More

    ದಿಂಗಾಲೇಶ್ವರ ಶ್ರೀಗಳ ಆರೋಪ ಸತ್ಯಕ್ಕೆ ದೂರ: ಸರ್ಕಾರದ ಪರ ಬ್ಯಾಟ್​ ಬೀಸಿದ ಹಿಂದುಳಿದ, ದಲಿತ ಮಠಾಧೀಶರ ಒಕ್ಕೂಟ

    ಚಿತ್ರದುರ್ಗ: ಪರ್ಸೇಂಟೇಜ್ ಸರ್ಕಾರ ಹೇಳಿಕೆ ನೀಡಿದ ದಿಂಗಾಲೇಶ್ವರ ಶ್ರೀಗಳ ವಿರುದ್ಧ ಹಿಂದುಳಿದ ಹಾಗೂ ದಲಿತ ಮಠಾಧೀಶರ ಒಕ್ಕೂಟದಿಂದ ಇಂದು ಸುದ್ದಿಗೋಷ್ಟಿ ನಡೆಸಿ ಸ್ಪಷ್ಟನೆ ನೀಡುವ ಮೂಲಕ ಸರ್ಕಾರದ ಪರ ಬ್ಯಾಟ್​ ಬೀಸಿದರು.

    ಚಿತ್ರದುರ್ಗದ ಬೋವಿ ಗುರುಪೀಠದಲ್ಲಿ ಮಠಾಧೀಶರು ಸುದ್ದಿಗೋಷ್ಟಿ ನಡೆಸಿದರು. ಈ ವೇಳೆ ಮಾತನಾಡಿದ ದಲಿತ, ಹಿಂದುಳಿದ ಮಠಾಧೀಶರ ಒಕ್ಕೂಟದ ಅಧ್ಯಕ್ಷ ಹಾಗೂ ಕಾಗಿನೆಲೆ ಕನಕ ಗುರುಪೀಠದ ಪೀಠಾಧಿಪತಿ ನಿರಂಜನಪುರಿ ಶ್ರೀ ಮಾತನಾಡಿ, ವಿವಾದಕ್ಕೆ ತಾತ್ವಿಕ ಅಂತ್ಯವಾಡಲು ಈ ಸುದ್ದಿಗೋಷ್ಟಿ ನಡೆಸಲಾಗ್ತಿದೆ ಎಂದರು.

    ದಿಂಗಾಲೇಶ್ವರ ಶ್ರೀಗಳ ಆರೋಪ ಸತ್ಯಕ್ಕೆ ದೂರವಾದದ್ದು. ಎಲ್ಲ ಸರ್ಕಾರಗಳು ನಮ್ಮ ಮಠಗಳಿಗೆ ಅನುದಾನ ನೀಡಿವೆ. ನೇರವಾಗಿ ಮಠಗಳಿಗೆ ಅನುದಾನ ಎಲ್ಲೂ ಬಿಡುಗಡೆಯಾಗಿಲ್ಲ. ಜಿಲ್ಲಾಧಿಕಾರಿ ಖಾತೆಗೆ ಸರ್ಕಾರದ ಅನುದಾನ ಬಂದ ಬಳಿಕ ಮಠಗಳ ಅಭಿವೃದ್ಧಿ ಆಗಿವೆ. ನಾವು ದಾಖಲೆ ಒದಗಿಸಿದ ಬಳಿಕ ಜಿಲ್ಲಾಧಿಕಾರಿ ಅನುದಾನ ನೀಡಿದ್ದಾರೆ ಎಂದು ಹೇಳಿದರು.

    ಮಠಾಧೀಶರು ಕಮಿಷನ್ ನೀಡುವ ವಿಚಾರವೇ ಇಲ್ಲಿ ಉದ್ಭವಿಸಲ್ಲ. ನಾವ್ಯಾರು ನಯಾಪೈಸ ಪರ್ಸೇಂಟೇಜ್ ನೀಡಿಲ್ಲ. ನಾವು ಭಿಕ್ಷೆ ಬೇಡಿಯಾದರು ಮಠ ಕಟ್ತೇವೆ. ಕಮೀಷನ್ ಕೊಟ್ಟು ಮಠ ಕಟ್ಟುವ ಅಗತ್ಯ ಇಲ್ಲಿ ಯಾರಿಗೂ ಇಲ್ಲ ಎಂದು ಹೇಳಿದರು. (ದಿಗ್ವಿಜಯ ನ್ಯೂಸ್​)

    ಅಲ್ಲು ಅರ್ಜುನ್​ ಭವಿಷ್ಯದ ಯೋಜನೆಯನ್ನೇ ಬದಲಿಸಿದ ಕೆಜಿಎಫ್-2 ಗೆಲುವು! ಬನ್ನಿ ಪ್ಲಾನ್​ ಕೇಳಿದ್ರೆ ಫ್ಯಾನ್ಸ್​ ಥ್ರಿಲ್​

    ಕೊಪ್ಪಳದಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ: ಜಮೀನಿಗೆ ತೆರಳುತ್ತಿದ್ದ ಇಬ್ಬರು ರೈತರು-ಹಸು ಸ್ಥಳದಲ್ಲೇ ಸಾವು

    ತಮಕೂರಲ್ಲಿ ಟಿ.ಬಿ. ಜಯಚಂದ್ರ ಪ್ರಯಾಣಿಸುತ್ತಿದ್ದ ಕಾರು ಅಪಘಾತ: ಬೆಂಗಳೂರು ಆಸ್ಪತ್ರೆಗೆ ಮಾಜಿ ಸಚಿವ ದಾಖಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts