More

    ಮಧ್ಯರಾತ್ರಿ ಟ್ರಕ್​ ನಿಲ್ಲಿಸಿ ಕೆಳಗಿಳಿದ ಚಾಲಕ: ನಂತರ ನಡೆದ ಭಯಾನಕ ಘಟನೆ ಸಿಸಿಟಿವಿಯಲ್ಲಿ ಸೆರೆ

    ಕೊಯಮತ್ತೂರು: ತಾನು ನಿತ್ಯವು ಚಲಾಯಿಸುತ್ತಿದ್ದ ಟ್ರಕ್​ನಿಂದಲೇ​ ಚಾಲಕನ ಪ್ರಾಣ ಪಕ್ಷಿ ಹಾರಿ ಹೋಗಿರುವ ದಾರುಣ ಘಟನೆ ತಮಿಳುನಾಡಿನ ಕೊಯಮತ್ತೂರು ಹೊರವಲಯದ ಕಡುವ್ವೆಟ್ಟಿಪಾಳ್ಯನಲ್ಲಿರುವ ಪೆಟ್ರೋಲ್​ ಬಂಕ್​ ಬಳಿ ಶುಕ್ರವಾರ ಮುಂಜಾನೆ ನಡೆದಿದೆ.

    ಆರಂಭದಲ್ಲಿ ಕೊಲೆ ಎಂದು ಪೊಲೀಸರು ನಂಬಿದ್ದರು. ಆದರೆ, ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸಿದಾಗ ಅದೊಂದು ಅಪಘಾತ ಎಂದು ಪೊಲೀಸರು ಖಚಿತಪಡಿಸಿಕೊಂಡಿದ್ದಾರೆ.

    ಟ್ರಕ್​ನ ಹಿಂಭಾಗದ ಟೈಯರ್​ನಲ್ಲಿ ಸಿಲುಕಿದ್ದ 50 ವರ್ಷದ ಚಾಲಕ ಸುರೇಶ್​ ಬಾಬು ಅವರ ಮೃತದೇಹವನ್ನು ನೋಡಿ ಕೆಲ ವಾಹನ ಸವಾರರು ಪೊಲೀಸರಿಗೆ ಮಾಹಿತಿ ನೀಡುತ್ತಾರೆ. ತಕ್ಷಣ ಸ್ಥಳಕ್ಕೆ ಆಗಮಿಸುವ ಪೊಲೀಸ್​ ತಂಡ ಘಟನಾ ಸ್ಥಳವನ್ನು ಪರಿಶೀಲನೆ ನಡೆಸುತ್ತಾರೆ. ಬಾಬು ಮೃತದೇಹದಲ್ಲಿ ಆತನ ತಲೆಗೆ ಏಟು ಬಿದ್ದಿರುವುದನ್ನು ಮತ್ತು ಇಂಜಿನ್​ ಚಾಲನೆಯಲ್ಲಿರುವುದನ್ನು ಪೊಲೀಸರು ಗಮನಿಸುತ್ತಾರೆ.

    ಆರಂಭದಲ್ಲಿ ಇದೊಂದು ಕೊಲೆ ಎಂದು ಪೊಲೀಸರು ನಂಬಿರುತ್ತಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿಯುವ ಪೊಲೀಸರು ಪೆಟ್ರೋಲ್​ ಬಂಕ್​ ಎದುರು ಇರುವ ಸಿಸಿಟಿವಿ ಕ್ಯಾಮೆರಾವನ್ನು ಮೊದಲು ಪರಿಶೀಲನೆ ನಡೆಸುತ್ತಾರೆ. ಆ ಬಳಿಕ ಇದು ಕೊಲೆಯಲ್ಲ ಅಪಘಾತದಿಂದ ಸಂಭವಿಸಿರುವ ದುರಂತ ಎಂದು ತಿಳಿಯುತ್ತದೆ.

    ಪೊಲೀಸರು ಪ್ರಕಾರ ಸುರೇಶ್​ ಬಾಬು, ಸೇಲಂ ಜಿಲ್ಲೆಯ ನಿವಾಸಿ. ಈ ಕಾಮರ್ಸ್​ ಕಂಪನಿಯ ವಸ್ತುಗಳನ್ನು ತುಂಬಿಕೊಂಡು ಬರುತ್ತಿದ್ದ. ಕರುಮಥಪತ್ತಿ ವ್ಯಾಪ್ತಿಯಲ್ಲಿ ಬರುವ ಪೆಟ್ರೋಲ್​ ಪಂಪ್​ ಬಳಿ ಮಧ್ಯರಾತ್ರಿ 1 ಗಂಟೆ ಸುಮಾರಿ ಟ್ರಕ್​ ಅನ್ನು ಪಾರ್ಕ್​ ಮಾಡಿದ್ದ. ಟ್ರಕ್​ನಿಂದ ಇಳಿದು ಅದರ ಮುಂಭಾಗ ಸ್ವಲ್ಪ ದೂರದಲ್ಲಿ ಬಾಬು ನಿಂತು ಮೂತ್ರ ವಿಸರ್ಜನೆ ಮಾಡಲು ಆರಂಭಿಸಿದಾಗ ಇದ್ದಕ್ಕಿದ್ದಂತೆ ಟ್ರಕ್​ ಸ್ಟಾರ್ಟ್​ ಆಗಿ ಬಾಬುವಿನತ್ತ ನುಗ್ಗಿಬರುತ್ತದೆ. ಟ್ರಕ್​ ತನ್ನತ್ತಲೇ ಬರುತ್ತಿದೆ ಎಂಬುದನ್ನು ಅರಿಯುವ ಬಾಬು ತಕ್ಷಣ ಅದನ್ನು ತನ್ನ ಕೈಗಳಿಂದ ತಡೆದು ನಿಲ್ಲಿಸಲು ಯತ್ನಿಸುತ್ತಾರೆ. ಆದಗ್ಯೂ ಟ್ರಕ್​ ಆತನ ಮೇಲೆ ಹರಿದು ಹೋಗುತ್ತದೆ.

    ಬಾಬು ಹ್ಯಾಂಡ್​ ಬ್ರೇಕ್​ ಹಾಕದೇ ಇದ್ದಿದ್ದರಿಂದ ಟ್ರಕ್​ ತನ್ನಷ್ಟಕ್ಕೆ ಚಲಿಸಿದೆ ಎಂದು ತಿಳಿದುಬಂದಿದೆ. ಬಾಬು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆಂದು ಕೊಯಮತ್ತೂರು ಸರ್ಕಾರಿ ಆಸ್ಪತ್ರೆಗೆ ತರಲಾಗಿದ್ದು, ತನಿಖೆ ಮುಂದುವರಿಸಿದ್ದಾರೆ. (ಏಜೆನ್ಸೀಸ್​)

    ಆಮ್ಲೆಟ್ ಮಾಡಿಕೊಡದಿದ್ದಕ್ಕೆ ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದು ಶವವನ್ನು ಫ್ಯಾನಿಗೆ ನೇತುಹಾಕಿದ ಪತಿ

    ‘ನೀನು ಹೆಚ್ಚು ದಿನ ಬದುಕಲ್ಲ…’ ಹೈಕೋರ್ಟ್‌ ಆದೇಶ ಪಾಲಿಸಿ ಎಂದ ಪ್ರಾಂಶುಪಾಲರಿಗೆ ಜೀವ ಬೆದರಿಕೆ!

    ಬಿಜೆಪಿ ಸಚಿವ, ಸಂಸದರಿಗೆ ಮುಜುಗರ ತಂದ ವಡಾಪಾವ್‌! ತಿಂದು ಬಿಲ್‌ ಕೊಡದೇ ಪೇಚಿಗೆ ಸಿಲುಕಿದರು….

    ಹಿಜಾಬ್​ ವಿವಾದ ಕುರಿತು ದಂಗಲ್​ ಹುಡುಗಿ ಜೈರಾ ವಾಸಿಮ್​ ಹೇಳಿದ್ದು ಹೀಗೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts