More

    ಮೇ ತಿಂಗಳಲ್ಲಿ ಮೃತಪಟ್ಟ ವ್ಯಕ್ತಿಗೆ ಡಿಸೆಂಬರ್​ನಲ್ಲಿ 2ನೇ ಡೋಸ್​ ಕರೊನಾ ಲಸಿಕೆ: ಆಘಾತಕ್ಕೊಳಗಾದ ಕುಟುಂಬ

    ಭೋಪಾಲ್​: ದೇಶದಲ್ಲಿ ಕರೊನಾ ವೈರಸ್​ ರೂಪಾಂತಾರಿ ಒಮಿಕ್ರಾನ್​ ಭೀತಿ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಕೋವಿಡ್​ ಲಸಿಕೆ ನೀಡುವ ಪ್ರಕ್ರಿಯೆಗೆ ಚುರುಕು ಮುಟ್ಟಿಸಲಾಗಿದ್ದು, ಯಾರು ಇನ್ನು ಲಸಿಕೆ ಪಡೆದುಕೊಂಡಿಲ್ಲವೋ, ಅವರನ್ನು ಹುಡುಕಿ ಲಸಿಕೆ ನೀಡುವ ಕೆಲಸ ಭರದಿಂದ ಸಾಗಿದೆ. ಆದರೆ, ಲಸಿಕೆ ನೀಡುವ ಭರದಲ್ಲಿ ಮಧ್ಯಪ್ರದೇಶದ ಅಧಿಕಾರಿಗಳು ಯಡವಟ್ಟೊಂದನ್ನು ಮಾಡಿಕೊಂಡಿದ್ದಾರೆ.

    ಕಳೆದ ಮೇ ತಿಂಗಳಲ್ಲಿ ಮೃತಪಟ್ಟ ವ್ಯಕ್ತಿಗೆ 2021ರ ಡಿಸೆಂಬರ್ 3ರಂದು ಎರಡನೇ ಡೋಸ್​​ ಲಸಿಕೆ ನೀಡಲಾಗಿದೆ. ಈ ಸಂಬಂಧ ಮೃತ ವ್ಯಕ್ತಿಯ ಮೊಬೈಲ್​ಗೆ ಸಂದೇಶವೊಂದು ಬಂದಿದ್ದು, ಲಸಿಕೆ ಪ್ರಮಾಣ ಪತ್ರವನ್ನು ಡೌನ್​ಲೋಡ್​ ಮಾಡಿಕೊಳ್ಳುವಂತೆ ಎಸ್​ಎಂಎಸ್​ನಲ್ಲಿ ತಿಳಿಸಲಾಗಿದೆ. ಈ ಘಟನೆ ಮಧ್ಯಪ್ರದೇಶದ ರಾಜಗಢ ಜಿಲ್ಲೆಯಲ್ಲಿ ನಡೆದಿದ್ದು, ಅಧಿಕಾರಿಗಳ ಕಾರ್ಯವೈಖರಿಗೆ ತೀವ್ರ ಟೀಕೆಗಳು ವ್ಯಕ್ತವಾಗುತ್ತಿವೆ.

    ಮಧ್ಯಪ್ರದೇಶದ ಬಯೋರಾ ಪಟ್ಟಣದ ನಿವಾಸಿ ಪುರುಷೋತ್ತಮ್​ ಶಕ್ಯಾವಾರ್​ (78) ಕಳೆದ ಮೇ 8ರಂದು ಕೋವಿಡ್​ ಲಸಿಕೆಯ ಮೊದಲನೇ ಡೋಸ್​ ತೆಗೆದುಕೊಂಡಿದ್ದರು. ಆದಾಗ್ಯೂ, ಅನಾರೋಗ್ಯದಿಂದ ಬಳಲುತ್ತಿದ್ದ ಪುರುಷೋತ್ತಮ್,​ ಚಿಕಿತ್ಸೆ ಫಲಿಸದೇ ಮೇ 24ರಂದು ಇಂದೋರ್​ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಆದರೆ, ಡಿ.3ರಂದು ಮೃತ ಪುರುಷೋತ್ತಮ್​ ಮೊಬೈಲ್​ಗೆ ಸಂದೇಶವೊಂದು ಬಂದಿದ್ದು, ಎರಡನೇ ಡೋಸ್​ ಲಸಿಕೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವುದಾಗಿಯೂ ಮತ್ತು ಪ್ರಮಾಣ ಪತ್ರವನ್ನು ಡೌನ್​ಲೋಡ್​ ಮಾಡಿಕೊಳ್ಳುವಂತೆ ಎಸ್​ಎಂಎಸ್​ನಲ್ಲಿ ತಿಳಿಸಲಾಗಿದೆ. ಅದನ್ನು ನೋಡಿ ಕುಟುಂಬದ ಸದಸ್ಯರಿಗೆ ನಿಜಕ್ಕೂ ಶಾಕ್​ ಆಗಿದೆ.

    ಇದಾದ ಬಳಿಕ ಈ ವಿಚಾರವನ್ನು ಜಿಲ್ಲಾ ಲಸಿಕಾ ಅಧಿಕಾರಿಗಳ ಗಮನಕ್ಕೆ ಮೃತನ ಕುಟುಂಬಸ್ಥರು ತಂದಿದ್ದು, ಕಂಪ್ಯೂಟರ್ ದೋಷದಿಂದ ಇದು ಸಂಭವಿಸಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ. ಈ ಕುರಿತು ತನಿಖೆಗೆ ಆದೇಶಿಸಲಾಗಿದೆ ಎಂದು ಹೇಳಿದ್ದಾರೆ. ಮತ್ತೊಂದೆಡೆ, ಲಸಿಕೆಯನ್ನು ಮೊದಲು ವಿತರಿಸಿದಾಗಿನಿಂದ ಅನೇಕ ಜನರು ತಮ್ಮ ಫೋನ್ ಸಂಖ್ಯೆಯನ್ನು ತಪ್ಪಾಗಿ ನಮೂದಿಸುತ್ತಿದ್ದಾರೆ ಎಂದು ಬಯೋರಾ ಬ್ಲಾಕ್ ವೈದ್ಯಕೀಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ, ಇದು ಕೂಡ ಈ ರೀತಿಯ ಯಡವಟ್ಟಿಗೆ ಒಂದು ಕಾರಣವಾಗಿರಬಹುದು ಎಂದಿದ್ದಾರೆ. (ಏಜೆನ್ಸೀಸ್​)

    ಪ್ರಧಾನಿ ಮೋದಿ ಟ್ವಿಟರ್​ ಖಾತೆ ಹ್ಯಾಕ್​ ಮಾಡಿ ಸರಣಿ ಟ್ವೀಟ್: ಹ್ಯಾಕ್​ ಮಾಡಿದವನ ಹೆಸರು ಬಹಿರಂಗ​

    ಜೂಜಿನಿಂದ ಹಾಳಾದ ನಿವೃತ್ತ ಸೈನಿಕ: ಆ ಕ್ಷಣ.. ಅಂಕಣ..

    ಹಾಸ್ಯನಟ ಸಂಜು ಬಸಯ್ಯ ಅವರದ್ದು 8 ವರ್ಷಗಳ ಪ್ರೀತಿ! ಪ್ರೇಯಸಿ ಜೊತೆಗಿನ ಫೋಟೋಗಳು ವೈರಲ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts