More

    ವೈದ್ಯರ ಸೋಗಿನಲ್ಲಿ ರೋಗಿಗಳಿಗೆ ಚಿಕಿತ್ಸೆ: ರೆಡ್​ಹ್ಯಾಂಡ್ ಆಗಿ ಸಿಕ್ಕಿಬಿದ್ದ ಲ್ಯಾಬ್ ಟೆಕ್ನಿಷಿಯನ್‌

    ಚಾಮರಾಜನಗರ: ವೈದ್ಯರ ಸೋಗಿನಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ಲ್ಯಾಬ್ ಟೆಕ್ನಿಷಿಯನ್‌ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಸುಮಾರು ಒಂದೂವರೆ ವರ್ಷದಿಂದ ತಾನೇ ವೈದ್ಯನೆಂದು ಹೇಳಿಕೊಂಡು ರೋಗಿಗಳನ್ನು ವಂಚಿಸುತ್ತಿದ್ದ ಲ್ಯಾಬ್ ಟೆಕ್ನಿಷಿಯನ್ ಇದೀಗ ಪೊಲೀಸರ ವಶವಾಗಿದ್ದಾನೆ.

    ಚಾಮರಾಜನಗರದ ಮಹದೇಶ್ವರ ಡಯಾಗ್ನೋಸ್ಟಿಕ್‌ ಲ್ಯಾಬ್ ಟೆಕ್ನಿಷಿಯನ್ ಶಿವಕುಮಾರ್‌ನಿಂದ ವಂಚನೆ ನಡೆದಿದ್ದು, ಕೆ.ಆರ್.ಎಸ್ ಪಕ್ಷದ ಕಾರ್ಯಕರ್ತರು ಸಾಕ್ಷಿ ಸಮೇತ ದೂರು ನೀಡಿ, ಆರೋಪಿ ಶಿವಕುಮಾರ್​ನನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಶಿವಕುಮಾರ್ ವಿರುದ್ಧ ಚಾಮರಾಜನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    ಜಿಲ್ಲಾ ಆರೋಗ್ಯಾಧಿಕಾರಿ ಡಾ.ವಿಶ್ವೇಶ್ವರಯ್ಯ ಅವರು ಸ್ಥಳ ಮಹಜರು ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ್ದು, ಮಹದೇಶ್ವರ ಡಯಾಗ್ನೋಸ್ಟಿಕ್ ಸೆಂಟರ್​ನಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡ್ತಾರೆ ಅಂತ ದೂರು ಬಂದ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆ ನಡೆಸಿದ್ದೇವೆ. ಇಲ್ಲಿರುವ ದಾಖಲಾತಿ ನೋಡಿದ್ದೇನೆ. ಡಯಾಗ್ನೋಸ್ಟಿಕ್​ಗೆ ಏನು ಬೇಕು ಅದೆಲ್ಲ ಸಾಮಗ್ರಿ ಇಲ್ಲಿದೆ. ರೋಗಿಗಳಿಗೆ ಏನು ಬರೆದುಕೊಡ್ತಿದ್ದರು ಎಂಬುದನ್ನು ಪರಿಶೀಲಿಸಿ, ಜಿಲ್ಲಾಧಿಕಾರಿ ಗಮನಕ್ಕೆ ತಂದು ಮುಂದಿನ ಕ್ರಮ ಕೈಗೊಳ್ಳುತ್ತೇವೆ. ರೋಗಿಗಳ ತಪಾಸಣೆ ಮಾಡಿರುವ ವಿಡಿಯೋ ಇದೆ. ಅದನ್ನು ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದರು.

    ಲ್ಯಾಬ್ ಟೆಸ್ಟ್​ಗೆ ಏನೇನು ಬೇಕೋ ಅದೆಲ್ಲ ಇದೆ. ಅದರ ಮುಂದಿನ ಹಂತದಲ್ಲಿ ಏನು ಮಾಡುತ್ತಿದ್ದರು ಎಂಬುದನ್ನು ಪರಿಶೀಲಿಸಬೇಕಾಗುತ್ತೆ. ಲ್ಯಾಬ್​ಗೆ ಇವರು ಪರವಾನಗಿ ತೆಗೆದುಕೊಂಡಿದ್ದಾರೆ. ಜಿಲ್ಲೆಯ ಎಲ್ಲ ಕ್ಲಿನಿಕ್​ಗಳಿಗೆ ಭೇಟಿ ನೀಡಿ ಕುಲಂಕೂಶವಾಗಿ ಪರಿಶೀಲನೆ ನಡೆಸಲಾಗುವುದು ಎಂದು ಹೇಳಿದರು. (ದಿಗ್ವಿಜಯ ನ್ಯೂಸ್​)

    ನನ್ನ ಬಟ್ಟೆ ಹರಿಯಿತು: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಡೆದ ಕಹಿ ಘಟನೆ ವಿರುದ್ಧ ನಟಿ ಅನಸೂಯ ಆಕ್ರೋಶ

    ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಹುದ್ದೆಗೆ ತೀವ್ರ ಪೈಪೋಟಿ: ಹೊಸ ಅಧ್ಯಕ್ಷರ ಆಯ್ಕೆಗೆ ನಡೆದಿದೆ ಹುಡುಕಾಟ

    ಸರ್ಕಾರಿ ಕಾರ್ನರ್: ಪುಸ್ತಕ ಪ್ರಕಟಿಸಲು ಅನುಮತಿ ಅವಶ್ಯಕವೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts