More

    ರಷ್ಯಾ-ಯೂಕ್ರೇನ್​ ಬೆನ್ನಲ್ಲೇ ಚೀನಾ-ತೈವಾನ್​ ಯುದ್ಧ ಭೀತಿ: ತೈವಾನ್​ ಸುತ್ತ ಸೇನಾ ಚಟುವಟಿಕೆ ಆರಂಭಿಸಿದ ಚೀನಾ

    ಬೀಜಿಂಗ್​: ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರು ತೈವಾನ್​ಗೆ ಭೇಟಿ ನೀಡಿದ ದಿನದ ಬೆನ್ನಲ್ಲೇ ಕೊತ ಕೊತ ಕುದಿಯುತ್ತಿರುವ ಚೀನಾ, ತೈವಾನ್​ ಮೇಲೆ ಮುಗಿಬೀಳಲು ರೆಡೆಯಾಗಿದೆ.

    ಚೀನಾದ ಪೀಪಲ್ಸ್​ ಲಿಬರೇಷನ್​​ ಆರ್ಮಿ (ಪಿಎಲ್​ಎ) ತೈವಾನ್​ ಸುತ್ತಲೂ ತನ್ನ ಮಿಲಿಟರಿ ವ್ಯಾಯಾಮವನ್ನು ಈಗಾಗಲೇ ಆರಂಭಿಸಿದೆ. ತೈವಾನ್ ದ್ವೀಪದ ಸುತ್ತಮುತ್ತಲಿನ ನೀರಿನ ಮೇಲೆ ಮತ್ತು ವಾಯುಪ್ರದೇಶದಲ್ಲಿ ನೇರ ಗುಂಡಿನ ದಾಳಿ ಸೇರಿದಂತೆ ಅನೇಕ ಸೇನಾ ಚಟುವಟಿಕೆಯನ್ನು ಚೀನಾ ಆರಂಭಿಸಿದ್ದು, ಭಾನುವಾರ ಮಧ್ಯಾಹ್ನ 12 ಗಂಟೆಯವರೆಗೆ ಸಮರಾಭ್ಯಾಸ ಮುಂದುವರಿಯಲಿದೆ ಎಂದು ಚೀನಾ ಮಾಧ್ಯಮಗಳು ವರದಿ ಮಾಡಿವೆ.

    ಇದೇ ಸಂದರ್ಭದಲ್ಲಿ ತೈವಾನ್​ ಮಿಲಿಟರಿ ಹೇಳಿಕೆ ನೀಡಿದ್ದು, ನಮ್ಮ ದ್ವೀಪದ ಸುತ್ತ ಚೀನಾದ ಅನಿರೀಕ್ಷಿತ ಸೇನಾ ಚಟುವಟಿಕೆಯನ್ನು ನಮ್ಮ ಪಡೆಗಳು ತುಂಬಾ ಹತ್ತಿರದಿಂದ ಮೇಲ್ವಿಚಾರಣೆ ಮಾಡುತ್ತಿದೆ. ನಾವು ಕೂಡ ಸಂಘರ್ಷಕ್ಕೆ ಸಿದ್ಧರಾಗಿದ್ದೇವೆ. ಆದರೆ, ನಾವದನ್ನು ಬಯಸುವುದಿಲ್ಲ ಎಂದು ತೈವಾನ್​ ಹೇಳಿದೆ.

    ಯುಎಸ್ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರು ಸ್ವಯಂ ಆಡಳಿತ ದ್ವೀಪವಾದ ತೈವಾನ್​ಗೆ ಭೇಟಿ ನೀಡಿದ ನಂತರ ಚೀನಾ ಕೆರಳಿದೆ. ತೈವಾನ್ ತನ್ನಿಂದ ಬೇರ್ಪಟ್ಟ ಪ್ರಾಂತ್ಯವಾಗಿದ್ದರೂ ಅಂತಿಮವಾಗಿ ಅದು ತನ್ನ ನಿಯಂತ್ರಣದಲ್ಲಿ ಇರಬೇಕೆಂದು ಚೀನಾ ಪ್ರತಿಪಾದಿಸುತ್ತಿದೆ. ಮೊದಲೇ ಚೀನಾ ಮತ್ತು ಅಮೆರಿಕ ಎಣ್ಣೆ ಸೀಗೆಕಾಯಿ ಇದ್ದಂತೆ. ಇದರ ನಡುವೆ ತೈವಾನ್​ಗೆ ಪೆಲೋಸಿ ಭೇಟಿ ನೀಡಿರುವುದು ಚೀನಾ ಕೋಪಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಮುಖ ಅಂತಾರಾಷ್ಟ್ರೀಯ ಹಡಗು ಮಾರ್ಗಗಳನ್ನು ಅಡ್ಡಿಪಡಿಸುವ ಬಲ ಪ್ರದರ್ಶನವನ್ನು ಚೀನಾ ಮಾಡುತ್ತಿದೆ.

    ಪೆಲೋಸಿ ಅವರು 24 ಗಂಟೆಗಳಿಗಿಂತ ಕಡಿಮೆ ಅವಧಿಯ ಭೇಟಿಯ ನಂತರ ಬುಧವಾರ ತೈವಾನ್‌ನಿಂದ ಹೊರಟರು. ಆದರೂ ಇದನ್ನು ಚೀನಾ ಕೈಯಲ್ಲಿ ಅರಗಿಸಿಕೊಳ್ಳಲು ಆಗುತ್ತಿಲ್ಲ. ಈ ಕಾರಣದಿಂದಲೇ ತೈವಾನ್​ನಿಂದ ಕಿತ್ತಳೆ ಹಣ್ಣು, ಮೀನು ಮತ್ತು ಇತರ ಆಹಾರ ಪದಾರ್ಥಗಳ ಆಮದನ್ನು ಚೀನಾ ನಿರ್ಬಂಧಿಸಿದೆ. ಅಲ್ಲದೆ, ತನ್ನ ದೇಶದಿಂದ ಮರಳು ರಫ್ತು ಮಾಡುವುದನ್ನು ಸ್ಥಗಿತಗೊಳಿಸಿದೆ. (ಏಜೆನ್ಸೀಸ್​)

    ಏಕ ಚೀನಾ ನೀತಿ, ತೈವಾನ್​ಗೆ ಫಜೀತಿ; ಬಲಾಢ್ಯ ದೇಶಗಳ ನಡುವೆ ಬಿಕ್ಕಟ್ಟು..

    ಸ್ವಾತಂತ್ರ್ಯ ಸಂಭ್ರಮಕ್ಕೆ ಉಗ್ರರ ಕರಿನೆರಳು: ಇಂಟೆಲಿಜೆನ್ಸ್​ ಬ್ಯೂರೋದಿಂದ ದೆಹಲಿ ಪೊಲೀಸರಿಗೆ ಎಚ್ಚರಿಕೆ ಸಂದೇಶ

    ಅನೈತಿಕ ಸಂಬಂಧಕ್ಕೆ ಶಿಕ್ಷಕಿ ಬಲಿ: 6 ತಿಂಗಳ ಬಳಿಕ ಆರೋಪಿಗಳ ಹೆಡೆಮುರಿ ಕಟ್ಟಿದ ನಂಜನಗೂಡು ಪೊಲೀಸರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts