More

    ಮಹಾರಾಷ್ಟ್ರ ಸೇರಿ ದೇಶದ ಕೇಂದ್ರ ಭಾಗಗಳಲ್ಲಿ ಮಾನ್ಸೂನ್​ ಮಾರುತಗಳು ವಾಡಿಕೆಗಿಂತ ವಿಳಂಬ ಸಾಧ್ಯತೆ

    ಮುಂಬೈ: ಈ ಬಾರಿ ನೈಋತ್ಯ ಮುಂಗಾರು ಮಾರುತಗಳು ವಾಡಿಕೆಗಿಂತ ಮುಂಚಿತವಾಗಿಯೇ ಕಳೆದ ಭಾನುವಾರ ಕೇರಳಕ್ಕೆ ಪ್ರವೇಶಿಸಿದ್ದರೆ, ಮಹಾರಾಷ್ಟ್ರದಲ್ಲಿ ವಾಡಿಕೆಗಿಂತ ಹಿಂದುಳಿಯಲಿದೆ. ಇದಲ್ಲದೆ, ದೇಶದ ಕೇಂದ್ರ ಭಾಗಗಳಾದ ಛತ್ತೀಸ್​ಗಢ, ಒಡಿಶಾ ಮತ್ತು ಪೂರ್ವ ಮಧ್ಯಪ್ರದೇಶವು ಕೂಡ ನೈಋತ್ಯ ಮುಂಗಾರು ಮಾರುತಗಳ ಪ್ರವೇಶಕ್ಕೆ ಹೆಚ್ಚಿನ ಸಮಯ ಕಾಯಬೇಕಾಗಿದೆ. ಗುಜರಾತ್​, ಜಾರ್ಖಂಡ್​ ಮತ್ತು ಬಿಹಾರ ರಾಜ್ಯಗಳಲ್ಲಿ ನಿಗದಿಯಂತೆ ಜೂನ್​ 15ರ ನಂತರ ಮುಂಗಾರು ಮಾರುತಗಳು ಪ್ರವೇಶಿಸಲಿವೆ.

    ಮಾನ್ಸೂನ್ ಮಾರುತಗಳು ವೇಗವನ್ನು ಪಡೆಯುತ್ತಿದೆ. ಆಗ್ನೇಯ ಅರೇಬಿಯನ್ ಸಮುದ್ರ ಮತ್ತು ಮಾಲ್ಡೀವ್ಸ್ ಹಾಗೂ ಕೊಮೊರಿನ್ ಸಮುದ್ರ ಪ್ರದೇಶದ ಸಮಭಾಜಕ ವಲಯದ ಮೇಲಿರುವ ಮೋಡಗಳು ಸಮೂಹವು ಕೆಲವೇ ದಿನಗಳಲ್ಲಿ ಕೇರಳ ಕರಾವಳಿ ತೀರ ಪ್ರದೇಶವನ್ನು ತಲುಪಲಿದ್ದು, ಕರಾವಳಿ ಕರ್ನಾಟಕ ಮತ್ತು ತಮಿಳುನಾಡು ಹಾಗೂ ರಾಯಲಸೀಮಾದ ಒಳಭಾಗಗಳಿಗೆ ವೇಗವಾಗಿ ಹರಡಲಿದೆ.

    ಸಾಮಾನ್ಯ ಪರಿಸ್ಥಿತಿಯಲ್ಲಿ ಕೊಂಕಣ ಮತ್ತು ಮಧ್ಯ ಮಹಾರಾಷ್ಟ್ರದ ದಕ್ಷಿಣ ಭಾಗಗಳು ಜೂನ್ 5 ರಿಂದ 10ರ ನಡುವೆ ಮಾನ್ಸೂನ್ ಮಾರುತಗಳನ್ನು ಸ್ವಾಗತಿಸುತ್ತವೆ. ಮಧ್ಯ ಮಹಾರಾಷ್ಟ್ರದ ಉಳಿದ ಭಾಗಗಳು, ಮರಾಠವಾಡ, ವಿದರ್ಭ, ಛತ್ತೀಸ್‌ಗಢ, ಒಡಿಶಾ ಮತ್ತು ಪಶ್ಚಿಮ ಬಂಗಾಳಕ್ಕೆ ಜೂನ್ 15ರ ಸುಮಾರಿಗೆ ಮಾನ್ಸೂನ್​ ಮಾರುತಗಳು ಪ್ರವೇಶಿಸಲಿವೆ. ದಕ್ಷಿಣ ಭಾರತದ ಪೆನಿನ್ಸುಲಾ ಮತ್ತು ನೆರೆಹೊರೆ ಪ್ರದೇಶದಲ್ಲಿ ಜೂನ್​ 08 ಅಥವಾ 10ರಿಂದ ಮಾನ್ಸೂನ್ ಮಾರುತಗಳ ಆರ್ಭಟ ಪ್ರಾರಂಭವಾಗುವ ನಿರೀಕ್ಷೆಯಿದೆ. ಆದರೆ, ಮಹಾರಾಷ್ಟ್ರದ ಭಾಗಗಳಿಗೆ ಮಾನ್ಸೂನ್​ ಪ್ರಯಾಣವು ಹೆಚ್ಚು ದಿನಗಳನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ.

    ಸಾಮಾನ್ಯವಾಗಿ ಮಹಾರಾಷ್ಟ್ರದ ಹೆಚ್ಚಿನ ಭಾಗಗಳು ಮತ್ತು ನಿರ್ದಿಷ್ಟವಾಗಿ ಮರಾಠವಾಡ ಮತ್ತು ವಿದರ್ಭಗಳು ಹೆಚ್ಚಾಗಿ ಮಾನ್ಸೂನ್ ಮಳೆಯ ಮೇಲೆಯೇ ಅವಲಂಬಿತವಾಗಿವೆ. ಸಾಮಾನ್ಯ ದಿನಗಳಲ್ಲಿ ರೈತ ಸಮುದಾಯವು ಜೂನ್ ಮೊದಲನೇ ವಾರದಲ್ಲಿ ತಮ್ಮ ಕೃಷಿ ಚಟುವಟಿಕೆಗಳನ್ನು ಆರಂಭಿಸುತ್ತಾರೆ. ಏಕೆಂದರೆ, ಜೂನ್ 10ರ ಸುಮಾರಿಗೆ ಅನೇಕ ಭಾಗಗಳಲ್ಲಿ ಮಳೆಯಾಗುವ ನಿರೀಕ್ಷೆ ಇರುವುದರಿಂದ ಮುಂಚಿತವಾಗಿಯೆ ಕೆಲಸ ಕಾರ್ಯಗಳನ್ನು ಆರಂಭಿಸುತ್ತಾರೆ. ಜೂನ್ ಆರಂಭದಲ್ಲಿ ಕೃಷಿ ಚಟುವಟಿಕೆಗಳು ಸಂಪೂರ್ಣ ವೇಗ ಪಡೆದುಕೊಳ್ಳುತ್ತವೆ.

    ಆದರೆ, ಈ ಬಾರಿ ಮುಂಗಾರು ಮಳೆಯಲ್ಲಿ ನಿರೀಕ್ಷಿತ ವಿಳಂಬವಾಗುವ ಕಾರಣ, ರೈತರು ತಮ್ಮ ಕಾರ್ಯಾಚರಣೆಗಳನ್ನು ವಿಳಂಬಗೊಳಿಸಲು ಹವಾಮಾನ ಸೇವೆ ಒದಗಿಸುವ ಖಾಸಗಿ ಸ್ಕೈಮೆಟ್​ ಸಂಸ್ಥೆ ಸೂಚಿಸಿದೆ. ಜೂನ್ 15 ರ ಮೊದಲು ಮಾನ್ಸೂನ್​ ಮಾರುತಗಳ ಹರಡುವಿಕೆ ಮತ್ತು ಮಳೆಯ ತೀವ್ರತೆಯ ಸಾಧ್ಯತೆ ತೀರಾ ಕಡಿಮೆ ಇರಲಿದೆ ಎಂದು ಸ್ಕೈಮೆಟ್ ತಿಳಿಸಿದೆ. ಮಹಾರಾಷ್ಟ್ರ ಮತ್ತು ಇತರ ಕೇಂದ್ರ ಭಾಗಗಳ ಮಳೆಯಾಶ್ರಿತ ಪ್ರದೇಶಗಳ ಜನರು ಒಂದು ವಾರಗಳ ಕಾಲ ಕಾದು ನೋಡುವ ತಂತ್ರವನ್ನು ಅನುಸರಿಬೇಕೆಂದು ಸ್ಕೈಮೆಟ್​ ಹೇಳಿದೆ. (ಏಜೆನ್ಸೀಸ್​)

    ಕಮಲಾಪುರ ಬಳಿ ಗೂಡ್ಸ್ ವಾಹನ​ ಡಿಕ್ಕಿಗೆ ಬಸ್ ಪಲ್ಟಿಯಾಗಿ ಬೆಂಕಿ ಹೊತ್ತಿಕೊಂಡು ಆರು ಮಂದಿ ಸಜೀವ ದಹನ

    ಪಾಲಕರ ವಿರೋಧದ ಮಧ್ಯೆಯೂ ಪ್ರೀತಿಸಿ ಮದ್ವೆಯಾದ ಮರುದಿನವೇ ಗಂಡನಿಗೆ ಶಾಕ್​ ಕೊಟ್ಟ ಯುವತಿ!

    ಇನ್ನೊಂದು ಸಾಮೂಹಿಕ ವಲಸೆ? ಹಿಂದುಗಳಲ್ಲಿ ಟಾರ್ಗೆಟ್ ಆತಂಕ | 72 ತಾಸಲ್ಲಿ ಮತ್ತೊಂದು ಹತ್ಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts