More

    ಚಿಕನ್​ ಪ್ರಿಯರಿಗೆ ಸಿಹಿ ಸುದ್ದಿ: ನಾಲ್ಕು ತಿಂಗಳ ಬಳಿಕ ಇಳಿಕೆಯಾಯ್ತು ಕೋಳಿ ಮಾಂಸದ ಬೆಲೆ

    ಬೆಂಗಳೂರು: ಕಳೆದ ನಾಲ್ಕೈದು ತಿಂಗಳಿಂದ ಚಿಕನ್​ ಬೆಲೆ ಜೇಬು ಸುಡುವಂತಿದೆ. ಮೊದಲೆಲ್ಲ 200 ರೂ. ಒಳಗೆ ಇರುತ್ತಿದ್ದ ಒಂದು ಕೆಜಿ ಚಿಕನ್​ ಬೆಲೆ ಇದೀಗ 200 ರೂ. ದಾಟಿದ್ದು, ಜನ ಸಾಮಾನ್ಯರಿಗೆ ಹೊರೆಯಾಗಿದೆ. ಆದರೆ, ಚಿಕನ್​ ಪ್ರಿಯರಿಗೆ ಇದೀಗ ಸಿಹಿ ಸುದ್ದಿಯೊಂದ ಹೊರಬಿದ್ದಿದೆ. ಅದೇನೆಂದರೆ ಚಿಕನ್​ ಬೆಲೆಯಲ್ಲಿ ಇಳಿಕೆ ಕಂಡಿದೆ.

    ಕೆಜಿಗೆ 240 ರೂಪಾಯಿ ಇದ್ದ ಚಿಕನ್​ ಬೆಲೆ ಇದೀಗ 170ಕ್ಕೆ ಇಳಿದಿದೆ. ಅದಕ್ಕೆ ಕಾರಣ ಕಾರ್ತಿಕ ಮಾಸ. ಕೆಲವರು ಈ ಮಾಸದಲ್ಲಿ ಚಿಕನ್​ ತಿನ್ನುವುದಿಲ್ಲ. ಕಾರ್ತಿಕ ಮಾಸ ಶಿವನಿಗೆ ಪ್ರಿಯವಾಗಿರುವುದರಿಂದ ಶಿವನ ಆರಾಧನೆ ಮಾಡುವವರು ಈ ತಿಂಗಳಲ್ಲಿ ಚಿಕನ್​ ತಿನ್ನುವುದಿಲ್ಲ. ಇದರಿಂದ ಚಿಕನ್​ ಸ್ಟೋರ್​ಗಳಲ್ಲಿ ಬೇಡಿಕೆ ಕುಸಿದಿರುವ ಬೆಲೆಯು ಕುಸಿದಿದೆ. ಮೊದಲೆಲ್ಲ ವಾರದ ಏಳು ದಿನವೂ ಜನರು ಕಿಕ್ಕಿರಿದು ತುಂಬಿಕೊಳ್ಳುತ್ತಿದ್ದರು. ಇದೀಗ ಚಿಕನ್​ ಪ್ರಿಯರ ಸಂಖ್ಯೆ ವಿರಳವಾಗಿದೆ ಎಂದು ಶಾಪ್​ ಮಾಲೀಕರು ಹೇಳಿದ್ದಾರೆ.

    ಕಾರ್ತಿಕ ಮಾಸದಲ್ಲಿ ಬೆಲೆ ಕುಸಿಯುತ್ತದೆ ಎಂಬುದನ್ನು ಅರಿಯದೇ ಬಾಯ್ಲರ್​ ಚಿಕನ್​ ಸಾಕಿರುವವರಿಗೆ ಬೆಲೆ ಇಳಿಕೆ ನಷ್ಟ ಉಂಟು ಮಾಡಿದೆ. ಇನ್ನು ಕೋಳಿಯನ್ನು ಒಂದು ನಿಗದಿತ ಗಾತ್ರಕ್ಕೆ ಹೆಚ್ಚಿಸಿದ ತಕ್ಷಣ ಮಾರಾಟ ಮಾಡಬೇಕು. ತಡವಾದಲ್ಲಿ ಕೋಳಿ ಬಲಿತು ಹೋಗುವುದರಿಂದ ಕಡಿಮೆ ದರಕ್ಕೆ ಮಾರಾಟವಾಗುತ್ತದೆ. ಹೀಗಾಗಿ ಈ ಮಾಸದಲ್ಲಿ ಹೆಚ್ಚು ಕೋಳಿಗಳು ಮಾರಾಟವಾಗುವುದು ಕಷ್ಟವಾಗಿರುವುದರಿಂದ ನಷ್ಟ ಸಾಮಾನ್ಯವಾಗಿದೆ.

    ಇಡೀ ಕಾರ್ತಿಕ ಮಾಸದಲ್ಲಿ ಚಿಕನ್​ ಮಾರಾಟ ಮಂದಗತಿಯಲ್ಲಿರಲಿದೆ. ಕಳೆದ ತಿಂಗಳುಗಳಿಗೆ ಹೋಲಿಸಿದರೆ ಈ ತಿಂಗಳಲ್ಲಿ ಮಾರಾಟ ಸಾಮಾನ್ಯವಾಗಿ ಕುಸಿಯುತ್ತದೆ ಎಂಬುದು ಕೋಳಿ ಸಾಕಾಣೆಗಾರರ ಮಾತಾಗಿದೆ. ಅದರಂತೆ ಬೆಲೆ ಇಳಿಕೆಯಾಗಿದ್ದು, ಒಂದು ಕೆಜಿ ಚಿಕನ್​ಗೆ 170 ರೂ. ಇದ್ದು, ಕಳೆದ ನಾಲ್ಕು ತಿಂಗಳಲ್ಲೇ ಅತಿ ಕಡಿಮೆ ಬೆಲೆ ಇದಾಗಿದೆ. (ಏಜೆನ್ಸೀಸ್​)

    ಮಾಡೆಲ್​ಗಳಿಬ್ಬರ ದುರ್ಮರಣ: ರಹಸ್ಯ ಮಾಹಿತಿ ಇರೋ ಸಿಸಿಟಿವಿ ಡಿವಿಆರ್​ನೊಂದಿಗೆ​ ಹೋಟೆಲ್​ ಮಾಲೀಕ ನಾಪತ್ತೆ

    ಜಗಮೆಚ್ಚಿದ ‘ಪುನೀತ್​’ಗೆ ಇದೆಂಥಾ ಅವಮಾನ? ಅಪ್ಪು ಫೋಟೋ ಮುಂದೆ ಹುಚ್ಚಾಟ ಮೆರೆದ ಚಿತ್ರತಂಡ!

    ಅದ್ಧೂರಿ ಜೀವನಶೈಲಿಯ ನಡುವೆಯು ಸರಳವಾಗಿ ಬದುಕಿದ ಪುನೀತ್​ ಕುರಿತು ನಿಮಗೆ ಗೊತ್ತಿರದ ಸಂಗತಿ ಇಲ್ಲಿದೆ…

    ತಾಯಿಗೆ ಪಂಗನಾಮ ಹಾಕಿದ ಮಗಳು: ಮಾಡಬಾರದ್ದನ್ನು ಮಾಡಿ ಎಸ್ಕೇಪ್​ ಆದವಳಿಗಾಗಿ ಪೊಲೀಸರ ಹುಡುಕಾಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts