More

    ಪ್ರತಿನಿತ್ಯ 3 ಕೆಜಿ ಅನ್ನ, 4 ಕೆಜಿ ರೊಟ್ಟಿ, 3.5 ಕೆಜಿ ಮಾಂಸ ತಿನ್ನುವ ಇಬ್ಬರು ಹೆಂಡಿರ ಗಂಡನ ಕಣ್ಣೀರ ಕತೆಯಿದು!

    ಪಟನಾ: ನೀವು ಮೇಲೆ ನೋಡುತ್ತಿರುವ ವ್ಯಕ್ತಿಯ ಹೆಸರು ಮೊಹಮ್ಮದ್​ ರಫಿಕ್​ ಅದ್ನಾನ್. ವಯಸ್ಸು 30 ವರ್ಷ. ಈತ ಬಿಹಾರ ಮೂಲದವನು. 200 ಕೆಜಿ ತೂಕವಿದ್ದಾನೆ. ಸಾಮಾನ್ಯ ಬೈಕ್​ ಆತನ ಭಾರವನ್ನು ತಡೆಯುವುದೇ ಇಲ್ಲ. ಹೀಗಾಗಿ ಸದಾ ಬುಲೆಟ್ ಗಾಡಿಯಲ್ಲೇ ಈತ ಓಡಾಡುತ್ತಾನೆ. ಪ್ರತಿದಿನ ಮಾಂಸಾಹಾರ ಸೇರಿದಂತೆ ದಿನವೊಂದಕ್ಕೆ 14 ರಿಂದ 15 ಕೆಜಿ ಆಹಾರ ತಿನ್ನುತ್ತಾನೆ ಅಂದರೆ, ಈತನಿಗಿಂತ ಸುಖ ಪುರುಷ ಮತ್ಯಾರು ಇಲ್ಲ ಅಂತಾ ನೀವು ಅಂದುಕೊಳ್ಳಬಹುದು. ಆದರೆ, ಈತನ ನಿತ್ಯದ ಜೀವನ ಶೈಲಿಯ ಹಿಂದೆ ಒಂದು ಕಣ್ಣೀರ ಕತೆ​​ಯು ಇದೆ. ಅದನ್ನು ಕೇಳಿದರೆ ನಿಮ್ಮ ಮನಸ್ಸು ಒಮ್ಮೆ ಕದಡಬಹುದು.

    ರಫಿಕ್​, ದಿನವೊಂದಕ್ಕೆ 3 ಕೆಜಿ ಅನ್ನ, 4 ಕೆಜಿ ರೋಟಿ, 2 ಕೆಜಿ ಮಾಂಸ ಮತ್ತು 1.5 ಕೆಜಿ ಮೀನು ಅನ್ನು ಪ್ರತಿದಿನ ತಿನ್ನುತ್ತಾನೆ. ಎಲ್ಲ ಸೇರಿ ದಿನವೊಂದಕ್ಕೆ 14 ರಿಂದ 15 ಕೆಜಿ ಆಹಾರ ರಫಿಕ್​ಗೆ ಬೇಕು. ಅತಿಯಾದ ಆಹಾರ ಸೇವನೆಯಿಂದ ಆತನ ಗಾತ್ರದಲ್ಲೂ ಏರಿಕೆಯಾಗಿದ್ದು, ಸದ್ಯ 200 ಕೆಜಿ ತೂಗುತ್ತಿದ್ದಾರೆ. ಇದರಿಂದ ನಡೆದಾಡುವುದು ಕೂಡ ರಫಿಕ್​ಗೆ ತುಂಬಾ ಕಷ್ಟ. ಈತನನ್ನು ನೋಡಿ ಜನರು ನಗುವುದೇ ಹೆಚ್ಚು. ಇನ್ನು ಈತನ ಪತ್ನಿಯ ಕೈಯಲ್ಲಿ ಸರಿಯಾಗಿ ಬೇಯಿಸಿ ಹಾಕಲು ಕೂಡ ಸಾಧ್ಯವಾಗುತ್ತಿಲ್ಲ.

    ಅತಿಯಾದ ಬೊಜ್ಜು ಕಾರಣ ರಫಿಕ್​ಗೆ ಮಕ್ಕಳು ಸಹ ಆಗಿಲ್ಲ. ಇದರಿಂದಾಗಿ ರಫೀಕ್ ಎರಡನೇ ಮದುವೆ ಸಹ ಆಗಿಗಿದ್ದಾರೆ. ರಫಿಕ್​ ಅವರ ಆಹಾರ ಪದ್ಧತಿಯಿಂದಾಗಿ, ಜನರು ಅವರನ್ನು ಮದುವೆ ಮತ್ತು ಇತರ ಕಾರ್ಯಕ್ರಮಗಳಿಗೆ ಆಹ್ವಾನಿಸಲು ಹೆದರುತ್ತಾರೆ. ಎಲ್ಲಿ ಎಲ್ಲ ಊಟವನ್ನು ಆತನಿಗೆ ಬಡಿಸಬೇಕಾಗುತ್ತದೆ ಎಂಬ ಭಯ ಎಲ್ಲರಲ್ಲೂ ಇದೆ.

    ರಫಿಕ್​ ಸ್ವಲ್ಪ ದೂರವು ನಡೆಯಲು ಆಗುವುದಿಲ್ಲವಂತೆ. ಒಂದು ಸ್ವಲ್ಪ ದೂರ ನಡೆದರು ಕೂಡ ಏದುಸಿರುವ ಬರುತ್ತದೆಯಂತೆ. ಹೀಗಾಗಿ ಓಡಾಡಲು ಬುಲೆಟ್​ ವಾಹನವನ್ನು ಅವಲಂಬಿಸಿದ್ದಾನೆ. ಈತನ ಅತಿಯಾದ ತೂಕದಿಂದ ಬುಲೆಟ್​ ಕೂಡ ಒಮ್ಮೊಮ್ಮೆ ನಿಂತುಬಿಡುವ ಮೂಲಕ ತೊಂದರೆ ಕೊಡುತ್ತದೆಯಂತೆ. ರಫಿಕ್​​ ಬಾಲ್ಯದಿಂದಲೂ ಹೀಗೆ ಬೆಳೆದುಕೊಂಡು ಬಂದಿದ್ದಾರೆ. ಮೊದ ಮೊದಲು ನಡೆದಾಡಲು ಯಾವುದೇ ಸಮಸ್ಯೆ ಇರಲಿಲ್ಲ. ಆದರೆ, ಈಗ ಕೊಂಚ ದೂರವು ನಡೆಯಲು ಆಗುವುದಿಲ್ಲ ಎಂದು ಭಾವುಕರಾದರು. ರಫಿಕ್​ ಬುಲೆಟ್​ ಮೇಲೆ ಹೋಗುತ್ತಿದ್ದರೆ ಎಲ್ಲರು ಅವನನ್ನೇ ನೋಡಿ ನಗುತ್ತಿರುತ್ತಾರೆ. ಕೆಲವೊಮ್ಮೆ ಇದರಿಂದ ರಫಿಕ್​ ಮನಸ್ಸಿಗೆ ನೋವಾಗಿದೆ. ಆದರೆ, ನಿತ್ಯವು ಇದೇ ಅನುಭವ ಆಗುತ್ತಿರುವುದರಿಂದ ಇದೀಗ ಆ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಿಲ್ಲ.

    ರಫಿಕ್​ ತುಂಬಾ ಆಹಾರ ತಿನ್ನುತ್ತಾರೆ ಎಂದು ಅವರ ನೆರೆಮನೆಯವರಾದ ಸುಲೇಮಾನ್​ ಹೇಳಿದ್ದಾರೆ. ಇದರಿಂದ ಆತನ ತೂಕ ಹೆಚ್ಚಾಗಿದೆ. ಹೀಗಾಗಿ ಬುಲೆಟ್​ ಕೂಡ ಆಗಾಗ ರಿಪೇರಿಗೆ ಬರುತ್ತಿರುತ್ತದೆ. ಕೆಲವೊಮ್ಮೆ ಬುಲೆಟ್​ ಮಾರ್ಗ ಮಧ್ಯೆದಲ್ಲೇ ನಿಂತುಬಿಡುತ್ತದೆ. ಆ ಸಮಯದಲ್ಲಿ ದಾರಿಯಲ್ಲಿ ಹೋಗುವ ಜನರನ್ನು ತಳ್ಳಲು ಕೇಳಬೇಕು. ರಫೀಕ್ ಓರ್ವ ಸಾಧಕ ಕೃಷಿಕನಾಗಿದ್ದು, ಆತನಿಗೆ ತಿನ್ನಲು ಮತ್ತು ಕುಡಿಯಲು ಯಾವುದೇ ತೊಂದರೆಯಿಲ್ಲ. ಹಣಕಾಸು ಸ್ಥಿತಿ ಉತ್ತಮವಾಗಿದೆ ಎಂದು ತಿಳಿಸಿದ್ದಾರೆ.

    ಇನ್ನು ರಫಿಕ್​ನ ಈ ಸ್ಥಿತಿಗೆ ಆತನಲ್ಲಿರುವ ರೋಗವೇ ಕಾರಣ. ರಫಿಕ್​ಗೆ ತಿನ್ನುವುದನ್ನು ನಿಯಂತ್ರಣ ಮಾಡಬೇಕೆಂಬ ಆಸೆಯಿದೆ. ಆದರೆ, ಆತನಲ್ಲಿರುವ ಆರೋಗ್ಯ ಪರಿಸ್ಥಿತಿ ನಿಯಂತ್ರಿಸಲು ಬಿಡುತ್ತಿಲ್ಲ. ಹೌದು. ರಫಿಕ್​ “ಬುಲಿಮಿಯಾ ನೆರ್ವೊಸಾ” ಎಂಬ ರೋಗದಿಂದ ಬಳಲುತ್ತಿದ್ದಾನೆ. ಈ ಸಂಗತಿಯನ್ನು ಬಿಹಾರದ ಸದಾರ್​ ಆಸ್ಪತ್ರೆಯ ವೈದ್ಯ ಡಾ. ಮೃನಾಲ್​ ರಂಜನ್​ ಕೂಡ ತಿಳಿಸಿದ್ದಾರೆ. ಈ ರೋಗದಿಂದ ಬಳಲುತ್ತಿರುವ ಜನರು ಹೆಚ್ಚು ತಿನ್ನಲು ಪ್ರಾರಂಭಿಸುತ್ತಾರೆ. ಸಮಯಕ್ಕೆ ಅದರ ಚಿಕಿತ್ಸೆಯನ್ನು ಪ್ರಾರಂಭಿಸುವುದು ಮುಖ್ಯ. ಇಲ್ಲದಿದ್ದರೆ ರೋಗಿಯ ಪ್ರಾಣವೂ ಹೋಗಬಹುದು ಎಂದಿದ್ದಾರೆ.

    ಬುಲಿಮಿಯಾ ನೆರ್ವೊಸಾ ಎಂಬುದು ಒಂದು ತಿನ್ನುವ ಕಾಯಿಲೆ. ಇದು ಗಂಭೀರ ಮತ್ತು ಜೀವಕ್ಕೆ ಅಪಾಯಕಾರಿಯು ಹೌದು. ಈ ರೋಗದಿಂದ ಬಳಲುತ್ತಿರುವ ವ್ಯಕ್ತಿಯು ಅನಿಯಂತ್ರಿತ ಆಹಾರವನ್ನು ತಿನ್ನುವ ಮೂಲಕ ಕೊನೆಗೆ ಬಲಿಯಾಗುತ್ತಾನೆ. ಹೆಚ್ಚು ಆಹಾರವನ್ನು ಸೇವಿಸುತ್ತಾರೆ ಮತ್ತು ನಂತರ ಸ್ಥೂಲಕಾಯದ ಭಯದಿಂದ ವ್ಯಾಯಾಮವನ್ನು ಪ್ರಾರಂಭಿಸುತ್ತಾರೆ ಎಂದು ತಜ್ಞರು ಹೇಳುತ್ತಾರೆ. (ಏಜೆನ್ಸೀಸ್​)

    ಎಲ್ಲೋ ಕೂತ್ಕೊಂಡು ಮಾತಾಡೋದಲ್ಲ ತಾಕತ್ತಿದ್ರೆ ಬನ್ನಿ: ಮಾಜಿ ಸಿಎಂ ಎಚ್​ಡಿಕೆಗೆ ಶ್ರೀನಿವಾಸ್​ ಬೆಂಬಲಿಗರ ಸವಾಲು

    ಚಪ್ಪಲಿ ವಿವಾದದ ಬಳಿಕ ನಯನತಾರಾಗೆ ಮತ್ತೊಂದು ಬಿಗ್​ ಶಾಕ್​: ಇನ್ನೊಂದು ಮಿಸ್ಟೇಕ್​ CCTVಯಲ್ಲಿ ಸೆರೆ

    ಗ್ರಾ.ಪಂ. ಚುನಾವಣೆಯಲ್ಲಿ ಮಾಜಿ ಚಂಬಲ್ ಡಕಾಯಿತ ಮಲ್ಖಾನ್​ ಸಿಂಗ್​ ಪತ್ನಿ ಅವಿರೋಧ ಆಯ್ಕೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts