More

    ಜನ ಸಾಮಾನ್ಯರಿಗೆ ಮತ್ತೆ ದರ ಏರಿಕೆ ಬರೆ​: ಗೃಹಬಳಕೆಯ LPG ಸಿಲಿಂಡರ್​ ಬೆಲೆಯಲ್ಲಿ 50 ರೂ. ಹೆಚ್ಚಳ

    ನವದೆಹಲಿ: ಈಗಾಗಲೇ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿರುವ ಜನರಿಗೆ ಮತ್ತೊಮ್ಮೆ ದರ ಏರಿಕೆ ಬರೆ ಬಿದ್ದಿದೆ. ಈಗಾಗಲೇ ಸಾವಿರ ರೂಪಾಯಿ ಗಡಿ ದಾಟಿ ಬಡ ಜನರಿಗೆ ಗಗನಕುಸುಮವಾಗಿರುವ ಗೃಹಬಳಕೆಯ ಎಲ್​ಪಿಜಿ ಸಿಲಿಂಡರ್​ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದ್ದು, ಸಾಮಾನ್ಯ ಜನರ ಜೇಬಿಗೆ ಮತ್ತಷ್ಟು ಕತ್ತರಿ ಬಿದ್ದಿದೆ.

    ಪೆಟ್ರೋಲಿಯಂ ಕಂಪನಿಗಳು ಇಂದು ಎಲ್​ಪಿಜಿ ದರ ಪರಿಷ್ಕರಣೆ ಮಾಡಿದ್ದು, 14.2 ಕೆಜಿಯ ಗೃಹಬಳಕೆಯ ಎಲ್​ಪಿಜಿ ಸಿಲಿಂಡರ್​ ಬೆಲೆಯಲ್ಲಿ 50 ರೂಪಾಯಿ ಏರಿಕೆ ಮಾಡಿದೆ. ದೆಹಲಿಯಲ್ಲಿ ಈ ಹಿಂದೆ 1003 ರೂಪಾಯಿ ಇದ್ದ ಸಿಲಿಂಡರ್​ ಬೆಲೆ ಇದೀಗ 1053 ರೂ. ಗೆ ಏರಿಕೆಯಾಗಿದೆ.

    ಮುಂಬೈನಲ್ಲಿ 1052, ಕೊಲ್ಕತ್ತಾದಲ್ಲಿ 1079, ಚೆನ್ನೈನಲ್ಲಿ 1068 ಮತ್ತು ಬೆಂಗಳೂರಿನಲ್ಲಿ 1055 ರೂಪಾಯಿಗೆ ಬೆಲೆ ಏರಿಕೆಯಾಗಿದೆ.

    ಗ್ಯಾಸ್​ ಏಜೆನ್ಸಿಗಳು ಸಿಲಿಂಡರ್​ ಅನ್ನು ಮನೆ ಸಾಗಿಸಲು ಹಲವೆಡೆ ಹೆಚ್ಚುವರಿಯಾಗಿ 50 ರೂಪಾಯಿ ತೆಗೆದುಕೊಳ್ಳುತ್ತಿದೆ. ಕೇಂದ್ರ ಸರ್ಕಾರ ಸಿಲಿಂಡರ್​ ಡಿಲಿವರಿಗೆ ಹಣ ಕೊಡಬೇಡಿ ಎಂದು ಹೇಳಿದರೂ, ಡಿಲಿವರಿ ಮಾಡುವವರು ಹಣ ಪಡೆಯುತ್ತಿದ್ದಾರೆ. ಇದರಿಂದ ಒಂದು ಸಿಲಿಂಡರ್​ಗೆ ಬರೋಬ್ಬರಿ 1100 ಆಗಲಿದ್ದು, ನಿಜಕ್ಕೂ ಇದು ಜನ ಸಾಮಾನ್ಯರಿಗೆ ಭಾರಿ ಹೊರೆಯಾಗಿದೆ.

    ಗೃಹಬಳಕೆಯ 5 ಕೆಜಿ ಸಿಲಿಂಡರ್​ ಬೆಲೆಯಲ್ಲೂ ಪೆಟ್ರೋಲಿಯಂ ಕಂಪನಿಗಳು 18 ರೂಪಾಯಿ ಏರಿಕೆ ಮಾಡಿವೆ. ಆದರೆ, ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್​ ಬೆಲೆಯಲ್ಲಿ ಕೇವಲ 8.50 ರೂಪಾಯಿಯನ್ನು ಇಳಿಸಿದೆ.

    14.2 ಕೆಜಿ ಗೃಹಬಳಕೆಯ LPG ಸಿಲಿಂಡರ್ ದರವನ್ನು ಕೊನೆಯದಾಗಿ 2022ರ ಮೇ 19ರಂದು 4 ರೂ. ಹೆಚ್ಚಿಸಲಾಗಿತ್ತು. (ಏಜೆನ್ಸೀಸ್​)

    ಆಸ್ತಿ ವಿಚಾರವಾಗಿ ಕೊಲೆಯಾಗಿದೆ ಅನ್ನೋದು ಸುಳ್ಳು: ಸ್ಫೋಟಕ ಸಂಗತಿ ಬಿಚ್ಚಿಟ್ಟ ಆರೋಪಿ ಮಹಾಂತೇಶ್​ ಪತ್ನಿ

    ಚಂದ್ರಶೇಖರ ಗುರೂಜಿ ಕೊಲೆಗೈದ ಆರೋಪಿಗಳು ಅಷ್ಟು ಬೇಗ ಸಿಕ್ಕಿಬೀಳಲು ಆ ಒಂದು ಫೋನ್​ ಕಾಲ್ ನೆರವಾಯ್ತಾ?​

    ಬ್ರಿಟನ್​ ಪ್ರಧಾನಿಗೆ ಬಿಗ್​​ ಶಾಕ್​: ಸಚಿವ ಸ್ಥಾನಕ್ಕೆ ಇನ್ಫಿ ಮೂರ್ತಿ ಅಳಿಯ ರಿಷಿ ಸುನಾಕ್ ರಾಜೀನಾಮೆ​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts