More

    ವಿಡಿಯೋದಲ್ಲಿ ಕಣ್ಣೀರಿಡುತ್ತಾ ಗಂಡನ ಕರಾಳ ಮುಖ ಬಿಚ್ಚಿಟ್ಟು ಅಮೆರಿಕದಲ್ಲಿ ಸಾವಿನ ಹಾದಿ ಹಿಡಿದ ಭಾರತೀಯ ಮಹಿಳೆ

    ನ್ಯೂಯಾರ್ಕ್​: ಭಾರತೀಯ ಮೂಲದ ಮಹಿಳೆಯೊಬ್ಬಳು ನ್ಯೂಯಾರ್ಕ್​ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಗಂಡ ಮತ್ತು ಅತ್ತೆ ಕಿರುಕುಳಕ್ಕೆ ಬೇಸತ್ತು, ತಾನು ಅನುಭವಿಸಿದ ನೋವನೆಲ್ಲ ವಿಡಿಯೋ ಮೂಲಕ ಬಿಚ್ಚಿಟ್ಟ ಬಳಿಕ ಮಹಿಳೆ ಸಾವಿನ ಹಾದಿ ಹಿಡಿದಿದ್ದಾಳೆ.

    ಮೃತ ಮಹಿಳೆಯನ್ನು ಮಂದೀಪ್​ ಕೌರ್​ ಎಂದು ಗುರುತಿಸಲಾಗಿದೆ. ಅವರೆಲ್ಲ ನನ್ನನ್ನು ಸಾಯುವಂತೆ ಒತ್ತಾಯಿಸಿದರು ಎಂದು ವಿಡಿಯೋ ಮಾಡಿ, ಅದನ್ನು ಹರಿಬಿಟ್ಟಿದ್ದಾರೆ. ನನ್ನ ಸಾವಿಗೆ ನನ್ನ ಗಂಡ ಮತ್ತು ಅತ್ತೆ ಕಾರಣ. ನನ್ನನ್ನು ಬದುಕಲು ಅವರು ಬಿಡಲಿಲ್ಲ. ಕಳೆದ 8 ವರ್ಷಗಳಿಂದ ನನ್ನ ಗಂಡ ನನಗೆ ಥಳಿಸುತ್ತಿದ್ದಾನೆ ಮತ್ತು ಚಿತ್ರಹಿಂಸೆ ನೀಡಿದ್ದಾನೆ ಎಂದು ಮಂದೀಪ್​ ಕೌರ್​ ವಿಡಿಯೋದಲ್ಲಿ ಅಳಲು ತೋಡಿಕೊಂಡಿದ್ದಾರೆ.

    ಕಳೆದ 8 ವರ್ಷಗಳಿಂದ ನನ್ನ ಗಂಡ ಕಿರುಕುಳ ಸಹಿಸಿಕೊಂಡಿದ್ದೆ. ಒಂದು ಒಂದು ದಿನ ಬದಲಾಗುತ್ತಾರೆ ಎಂಬ ಆಸೆಯ ಕಣ್ಣುಗಳಿಂದ ಎದುರು ನೋಡುತ್ತಿದ್ದೆ. ಆದರೆ, ಆತ ಬದಲಾಗಲೇ ಇಲ್ಲ. ಬದಲಾಗಿ ನನ್ನ ಮೇಲಿನ ದೈಹಿಕ ಮತ್ತು ಮಾನಸಿಕ ಹಿಂಸೆಯನ್ನು ಇನ್ನಷ್ಟು ಹೆಚ್ಚು ಮಾಡಿದೆ. ನನ್ನ ಕೈಲಾದಷ್ಟು ನಾನು ಒಳಿತನ್ನೇ ಮಾಡಿದ್ದಾನೆ. ಆದರೆ, ನನಗೆ ಅವರಿಂದ ಯಾವುದೇ ಒಳಿತಾಗಲಿಲ್ಲ. ಪ್ರತಿದಿನದ ನಿಂದನೆ ಮತ್ತು ಥಳಿತ ಬಿಟ್ಟರೆ ಬೇರೇನು ಇರುತ್ತಿರಲಿಲ್ಲ. ಇವರ ಚಿತ್ರಹಿಂಸೆ ಇನ್ಮುಂದೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಅದಕ್ಕೆ ಸಾವಿನ ಹಾದಿ ಹಿಡಿಯುತ್ತಿದ್ದೇನೆ ಎಂದು ಮಂದೀಪ್​ ಕೌರ್​ ವಿಡಿಯೋದಲ್ಲಿ ಕಣ್ಣೀರಿಟ್ಟಿದ್ದಾರೆ.

    ಇಷ್ಟೇ ಅಲ್ಲದೆ, ವಿಡಿಯೋದಲ್ಲಿ ತನ್ನ ಪತಿಯನ್ನು ದಾಂಪತ್ಯ ದ್ರೋಹದ ಆರೋಪವನ್ನೂ ಮಾಡಿದ್ದಾಳೆ. ಪತಿಯ ದಾಂಪತ್ಯ ದ್ರೋಹದ ಬಗ್ಗೆ ತಿಳಿದರು, ನಾನು ಅದನ್ನು ನಿರ್ಲಕ್ಷಿಸಿ ಇಲ್ಲಿಗೆ (ನ್ಯೂಯಾರ್ಕ್) ತೆರಳಿದೆ. ಆದರೆ ಇಲ್ಲಿ ಅವನು ನನ್ನನ್ನು ಹೊಡೆಯಲು ಪ್ರಾರಂಭಿಸಿದನು. ತನ್ನ ಸಂಬಂಧವನ್ನು ಆತ ಮುಂದುವರಿಸಿದನು ಎಂದು ಆರೋಪ ಮಾಡಿದ್ದಾಳೆ.

    ಉತ್ತರ ಪ್ರದೇಶದ ಬಿಜ್ನೋರ್‌ನಲ್ಲಿರುವ ಮಂದೀಪ್ ಅವರ ಕುಟುಂಬವು ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸಲು ಪ್ರಯತ್ನಿಸಿತ್ತು. ಪತಿ ತನ್ನನ್ನು ಮೂರು ದಿನಗಳ ಕಾಲ ಅಪಹರಿಸಿ ಥಳಿಸಿದ್ದಾನೆ ಎಂದು ಮಂದೀಪ್ ಆರೋಪಿಸಿದ್ದಾರೆ. ನಂತರ ಆಕೆಯ ತಂದೆ ಪೊಲೀಸ್ ದೂರು ನೀಡಲು ನಿರ್ಧರಿಸಿದರು. ಪೊಲೀಸ್ ದೂರು ದಾಖಲಾದ ನಂತರ, ಪತಿ ನನ್ನ ಬಳಿಗೆ ಬಂದು ದೂರು ಹಿಂಪಡೆಯಲು ಸಹಾಯವನ್ನು ಕೋರಿದರು ಎಂದು ಮಂದೀಪ್ ಹೇಳಿದ್ದಾರೆ.

    ಅವರಿಗೆ ದೇವರೇ ಉತ್ತರಿಸುತ್ತಾರೆ ಮತ್ತು ಕರ್ಮ ಅವರನ್ನು ನಿಭಾಯಿಸುತ್ತದೆ. ಅವರು ನನ್ನನ್ನು ಸಾಯುವಂತೆ ಒತ್ತಾಯಿಸಿದರು. ನಾನು ನನ್ನ ಮಕ್ಕಳನ್ನು ಬಿಟ್ಟು ಜಗತ್ತನ್ನು ತೊರೆಯಲು ಒತ್ತಾಯಿಸಲ್ಪಟ್ಟಿದ್ದೇನೆ ಎಂದು ವಿಡಿಯೋ ಮಾಡಿಟ್ಟು ಮಂದೀಪ್​ ಸಾವಿನ ಹಾದಿ ಹಿಡಿದಿದ್ದಾರೆ.

    ಇದೀಗ ಮಂದೀಪ್​ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ, ಆಕೆಯ ಗಂಡ ಮತ್ತು ಅತ್ತೆ ಮನೆಯ ವಿರುದ್ಧ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕೆಂದು ಒತ್ತಾಯಿಸುತ್ತಾರೆ.

    ಅಂದಹಾಗೆ ಕೌರ್ ನಾಲ್ಕು ಮತ್ತು ಆರು ವರ್ಷದ ಇಬ್ಬರು ಹೆಣ್ಣು ಮಕ್ಕಳನ್ನು ಬಿಟ್ಟು ಅಗಲಿದ್ದಾರೆ. ದಂಪತಿ ನ್ಯೂಯಾರ್ಕ್‌ಗೆ ತೆರಳಿದ ಕೂಡಲೇ ಕೌಟುಂಬಿಕ ಹಿಂಸಾಚಾರ ಆರಂಭವಾಯಿತು ಎಂದು ಮಂದೀಪ್ ಸಹೋದರಿ ಕುಲದೀಪ್ ಕೌರ್ ಹೇಳಿದ್ದಾರೆ. ನನ್ನ ಸಹೋದರಿ ಫೆಬ್ರವರಿ 2015 ರಲ್ಲಿ ವಿವಾಹವಾದರು. ಶೀಘ್ರದಲ್ಲೇ ಅವರು ನ್ಯೂಯಾರ್ಕ್​ಗೆ ಹೋದರು. ಕೆಲವೇ ತಿಂಗಳುಗಳಲ್ಲಿ ಅಕ್ಕನ ಗಂಡ ಅವಳನ್ನು ಹಿಂಸಿಸಲು ಪ್ರಾರಂಭಿಸಿದನು. ಅವರು ಗಂಡು ಮಗನನ್ನು ಬಯಸಿದ್ದರು. ಆದರೆ, ಹೆಣ್ಣು ಮಗು ಆದ್ದರಿಂದ ಹಿಂಸಿಸಲು ಆರಂಭಿಸಿದರು ಮತ್ತು 50 ಲಕ್ಷ ರೂಪಾಯಿ ವರದಕ್ಷಿಣೆಯನ್ನು ಬಯಸಿದ್ದರು ಎಂದು ಕುಲದೀಪ್​ ಕೌರ್​ ಆರೋಪ ಮಾಡಿದ್ದಾರೆ.

    ಈ ಘಟನೆ ಸಂಬಂಧ ಉತ್ತರ ಪ್ರದೇಶದ ಬಿಜ್ನೋರ್‌ನ ನಜಿಬಾಬಾದ್ ಪೊಲೀಸ್ ಠಾಣೆಯಲ್ಲಿ ಪತಿ ಮತ್ತು ಆಕೆಯ ಅತ್ತೆಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ನ್ಯೂಯಾರ್ಕ್ ಪೊಲೀಸ್ ಇಲಾಖೆ ಸಹ ಪ್ರಕರಣದ ತನಿಖೆ ನಡೆಸುತ್ತಿದೆ. ಮಂದೀಪ್ ಕೌರ್ ಅವರ ಕುಟುಂಬವು ಆಕೆಯ ದೇಹವನ್ನು ಭಾರತಕ್ಕೆ ತರಲು ಶ್ರಮಿಸುತ್ತಿದೆ. (ಏಜೆನ್ಸೀಸ್​)

    ಇಷ್ಟು ದಿನ ನನ್ಗೆ ನಿತ್ಯಾ ಬೇಕೇ ಬೇಕು ಅಂತಿದ್ದ ಯುವಕ ಈಗ ಆಕೆಯ ಆ ಒಂದು ಮಾತಿಗೆ ಕೊಟ್ಟಿದ್ದು ಖಡಕ್​ ಪ್ರತಿಕ್ರಿಯೆ

    ವಿಶ್ವವಿಖ್ಯಾತ ದಸರಾ ಮಹೋತ್ಸವ: ಇಂದು ಗಜ ಪಯಣ ಆರಂಭ, ನಾಡಹಬ್ಬದ ಮೊದಲ ಕಾರ್ಯಕ್ರಮಕ್ಕೆ ಸಿದ್ಧತೆ

    ಕೆರೆ ಕೋಡಿ ಬಿದ್ದು ಕೊಚ್ಚಿ ಹೋದ ರಸ್ತೆ: ಮಂಡ್ಯದ 6 ಗ್ರಾಮಗಳಿಗೆ ಸಂಪರ್ಕ ಕಡಿತ, ಪ್ರವಾಹದ ನೀರಲ್ಲಿ ಜನರ ದುಸ್ಸಾಹಸ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts