More

    ತನ್ನ ಸಾಕು ನಾಯಿಗೂ ವಿಮಾನ ಟಿಕೆಟ್​ ಬೇಡಿಕೆಯಿಟ್ರಾ ರಶ್ಮಿಕಾ? ಚರಿಷ್ಮಾ ಸುಂದರಿ ಕೊಟ್ಟ ಸ್ಪಷ್ಟನೆ ಹೀಗಿದೆ…

    ಹೈದರಾಬಾದ್​: ಸಾಮಾಜಿಕ ಜಾಲತಾಣದಲ್ಲಿ ರಶ್ಮಿಕಾ ಮಂದಣ್ಣ ಕುರಿತ ಹೊಸ ಸುದ್ದಿಯೊಂದು ಹರಿದಾಡುತ್ತಿದ್ದಾರೆ. ರಶ್ಮಿಕಾ ಅವರು ನಿರ್ಮಾಪಕರ ಬಳಿ ತಮ್ಮ ಸಾಕು ನಾಯಿ ಔರಾಗೂ ವಿಮಾನ ಟಿಕೆಟ್​ಗೆ ಡಿಮ್ಯಾಂಡ್​ ಮಾಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದು ನಿಜಾನಾ ಎಂಬ ಪ್ರಶ್ನೆಗೆ ಇದೀಗ ರಶ್ಮಿಕಾ ಅವರೇ ಉತ್ತರ ನೀಡಿದ್ದಾರೆ.

    ಟ್ವೀಟ್​ ಮಾಡಿರುವ ರಶ್ಮಿಕಾ, ಈ ಸುದ್ದಿ ಓದಿ ನನಗೆ ನಗು ತಡೆಯಲು ಆಗಲಿಲ್ಲ ಎಂದಿದ್ದಾರೆ. ಔರಾ ನನ್ನೊಂದಿಗೆ ಪ್ರಯಾಣಿಸಲು ನೀವು ಬಯಸಿದರೂ ಸಹ ಔರಾ ಮಾತ್ರ ನನ್ನೊಂದಿಗೆ ಪ್ರಯಾಣ ಬೆಳೆಸಲು ಇಷ್ಟಪಡುವುದಿಲ್ಲ. ಅವಳು ಹೈದರಾಬಾದ್​ನಲ್ಲೇ ಖುಷಿಯಾಗಿದ್ದಾಳೆ. ನಿಮ್ಮ ಕಾಳಜಿಗೆ ಧನ್ಯವಾದಗಳು ಎಂದಿದ್ದಾರೆ.

    ಸಿನಿಮಾ ವಿಚಾರಕ್ಕೆ ಬಂದರೆ, ರಶ್ಮಿಕಾ ಮಂದಣ್ಣ ಅವರು ಕೊನೆಯ ಬಾರಿಗೆ ಪುಷ್ಪಾ: ದಿ ರೈಸ್ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡರು. ಸದ್ಯ ಅದೇ ಅದೇ ಸಿನಿಮಾದ ಮುಂದಿನ ಭಾಗ ಪುಷ್ಪಾ: ದಿ ರೂಲ್​ನಲ್ಲಿ ನಟಿಸಲಿದ್ದಾರೆ. ನಿನ್ನೆಯಷ್ಟೇ ರಶ್ಮಿಕಾ, ಅಮಿತಾಬ್ ಬಚ್ಚನ್ ಅಭಿನಯದ ಗುಡ್‌ಬೈ ಚಿತ್ರದ ಶೂಟಿಂಗ್ ಪೂರ್ಣಗೊಳಿಸಿದ್ದಾರೆ. ರಶ್ಮಿಕಾ ಶೀಘ್ರದಲ್ಲೇ “ಅನಿಮಲ್​” ಚಿತ್ರದಲ್ಲಿ ರಣಬೀರ್ ಕಪೂರ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ. ಅಲ್ಲದೆ, ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಮಿಷನ್ ಮಜ್ನು ಚಿತ್ರದಲ್ಲಿ ನಟಿಸಲಿದ್ದಾರೆ. ತಮಿಳಿನಲ್ಲಿ ದಳಪತಿ ವಿಜಯ್ ಜೊತೆಗೆ ವರಿಸು ಸಿನಿಮಾದಲ್ಲಿ ನಟಿಸಲು ಪೂರ್ವ ತಯಾರಿ ನಡೆಸುತ್ತಿದ್ದಾರೆ. (ಏಜೆನ್ಸೀಸ್​)

    ಈ ಫೋಟೋದಲ್ಲಿರೋ ಬಾಲಕಿ ಇಂದು ಬಾಲಿವುಡ್​​ ಬ್ಯೂಟಿ: ಅರೆ ಬೆತ್ತಲೆ ಫೋಟೋಗಳಿಂದಲೇ ಫೇಮಸ್​!

    ನಕಲಿ ದಾಖಲೆ ಕೊಟ್ಟು ಶಿಕ್ಷಕರಾಗಿ ನೇಮಕಗೊಂಡಿದ್ದ 2,494 ಮಂದಿಗೆ ಗೇಟ್​ ಪಾಸ್ ಕೊಟ್ಟ ಸರ್ಕಾರ!

    ಚಲಿಸುವಾಗಲೇ ಕಾರಿನ ಮೇಲೆ ಬಿದ್ದ ಬೃಹತ್​ ಮರ: ಸ್ಥಳದಲ್ಲೇ ಬ್ಯಾಂಕ್​ ಮ್ಯಾನೇಜರ್​ ದುರಂತ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts