More

    KGF- 3 ಬಗ್ಗೆ ಪ್ರಶಾಂತ್​ ನೀಲ್​ ಆಡಿರೋ ಮಾತು ಕೇಳಿದ್ರೆ ಯಶ್​ ಫ್ಯಾನ್ಸ್​ಗೆ ಬೇಸರವಾಗೋದು ಗ್ಯಾರೆಂಟಿ!

    ಬೆಂಗಳೂರು​: ರಾಕಿಂಗ್​ ಸ್ಟಾರ್​ ಯಶ್​ ಅಭಿನಯದ ಕೆಜಿಎಫ್​ ಚಾಪ್ಟರ್​-2 ಸಿನಿಮಾ ಬಾಕ್ಸ್​ಆಫೀಸ್​ನಲ್ಲಿ ಧೂಳೆಬ್ಬಿಸಿದೆ. ಸಾವಿರ ಕೋಟಿ ರೂಪಾಯಿ ದಾಟಿದ ಕನ್ನಡದ ಮೊದಲ ಹಾಗೂ ಭಾರತದ ನಾಲ್ಕನೇ ಸಿನಿಮಾ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಇದೀಗ ಅಭಿಮಾನಿಗಳ ಗಮನ ಕೆಜಿಎಫ್​ ಚಾಪ್ಟರ್​ 3 ಕಡೆಗಿದೆ. ಕೆಜಿಎಫ್​-2ನಲ್ಲಿ ಮೂರನೇ ಭಾಗದ ಸುಳಿವು ನೀಡಿದ್ದು, ಅಭಿಮಾನಿಗಳ ಖುಷಿಗೆ ಪಾರವೇ ಇಲ್ಲದಂತಾಗಿದೆ. ಆದರೆ, ಕೆಜಿಎಫ್​ 3 ಯಾವಾಗ ಆರಂಭವಾಗುತ್ತದೆ? ಮತ್ತು ಯಾವಾಗ ಬಿಡುಗಡೆಯಾಗಲಿದೆ? ಎಂಬ ಪ್ರಶ್ನೆಯು ಹುಟ್ಟಿಕೊಂಡಿದ್ದು, ಇದರ ನಡುವೆ ಅಭಿಮಾನಿಗಳಿಗೆ ಬೇಸರದ ಸಂಗತಿಯೊಂದು ಹೊರಬಿದ್ದಿದೆ.

    ಬೇಸರದ ವಿಚಾರ ಏನೆಂದರೆ, ಮೂಲಗಳ ಪ್ರಕಾರ ಕೆಜಿಎಫ್​ ಚಾಪ್ಟರ್​ 3ಗೆ ನಿರ್ದೇಶಕ ಪ್ರಶಾಂತ್​ ನೀಲ್​ ಬಳಿ ಯಾವುದೇ ಸ್ಕ್ರಿಪ್ಟ್​ ಇಲ್ಲ. 1971 ರಿಂದ 1981ರ ನಡುವಿನ ಕಾಲಘಟ್ಟದಲ್ಲಿ ನಡೆಯುವ ಸ್ಟೋರಿಯನ್ನು ಪ್ರಶಾಂತ್​ ನೀಲ್​ ಬರೆಯಬೇಕಿದೆ. ಸದ್ಯ ಕೆಜಿಎಫ್​ 3 ರಾಕಿ ಭಾಯ್​ ಮತ್ತು ಕೋಲಾರ ಚಿನ್ನದ ಗಣಿಯ ಹಣೆಬರಹವನ್ನು ನಿರ್ಧರಿಸಲಿದೆ. ಅಮೆರಿಕ ಸೇರಿದಂತೆ ಭಾರತದಿಂದ ಆಚೆಗೆ ರಾಕಿ ಭಾಯ್​ ನಡೆಸುವ ಅಪರಾಧ ಚಟುವಟಿಕೆಗಳ ಮೇಲೆ ಕೆಜಿಎಫ್​ 3 ಸ್ಟೋರಿ ನಿಂತಿರಲಿದೆ. ಆದರೆ, ಕೆಜಿಎಫ್​-2ಗೆ ಕಾದಿದ್ದಕ್ಕಿಂತ ಹೆಚ್ಚಿನ ಸಮಯವನ್ನು ಕೆಜಿಎಫ್​ 3ಗೆ ಕಾಯಬೇಕಿದೆ.

    ಕೆಜಿಎಫ್​ 3 ಬಗ್ಗೆ ನಿರ್ದೇಶಕ ಪ್ರಶಾಂತ್​ ನೀಲ್​ ಆಡಿರುವ ಮಾತು ಕೂಡ ಅಭಿಮಾನಿಗಳಿಗೆ ಬೇಸರ ಉಂಟು ಮಾಡುವಂತಿದೆ. ಇತ್ತೀಚೆಗೆ ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿರುವ ಪ್ರಶಾಂತ್​ ನೀಲ್​, ಕೆಜಿಎಫ್​ ಫ್ರಾಂಚೈಸಿ ಮತ್ತು ಪಾತ್ರಗಳ ಮೇಲೆ ಜನರಿಗೆ ಮೆಚ್ಚುಗೆ ಇದೆ. ಕೆಜಿಎಫ್​ 3 ಮಾಡುವ ಬಗ್ಗೆ ಆಲೋಚನೆ ಇದೆ. ಕೆಜಿಎಫ್​ 2 ಮುಂಚೆಯೇ ನಮಗೆ ಅದರ ಬಗ್ಗೆ ಯೋಚನೆ ಇತ್ತು ಎಂದಿದ್ದಾರೆ.

    ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ತುಂಬಾ ಬಿಜಿಯಾಗಿದ್ದೇನೆ. ಸದ್ಯ ಸ್ಥಿತಿಯಲ್ಲಿ ಕೆಜಿಎಫ್​ 3 ಬಗ್ಗೆ ಯೋಚಿಸಲು ಆಗುವುದಿಲ್ಲ. ಭವಿಷ್ಯದಲ್ಲಿ ಕೆಜಿಎಫ್​ 3 ಸಿನಿಮಾ ಬರಲಿದೆ. ಆದರೆ, ಯಾವಾಗ ಬರುತ್ತದೆ ಎಂದು ಹೇಳಲು ಆಗುವುದಿಲ್ಲ. ಒಟ್ಟಿನಲ್ಲಿ ಖಂಡಿತವಾಗಿಯೂ ಕೆಜಿಎಫ್​ 3 ಸಿನಿಮಾ ಬಂದೇ ಬರುತ್ತದೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)

    ಹೇಗಿದೆ ನೋಡಿ ರಾಷ್ಟ್ರೀಯ ಹೆದ್ದಾರಿ: ಈ ವಿಡಿಯೋ ನೋಡಿದ್ರೆ ನಿಮ್ಮ ಹುಬ್ಬೇರುವುದು ಖಂಡಿತ!

    ಮಹಿಳೆಯರು ಅಂದ್ರೆ ಅಲರ್ಜಿ: ಮುಟ್ಟಿದ್ರೆ ಸಾಕು ಮೂರ್ಛೆ ಹೋಗೋ ಅರ್ಚಕ- ಅಷ್ಟಕ್ಕೂ ಆಗಿದ್ದು ಇಷ್ಟೇ…

    ತಮ್ಮ ಮಗನ ಜತೆ ಹೋಲಿಸಿ ಶಾರುಖ್​ ಪುತ್ರನನ್ನು ಟ್ರೋಲ್ ಮಾಡುವವರಿಗೆ ನಟ ಮಾಧವನ್​ ಹೇಳಿದ್ದು ಹೀಗೆ…​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts