More

    46 ವರ್ಷಗಳ ಇತಿಹಾಸದಲ್ಲೇ ದೆಹಲಿಯಲ್ಲಿ ದಾಖಲೆ ಮಳೆ: ವರುಣ ಆರ್ಭಟಕ್ಕೆ ನಲುಗಿದ ರಾಜಧಾನಿ..!

    ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಳೆರಾಯ ಅಬ್ಬರಿಸಿ ಬೊಬ್ಬಿರಿದಿದ್ದು, 46 ವರ್ಷಗಳ ಇತಿಹಾಸದಲ್ಲೇ ಗರಿಷ್ಠ ಪ್ರಮಾಣದ ಮಳೆಯನ್ನು ದೆಹಲಿ ದಾಖಲಿಸಿದೆ. ಶನಿವಾರ (ಸೆ.11) ಬೆಳಗ್ಗೆಯೂ ವರುಣರಾಯ ಆರ್ಭಟಿಸಿದ್ದು, ಈ ಬಾರಿಯ ಮುಂಗಾರು ಅವಧಿಯಲ್ಲಿ 1100 ಮಿಲಿ ಮೀಟರ್​ ಮಳೆಯೊಂದಿಗೆ ದೆಹಲಿ ದಾಖಲೆ ಬರೆದಿದೆ.

    2003ರಲ್ಲಿ 1050 ಮಿ.ಮಿ ಮಳೆಯಾಗಿತ್ತು. ಇದೀಗ ಆ ದಾಖಲೆಯನ್ನು ದೆಹಲಿ ಮುರಿದಿದೆ. 1975ರ ಬಳಿಕ ಗರಿಷ್ಠ ಪ್ರಮಾಣದ ಮಳೆಗೆ 2021ರ ಮುಂಗಾರು ಅವಧಿ ಸಾಕ್ಷಿಯಾಗಿದೆ. 1975ರಲ್ಲಿ 1150 ಮಿ.ಮೀ ಮಳೆಯಾಗಿತ್ತು. ಇದೀಗ 46 ವರ್ಷಗಳ ಬಳಿಕ ಮತ್ತೆ ಗರಿಷ್ಠ ಮಳೆಯಾಗಿದೆ.

    ದೆಹಲಿಯ ಸಫ್ದರ್​ಜಂಗ್​ ವೀಕ್ಷಣಾಲಯ ಪ್ರಕಾರ ಶುಕ್ರವಾರ ಬೆಳಗ್ಗೆ 8.30 ರಿಂದ ಶನಿವಾರ ಬೆಳಗ್ಗೆ 8.30ರವರೆಗೆ ದೆಹಲಿಯಲ್ಲಿ 94.7 ಮಿ.ಮೀ ಮಳೆಯಾಗಿದೆ. ನಿನ್ನೆಯಿಂದಲೇ ರಾಜಧಾನಿಯಲ್ಲಿ ಮಳೆರಾಯನ ಆರ್ಭಟ ಜೋರಾಗಿದೆ.

    ಶನಿವಾರ ಆರೆಂಜ್​ ಅಲರ್ಟ್​ ಘೋಷಣೆ
    ಭಾರತೀಯ ಹವಾಮಾನ ಇಲಾಖೆ ದೆಹಲಿಗೆ ಆರೆಂಜ್​ ಅಲರ್ಟ್​ ಘೋಷಣೆ ಮಾಡಿದೆ. ಇಂದು ದೆಹಲಿಯಲ್ಲಿ ಬೆಳಗ್ಗೆ 7 ಗಂಟೆಯಿಂದ 10 ಗಂಟೆಯವರೆಗೆ ಗುಡುಗು ಸಹಿತ ಗಾಳಿ ಮಳೆಯಾಗಲಿದೆ ಎಂದು ಹೇಳಿದೆ. ದೆಹಲಿಯ ಅನೇಕ ಬೀದಿಗಳು ಮತ್ತು ರಸ್ತೆಗಳು ಜಲಾವೃತಗೊಂಡಿದ್ದು, ಸಂಚಾರ ಅಸ್ತವ್ಯಸ್ತಗೊಂಡಿದೆ. ತಗ್ಗು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗುವ ಮೂಲಕ ಜನಜೀವನವು ತೊಂದರೆಗೆ ಸಿಲುಕಿದೆ. (ಏಜೆನ್ಸೀಸ್​)

    ನಟ ಧರಮ್ ತೇಜ್​ ಇತ್ತೀಚೆಗೆ ಖರೀದಿಸಿದ್ದ ದುಬಾರಿ ಬೈಕ್​ನಿಂದಲೇ ದುರಂತ: ಅದರ ಬೆಲೆ ಕೇಳಿದ್ರೆ ದಂಗಾಗ್ತೀರಾ!

    ಸಂಚಾರಿ ಪೊಲೀಸ್ ಆಯುಕ್ತರು ಓದಲೇಬೇಕಾದ ಸ್ಟೋರಿ ಇದು: ಪೊಲೀಸರಿಗೆ ಸವಾಲಾದ ಬೈಕ್ ಸವಾರ ಈತ!

    ರಾಜ್ಯವೇ ಕಂಬನಿ ಮಿಡಿದಿದ್ದ ವಿಸ್ಮಯ ಸಾವು ಪ್ರಕರಣ: ಪೊಲೀಸ್​ ಚಾರ್ಜ್​ಶೀಟ್​ನಲ್ಲಿ ಗಂಡನ ಕರಾಳ ಮುಖ ಬಯಲು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts