More

    ಬಿಗ್​ಬಾಸ್​ ನಗದು ಬಹುಮಾನಕ್ಕಿಂತ ಹೆಚ್ಚಿಗೆ ಗೆದ್ದಿದ್ದಾರಂತೆ ದಿವ್ಯಾ: ಹೇಗೆಂದು ತಿಳಿದ್ರೆ ಅಚ್ಚರಿ ಪಡ್ತೀರಾ!

    ಬೆಂಗಳೂರು: ಕರೊನಾದಿಂದಾಗಿ ಬಿಗ್​ಬಾಸ್​ ಸೀಸನ್​​ 8ನೇ ಆವೃತ್ತಿ ಅರ್ಧಕ್ಕೆ ಮೊಟಕುಗೊಂಡಿದೆ. ಸ್ಪರ್ಧಿಗಳೆಲ್ಲರು ಇಂದು ಮನೆಯಿಂದ ಹೊರಗೆ ಬರಲಿದ್ದಾರೆ. ಯಾರು ಗೆಲ್ಲಲಿದ್ದಾರೆ? ಯಾರಿಗೆ ಬಹುಮಾನ ದೊರೆಯಲಿದೆ? ಎಂಬ ಮಾಹಿತಿ ಈವರೆಗೂ ತಿಳಿದುಬಂದಿಲ್ಲ. ಆದರೆ, ಮಹಿಳಾ ಸ್ಪರ್ಧಿ ದಿವ್ಯಾ ಉರುಡುಗ ನಗದು ಬಹಮಾನಕ್ಕಿಂತಲೂ ಹೆಚ್ಚು ಗೆದ್ದಿದ್ದಾರೆ ಎಂದು ನೆಟ್ಟಿಗರು ಹೇಳಿದ್ದಾರೆ. ಹೇಗೆಂದು ತಿಳಿಯುವ ಕುತೂಹಲವಿದ್ದರೆ ಮುಂದೆ ಓದಿ….

    ಮಹಿಳಾ ಸ್ಪರ್ಧಿ ದಿವ್ಯಾ ಉರುಡುಗ ಬಿಗ್​ಬಾಸ್​ ಮನೆಯಿಂದ ಹೊರಗಡೆ ತನ್ನ ಖ್ಯಾತಿಯನ್ನು ಈಗಾಗಲೇ ಹೆಚ್ಚಿಸಿಕೊಂಡಿದ್ದಾರೆ. ಬಿಗ್​ಬಾಸ್​ ಮನೆಯಲ್ಲಿರುವಾಗಲೇ ಮೂತ್ರನಾಳದ ಸೋಂಕಿನಿಂದ ದಿವ್ಯಾ ಹೊರ ನಡೆದಿದ್ದರು. ಇದೀಗ ಗುಣಮುಖವಾಗಿದ್ದರೂ ಕಾರ್ಯಕ್ರಮ ಅರ್ಧಕ್ಕೆ ಮೊಟಕುಗೊಂಡಿರುವ ಹಿನ್ನೆಲೆಯಲ್ಲಿ ಮತ್ತೆ ಮನೆ ಸೇರುವ ಸಾಧ್ಯತೆಯೇ ಇಲ್ಲ.

    ಬಿಗ್​ಬಾಸ್​ ಮನೆಯೊಳಗೆ ಸಹ ಸ್ಪರ್ಧಿ ಕೆ.ಪಿ. ಅರವಿಂದ್​ ಜತೆ ಜೋಡಿ ಟಾಸ್ಕ್​ ನಡೆದಾಗಿನಿಂದ ದಿವ್ಯಾ ಭಾರಿ ಸುದ್ದಿಯಾಗಿದ್ದಾರೆ. ವಿಶೇಷವೆಂದರೆ ಬಿಗ್​ಬಾಸ್​ ಇತಿಹಾಸದಲ್ಲೇ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ. 21 ಸಾವಿರಕ್ಕೂ ಹೆಚ್ಚು ಟ್ವೀಟ್​ಗಳು ದಿವ್ಯಾ ಹೆಸರಿನಲ್ಲಿ ಹರಿದಾಡಿವೆ. ಇದು ಬಿಗ್​ಬಾಸ್​ ಕನ್ನಡ ಇತಿಹಾಸದಲ್ಲೇ ಇದೇ ಮೊದಲು.

    ಪ್ರತಿದಿನ ನಾವು ಅರವಿಂದ್​ ಮತ್ತು ದಿವ್ಯಾರನ್ನು ಮಿಸ್​ ಮಾಡಿಕೊಳ್ಳುತ್ತಿದ್ದೇವೆ ಎಂದು ನೆಟ್ಟಿಗರು ಹೇಳಿದ್ದಾರೆ. ಬಿಗ್​ಬಾಸ್​ ಗೆಲ್ಲಬೇಕೆಂಬ ಉದ್ದೇಶದಿಂದ ಹೋದ ದಿವ್ಯಾ, ಮನೆಯೊಳಗೆ ಅರವಿಂದ್​ ಎಂಬ ಒಳ್ಳೆಯ ವ್ಯಕ್ತಿಯ ಮನಸ್ಸನ್ನು ಗೆದ್ದಿದ್ದಾರೆ. ಇಬ್ಬರ ನಡುವೆ ಒಳ್ಳೆಯ ಸಂಬಂಧವಿದ್ದು, ಶೋ ನಂತರವೂ ತಮ್ಮ ಸಂಬಂಧ ಉಳಿಸಿಕೊಳ್ಳಲಿದ್ದಾರೆ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.

    ದಿವ್ಯಾ ಅವರು ಬಿಗ್​ಬಾಸ್​ ನಗದು ಬಹುಮಾನ ಗೆಲ್ಲದೇ ಇರಬಹುದು ಆದರೆ, ಅರವಿಂದ್​ ಅವರು ಅದಕ್ಕಿಂತಲೂ ಹೆಚ್ಚು. ಅದಕ್ಕೆ ಅರ್ಹರೂ ಹೌದು. ಅಂತಹ ಮನಸ್ಸನ್ನೇ ಗೆದ್ದಿರುವ ದಿವ್ಯಾ ಬಿಗ್​ಬಾಸ್​ ನಗದು ಬಹುಮಾನಕ್ಕಿಂತ ಹೆಚ್ಚಿಗೆ ಗೆದ್ದಂತೆ ಎಂದು ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಹೊರಹಾಕಿದ್ದಾರೆ. (ಏಜೆನ್ಸೀಸ್​)

    ಆಕ್ಸಿಜನ್‌ ಮುಗೀತಿದೆ, ಯಾರೂ ಬರ್ತಿಲ್ಲ… ಮೃತ ನಟ ರಾಹುಲ್‌ನ ಹೃದಯವಿದ್ರಾವಕ ವಿಡಿಯೋ ಹಂಚಿಕೊಂಡ ಪತ್ನಿ

    ಕರೊನಾ ಆತಂಕ: ಸಗಣಿ, ಗೋಮೂತ್ರ ಬಳಸುವವರಿಗೆ ತಜ್ಞರು ನೀಡಿದ ಭಯಾನಕ ಎಚ್ಚರಿಕೆ ಹೀಗಿದೆ!

    ಟ್ಯೂಶನ್​ಗೆ ಹೋದ ಬಾಲಕಿ ಮೇಲೆ ಶಿಕ್ಷಕಿಯ ಗಂಡನಿಂದ ರೇಪ್​: ಎರಡು ವರ್ಷದ ಬಳಿಕ ಆರೋಪಿ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts