More

    ಟಾಲಿವುಡ್​ ಹಾಟ್​ ಬ್ಯೂಟಿ ಪಾಯಲ್​ ರಜಪೂತ್ ಎಡವಟ್ಟು​: ಕೋರ್ಟ್​ ಆದೇಶದ ಮೇರೆಗೆ ದಾಖಲಾಯ್ತು ದೂರು!

    ಹೈದರಾಬಾದ್​: ಟಾಲಿವುಡ್​ ಹಾಟ್​ ಬ್ಯೂಟಿ ಪಾಯಲ್​ ರಜಪೂತ್​ ಸಣ್ಣ ಎಡವಟ್ಟು ಮಾಡಿಕೊಂಡಿದ್ದು, ಅವರ ವಿರುದ್ಧ ಪ್ರಕರಣ ದಾಖಲಾಗಿದೆ.

    ಅಸಲಿಗೆ ಪಾಯಲ್​ ರಜಪೂತ್​ ಮಾಡಿಕೊಂಡ ಎಟವಟ್ಟು ಏನೆಂದರೆ, ಪೆದ್ದಪಲ್ಲಿಯ ಅಂಗಡಿಯೊಂದರ ಉದ್ಘಾಟನೆಯಲ್ಲಿ ಅವರು ಪಾಲ್ಗೊಂಡಿದ್ದರು. ಇದರ ಬೆನ್ನಲ್ಲೇ ಸಂತೋಷ್​ ಎಂಬುವರು ಕೋರ್ಟ್​ ಮೆಟ್ಟಿಲೇರಿದ್ದು, ನಟಿ ಪಾಯಲ್​ ಅವರು ಉದ್ಘಟನಾ ಕಾರ್ಯಕ್ರಮದಲ್ಲಿ ಮಾಸ್ಕ್​ ಧರಿಸದೇ ಕರೊನಾ ನಿಯಮ ಉಲ್ಲಂಘಿಸಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.

    ಕೋರ್ಟ್​ ಆದೇಶದ ಮೇರೆಗೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಾಯಲ್​ ಮಾತ್ರವಲ್ಲದೆ, ಶಾಪ್​ ಮಾಲೀಕ ಸೇರಿದಂತೆ ಅನೇಕರ ವಿರುದ್ಧವೂ ಪ್ರಕರಣ ದಾಖಲಾಗಿದೆ.

    ಸಿನಿಮಾ ವಿಚಾರಕ್ಕೆ ಬರುವುದಾದರೆ, ಪಾಯಲ್​ ತೆಲುಗು ಚಿತ್ರರಂಗದಲ್ಲಿ ಬಹುಬೇಡಿಕೆ ನಟಿಯಾಗಿದ್ದಾರೆ. ಆರ್​​ಎಕ್ಷ್​ 100 ಮತ್ತು ಆರ್​ಡಿಎಕ್ಸ್​ ಲವ್​ ಚಿತ್ರಗಳಲ್ಲಿನ ಬೋಲ್ಡ್​ ನಟನೆಯ ಮೂಲಕ ಪಾಯಲ್​ ಸಖತ್​ ಸುದ್ದಿ ಮಾಡಿದ್ದಾರೆ. ಕನ್ನಡ ಚಿತ್ರರಂಗಕ್ಕೂ ಕಾಲಿಡುತ್ತಿರುವ ಪಾಯಲ್​, ಡಾಲಿ ಧನಂಜಯ ನಟನೆಯ ‘ಹೆಡ್ ಬುಷ್‌’ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. (ಏಜೆನ್ಸೀಸ್​)

    31ರ ಬಳಿಕ ತಾಲಿಬಾನ್ ಸರ್ಕಾರ: ಅಮೆರಿಕ ಸೇನೆ ಸಂಪೂರ್ಣವಾಗಿ ಅಫ್ಘನ್ ತೊರೆದ ಬಳಿಕ ನಿರ್ಧಾರ

    ತಾಲಿಬಾನ್​ ಉಗ್ರರ ಅಟ್ಟಹಾಸದ ನಡುವೆಯೇ ಪ್ರತಿಜ್ಞೆ ಮಾಡಿದ ಅಮೆರಿಕ ಅಧ್ಯಕ್ಷ ಜೋ ಬೈಡೆನ್​

    ನೆಟ್ಟಿಗರ ಸಿಟ್ಟು… ವಾಹನ ಸವಾರನ ಸಮೇತ ಬೈಕ್​ ಟೋಯಿಂಗ್​ ಮಾಡಿದ ಸಿಬ್ಬಂದಿಗೆ ಶಾಕ್​..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts