More

    ಪತಿಯೂ ಬೇಕು ಆದ್ರೆ ಮನಸ್ಸು ಬೇರೆಯವರ ಜತೆ ಮಲಗಲು ಬಯಸುತ್ತಿದೆ ಏನು ಮಾಡಲಿ?

    ಲಂಡನ್​: ಯಾವುದೇ ವ್ಯಕ್ತಿ ಆಗಿರಲಿ ತನ್ನಲ್ಲಿರುವ ಅನೇಕ ಗೊಂದಲಗಳಿಗೆ ಪರಿಹಾರ ಹುಡುಕುವ ಪ್ರಯತ್ನದ ಭಾಗವಾಗಿ ಆತ ತಜ್ಞರ ಮೊರೆ ಹೊಗುವುದು ಸಹಜ. ಅದರಂತೆಯೇ ಲಂಡನ್​ ಮೂಲದ ಹೆಸರೇಳಲು ಇಚ್ಛಿಸಿದ ಮಹಿಳೆಯೊಬ್ಬಳು ತನ್ನ ಮನಸ್ಸಿನಲ್ಲಾಗುತ್ತಿದ್ದ ವಿಚಿತ್ರ ಆಸೆಗೆ ಪರಿಹಾರ ಕಂಡುಕೊಳ್ಳಲು ನಿಟ್ಟಿನಲ್ಲಿ ತಜ್ಞೆಯ ಮೊರೆ ಹೋಗಿದ್ದಾರೆ.

    ಕೊಲೀನ್ ನೋಲನ್ ಎಂಬ ತಜ್ಞೆಯ ಮೊರೆ ಹೋಗಿರುವ ಲಂಡನ್​ ಮಹಿಳೆ ಅವರ “ಡಿಯರ್ ಕೊಲೀನ್” ಎಂಬ ನ್ಯೂಸ್​ ಲೆಟರ್​ಗೆ ಮೇಲ್​ ಮಾಡಿ ತನ್ನ ಸಮಸ್ಯೆಯನ್ನು ಹೇಳಿಕೊಂಡು ಪರಿಹಾರ ಕೇಳಿದ್ದಾರೆ. ಅಂದಹಾಗೆ ಕೋಲಿನ್​ ಅವರು ಲವ್​, ಸೆಕ್ಸ್​ ಮತ್ತು ಸಂಬಂಧಗಳ ಮೇಲಿನ ಪ್ರಶ್ನೆಗಳಿಗೆ ಉತ್ತರ ನೀಡುತ್ತಾರೆ. ಲಂಡನ್​ ಮಹಿಳೆ ಕೊಲೀನ್​ಗೆ ಬರೆದ ಪತ್ರದ ಬಗ್ಗೆ ಡೈಲಿ ಮಿರರ್​ ವರದಿ ಮಾಡಿದೆ.

    ಮಹಿಳೆಯ ಪತ್ರದಲ್ಲಿ ಏನಿದೆ?
    ಸದ್ಯ ದಿನಗಳಲ್ಲಿ ನನ್ನ ಮದುವೆ ಸಂಬಂಧ ಕುರಿತು ನನ್ನಲ್ಲಿ ತುಂಬಾ ಗೊಂದಲಗಳು ಮೂಡುತ್ತಿವೆ. ಮದುವೆಯಾಗಿ 10 ವರ್ಷಗಳಿಂದ ನಾನು ಮತ್ತು ಪತಿ ಸಂಬಂಧದಲ್ಲಿದ್ದೇವೆ. 18 ತಿಂಗಳ ಮಗು ಸಹ ಇದೆ. ಹರಿಗೆಯ ನಂತರ ನನ್ನಲ್ಲಿ ಆಘಾತಕಾರಿ ಒತ್ತಡ ಹೆಚ್ಚಾಗಿದೆ. ಆದರೂ ಇತ್ತೀಚೆಗಷ್ಟೇ ನಾನು ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದೇನೆ. ಇತ್ತೀಚಿನ ದಿನಗಳಲ್ಲಿ ನನ್ನ ಸಂಬಂಧದಲ್ಲಿ ನಾನೇನು ತುಂಬಾ ಮಿಸ್​ ಮಾಡಿಕೊಂಡಿದ್ದೇನೆಂದು ಕಾಡುತ್ತಿದೆ ಎಂದು ಲಂಡನ್​ ಮಹಿಳೆ ಹೇಳಿಕೊಂಡಿದ್ದಾಳೆ.

    ನಾನು ಇನ್ನೊಂದು ಮಗುವನ್ನು ಬಯಸುತ್ತೇನೆ. ಆದರೆ, ನನ್ನ ಪತಿ ಇಷ್ಟಪಡುವುದಿಲ್ಲ. ಇದು ನನಗೆ ದೊಡ್ಡ ಸಮಸ್ಯೆಯಾಗಿದೆ. ಅಲ್ಲದೆ, ನನ್ನ ಪತಿಯಿಂದ ಹೆಚ್ಚು ಪ್ರೀತಿಯಾಗಲಿ ಅಥವಾ ವಾತ್ಸಲ್ಯವಾಗಲಿ ದೊರಕುತ್ತಿಲ್ಲ. ನನ್ನ ಮಾನಸಿಕ ಸಮಸ್ಯೆಯ ಫಲಿತಾಂಶವಾಗಿ ಎರಡು ವರ್ಷಗಳ ನಮ್ಮ ಸಾಮಾನ್ಯ ಸಂಬಂಧಕ್ಕೆ ತೊಂದರೆಯಾಗಿದೆ ಎಂದು ನಾನು ಚಿಂತಿಸುತ್ತಿದ್ದೇನೆ ಎಂದಿದ್ದಾರೆ.

    ಮೊದಲನೆಯದಾಗಿ ನಾನು ಮೋಸವನ್ನು ಕ್ಷಮಿಸುವವಳಲ್ಲ. ಆದರೆ, ಸುಮಾರು ಒಂದು ವರ್ಷದಿಂದ ನಾನು ನನ್ನ ಸಹೋದ್ಯೋಗಿಯೊಂದಿಗೆ ಮಾತನಾಡುತ್ತಿದ್ದೇನೆ. ಇದೀಗ ಇಬ್ಬರ ನಡುವಿನ ಮಾತುಕತೆ ಲೈಂಗಿಕ ಆಸಕ್ತಿ ಕಡೆಗೆ ತಿರುಗಿದೆ. ನಾವಿಬ್ಬರು ತುಂಬಾ ಹತ್ತಿರವಾಗಿದ್ದೇವೆ. ಆದರೆ, ಈವರೆಗೂ ದೈಹಿಕವಾಗಿ ಇಬ್ಬರ ನಡುವೆ ಏನು ನಡೆದಿಲ್ಲ. ಆದರೆ, ನನ್ನ ಪತಿಯನ್ನು ಬಿಡಲು ನನಗೆ ಇಷ್ಟವಿಲ್ಲ. ಆದರೆ, ಬೇರೆಯವರೊಂದಿಗೆ ಸೆಕ್ಸ್​ ಮಾಡಲು ಬಯಸುತ್ತಿದ್ದೇನೆ. ಅಲ್ಲದೆ, ಪತಿಯೊಂದಿಗೆ ಉಳಿಯಲು ನನ್ನ ಕಾರಣಗಳನ್ನು ಪ್ರಶ್ನಿಸುತ್ತಿದ್ದೇನೆ. ಈ ಹಿಂದೆಯೂ ನಾನು ಹುಡುಗಿಯರೊಂದಿಗೂ ಸಹ ಸಂಬಂಧ ಹೊಂದಿದ್ದೆ. ಸ್ತ್ರೀ ಗಮನಕ್ಕಾಗಿ ನಾನು ಹಾತೊರೆಯುತ್ತಿದೆ. ಆದರೆ, ಮಹಿಳೆಯರೊಂದಿಗೆ ದೀರ್ಘಕಾಲಿಕ ಸಂಬಂಧವನ್ನು ಬಯಸಿರಲಿಲ್ಲ. ಪುರುಷರನ್ನು ಮದುವೆಯಾಗಿ ಸ್ವಾಭಾವಿಕವಾಗಿ ಮಗು ಪಡೆಯಬೇಕೆಂದು ಯಾವಾಗಲೂ ಬಯಸುತ್ತಿದ್ದೆ ಎಂದು ಲಂಡನ್​ ಮಹಿಳೆ ತಿಳಿಸಿದ್ದಾರೆ.

    ನನ್ನ ಮಾನಸಿಕ ಆರೋಗ್ಯ ಹೋರಾಟಗಳನ್ನು ಮೀರಿ ನನ್ನ ನಿಜವಾದ ಆತ್ಮದೊಂದಿಗೆ ಮರುಸಂಪರ್ಕಗೊಳ್ಳುವುದನ್ನು ನಾನು ಕಂಡುಕೊಂಡಿದ್ದೇನೆ ಮತ್ತು ಅದರಿಂದ ನಾನು ತುಂಬಾ ಗೊಂದಲಕ್ಕೊಳಗಾಗಿದ್ದೇನೆ. ಹೀಗಾಗಿ ನಾನು ನನ್ನ ಪತಿಯನ್ನು ತೊರೆಯಬಹುದೇ? ಬೇರೊಬ್ಬರನ್ನು ಹುಡುಕೊಳ್ಳಬಹುದಾ? ನಾನು ಸ್ವಾರ್ಥಿಯೇ? ನಾನು ಬೇರೆಯವರೊಂದಿಗೆ ಸೆಕ್ಸ್​ ಬಯಸಬಹುದಾ? ನನಗೆ ಸಾಕಷ್ಟು ಉತ್ತರಗಳು ಬೇಕೆಂದು ಬಯಸಿದ್ದೇನೆಂದು ಲಂಡನ್​ ಮಹಿಳೆ ಕೊಲೀನ್​ ಅವರಿಗೆ ಬರೆದ ಪತ್ರದಲ್ಲಿ ಕೇಳಿಕೊಂಡಿದ್ದಾರೆ.

    ಕೊಲೀನ್​ ಉತ್ತರವೇನು?
    ಮಹಿಳೆಯ ಗೊಂದಲಗಳಿಗೆ ಉತ್ತರಿಸಿರುವ ಕೊಲೀನ್, ಮೊದಲನೆಯದಾಗಿ ನಿಮ್ಮ ಮನಸ್ಸಿನ ಸುತ್ತಲೂ ಹಲವಾರು ಇತರೆ ಸಮಸ್ಯೆಗಳಿರುವಾಗ ನೀವು ಇನ್ನೊಂದು ಮಗುವಿನ ಬಗ್ಗೆ ಏಕೆ ಯೋಚಿಸುತ್ತಿರಬೇಕೆಂದು ನನಗೆ ಖಾತ್ರಿಯಿಲ್ಲ.​ ನಿಮ್ಮ ಪತಿಯೊಂದಿಗಿನ ಸಂಬಂಧದ ಬಗ್ಗೆ ನೀವು ಪ್ರಶ್ನೆ ಮಾಡುತ್ತೀದ್ದೀರಿ. ಅಲ್ಲದೆ, ಸಹೋದ್ಯೋಗಿ ಜತೆಯೂ ಚೆಲ್ಲಾಟವಾಡುತ್ತಿದ್ದೀರಿ ಮತ್ತು ನಿಮ್ಮ ಲೈಂಗಿಕ ಜೀವನದ ಬಗ್ಗೆಯೂ ಪ್ರಶ್ನೆಗಳನ್ನು ಎತ್ತಿದ್ದೀರಿ. ನೀವು ಬಯಸಿದಂತೆ ಇನ್ನೊಂದು ಮಗುವಾದರೆ ಎಲ್ಲವೂ ಸರಿ ಹೋಗುವುದಿಲ್ಲ. ಅದು ಇನ್ನು ಹೆಚ್ಚು ಒತ್ತಡವನ್ನು ನೀಡುತ್ತದೆ. ಬಹುಶಃ ನಿಮ್ಮ ಪತಿ ಇನ್ನೊಂದು ಮಗು ನಿಮ್ಮನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಹೇಗೆ ಪರಿಣಾಮ ಬೀರುತ್ತದೆ ಮತ್ತು ಅದು ನಿಮ್ಮ ದಾಂಪತ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬ ಬಗ್ಗೆ ಚಿಂತಿತರಾಗಿದ್ದಾರೆ. ಈ ಸಮಯದಲ್ಲಿ ಅವರು ನಿಮ್ಮ ಆರೋಗ್ಯ ಮತ್ತು ಯೋಗಕ್ಷೇಮವನ್ನು ಅಪಾಯಕ್ಕೆ ತೆಗೆದುಕೊಳ್ಳಲು ಬಯಸುವುದಿಲ್ಲ ಅನಿಸುತ್ತದೆ ಎಂದು ಕೊಲೀನ್​ ಹೇಳಿದ್ದಾರೆ.

    ಮುಂದುವರಿದು ನಿಮ್ಮ ಮದುವೆಯ ಬಗ್ಗೆ ನೀವು ಸರಿಯಾದ ಚರ್ಚೆಯನ್ನು ನಡೆಸಿದಂತೆ ತೋರುತ್ತಿಲ್ಲ. ಮೊದಲ ಪತಿಯೊಂದಿಗೆ ಮುಕ್ತವಾಗಿ ಮಾತನಾಡಿ ಸಮಸ್ಯೆ ಅಥವಾ ಗೊಂದಲವನ್ನು ಬಗೆಹರಿಸಿಕೊಳ್ಳಿ. ಪತಿಯನ್ನು ಬಿಟ್ಟು ಕೊಡಬೇಡಿ. ಖಂಡಿತವಾಗಿಯೂ ನೀವು ಅನುಭವಿಸುತ್ತಿರುವುದು ನಿಮಗೆ ಜೀವನದಿಂದ ಏನು ಬೇಕೋ ಅದನ್ನು ಮರುಮೌಲ್ಯಮಾಪನ ಮಾಡಲು ನೀವು ಯೋಚಿಸುತ್ತೀರಿ. ಆದರೆ, ಒಂದೇ ಸಮಯದಲ್ಲಿ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುವುದು ತಪ್ಪು ಎಂದು ಭಾವಿಸುತ್ತೇನೆ. ನಿಮ್ಮ ಸಹೋದ್ಯೋಗಿಯಿಂದ ನೀವು ವಿಚಲಿತರಾಗಬೇಡಿ. ಎಲ್ಲವನ್ನು ಬದಿಗಿಟ್ಟ ಆದ್ಯತೆ ಮೇರೆಗೆ ಎಲ್ಲವನ್ನು ನಿಭಾಯಿಸಿ. ಸದ್ಯ ಮಗುವನ್ನು ಹೊಂದುವುದು ಪತಿಗೆ ಸರಿಯಿಲ್ಲ ಅನಿಸುತ್ತಿದೆ. ಹೀಗಾಗಿ ಅವರನ್ನು ಸಹ ಗಣನೆಗೆ ತೆಗೆದುಕೊಂಡು ಉತ್ತಮ ಜೀವನ ಕಂಡುಕೊಳ್ಳಿ ಎಂದು ಕೊಲೀನ್​​ ಸಲಹೆ ನೀಡಿದ್ದಾರೆ. (ಏಜೆನ್ಸೀಸ್)

    ವಿದ್ಯಾರ್ಥಿನಿಯರಿಗೆ ಸಿನಿಮಾ ಆಫರ್​​ ಜತೆಗೆ ಆನ್​ಲೈನ್​ ಕ್ಲಾಸ್​ನಲ್ಲಿ ಅರೆಬೆತ್ತಲಾಗಿದ್ದ ಶಿಕ್ಷಕ ಅಂದರ್​!

    ಹಣ್ಣು ಬೇಕಾ ಮಾವಿನಹಣ್ಣು…. ರೀಲ್‌ ಅಲ್ಲ ಇದು ರಿಯಲ್‌: ತೋಟದಲ್ಲಿ ಫುಲ್‌ ಬಿಜಿ ಈ ತುಮಕೂರು ಬೆಡಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts