More

    ಲವರ್​ ಜತೆ ತಂಗಿ ಬೈಕ್​ನಲ್ಲಿ ಹೋಗುವುದನ್ನು ನೋಡಿದ ಅಣ್ಣ: ಮುಂದಾಗಿದ್ದೇನು? ಇಲ್ಲಿದೆ ಭಯಾನಕ ದೃಶ್ಯ

    ಭೋಪಾಲ್​: ಸಹೋದರಿ ಬಾಯ್​ಫ್ರೆಂಡ್​ ಜತೆ ಬೈಕ್​ನಲ್ಲಿ ಹೋಗುತ್ತಿರುವುದನ್ನು ನೋಡಿ ಆಕ್ರೋಶಗೊಂಡ ಸಹೋದರನೊಬ್ಬ ಅವರನ್ನು ಮಿನಿ ಟ್ರಕ್​ನಲ್ಲಿ ಹಿಂಬಾಲಿಸಿ ಹೋಗಿ ಡಿಕ್ಕಿ ಹೊಡೆದಿರುವ ಸಿನಿಮೀಯ ಘಟನೆ ಮಧ್ಯಪ್ರದೇಶದ ಭೋಪಾಲ್​ನ ಅಯೋಧ್ಯ ನಗರದಲ್ಲಿ ನಡೆದಿದೆ.

    ತಂಗಿಯ ಮೇಲಿನ ಅನುಮಾನದಿಂದ ಆಕೆ ಮನೆಯಿಂದ ಹೊರ ಹೋದಾಗ ಸಹೋದರ ಆಕೆಯನ್ನು ಹಿಂಬಾಲಿಸಿದ್ದಾನೆ. ಆಕೆ ತನ್ನ ಬಾಯ್​ಫ್ರೆಂಡ್​ ಜತೆ ಬೈಕ್​ನಲ್ಲಿ ಹೋಗುವುದನ್ನು ನೋಡಿ ಹೇಗಾದರೂ ಮಾಡಿ ಇಬ್ಬರನ್ನು ಹಿಡಿಯಬೇಕೆಂದು ಮಿನಿ ಟ್ರಕ್​ನಲ್ಲಿ ಚೇಸ್​ ಮಾಡಿದ್ದಾನೆ.

    ಮೊದಲು ಇಬ್ಬರನ್ನು ತಡೆಯಬೇಕೆಂದು ಯತ್ನಿಸಿದ್ದಾನೆ. ಆದರೆ, ಅಣ್ಣನನ್ನು ನೋಡಿದ ತಂಗಿ ಬೈಕ್​ ಅನ್ನು ವೇಗವಾಗಿ ಓಡಿಸುವಂತೆ ಹೇಳಿದ್ದಾಳೆ. ಕೊನೆಗೆ ಹೇಗಾದರೂ ಮಾಡಿ ಹಿಡಿಯಲೇ ಬೇಕೆಂಬ ನಿರ್ಧಾರಕ್ಕೆ ಬಂದ ಸಹೋದರ ವೇಗವಾಗಿ ಹೋಗಿ ಬೈಕ್​ಗೆ ಡಿಕ್ಕಿ ಹೊಡೆದು ಇಬ್ಬರನ್ನು ಕೆಳಗೆ ಬೀಳಿಸಿದ್ದಾನೆ. ಈ ದೃಶ್ಯ ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸರೆಯಾಗಿದ್ದು, ಜಾಲತಾಣದಲ್ಲಿ ವೈರಲ್​ ಆಗಿದೆ.

    ಘಟನೆಯಲ್ಲಿ ಯುವತಿ ಮತ್ತು ಬಾಯ್​ಫ್ರೆಂಡ್​ಗೆ ಗಾಯಗಳಾಗಿವೆ. ಇಬ್ಬರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರು ಕೂಡ ದೂರು ದಾಖಲಿಸಿದ್ದು, ಕೊಲೆಗೆ ಯತ್ನಿಸಿದ ಆರೋಪದ ಮೇಲೆ ಯುವತಿಯ ಸಹೋದರನನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. (ಏಜೆನ್ಸೀಸ್​)

    ಲಕ್ಷಾಂತರ ಮೌಲ್ಯದ ಅವಧಿ ಮೀರಿದ ಮಾತ್ರೆಗಳು ಹೊಸಪೇಟೆ ಹೊರವಲಯದಲ್ಲಿ ಪತ್ತೆ: ಸಾರ್ವಜನಿಕರ ಆಕ್ರೋಶ

    ಕಾಡುತ್ತಿದೆ ಕಲ್ಲಿದ್ದಲು ಕೊರತೆ, ವಿದ್ಯುತ್ ಅಭಾವ ಭೀತಿ; 81 ಸ್ಥಾವರಗಳಲ್ಲಿ ನಿಶ್ಚಿತ ದಾಸ್ತಾನಿಲ್ಲ  

    5 ವರ್ಷದ ಮಕ್ಕಳಿಗೂ ಲಸಿಕೆ; ಕೊರ್ಬೆವ್ಯಾಕ್ಸ್ ನೀಡಲು ಕೇಂದ್ರದ ತಜ್ಞರ ಸಮಿತಿ ಶಿಫಾರಸು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts