆನ್ಸೀಸ್​)

    ನ್ಯೂಜಿಲೆಂಡ್​ ಬೆನ್ನಲ್ಲೇ ಪಾಕಿಸ್ತಾನಕ್ಕೆ ಇಂಗ್ಲೆಂಡ್​ ಶಾಕ್​: ಪಾಕ್​ ಮಾನ ವಿಶ್ವದ ಎದುರು ಹರಾಜು!

    ಭದ್ರತಾ ಭೀತಿಯಿಂದಾಗಿ ಪಾಕ್ ಪ್ರವಾಸವನ್ನು ದಿಢೀರ್ ರದ್ದುಗೊಳಿಸಿದ ನ್ಯೂಜಿಲೆಂಡ್

    ಕಿವೀಸ್ ಕೈ ಕೊಟ್ರು​ ನಾನಿಲ್ಲವೇ? ವಿಶ್ವದೆದುರು ಬೆತ್ತಲಾಗಿರೋ ಪಾಕ್​ಗೆ ವಿಂಡೀಸ್​ ದೈತ್ಯ ಕ್ರಿಸ್​ ಗೇಲ್​ ಬೆಂಬಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts