More

    ರಸ್ತೆಗುಂಡಿಗಳ ನಡುವೆ ವೆಡ್ಡಿಂಗ್​ ಫೋಟೋಶೂಟ್! ವಧುವಿನ ನಡೆಗೆ ನೆಟ್ಟಿಗರಿಂದ ಬಹುಪರಾಕ್​

    ಮಲಪ್ಪುರಂ: ಮದುವೆಗೂ ಮುನ್ನ ಅಥವಾ ನಂತರ, ಸಮಯ ಯಾವುದೇ ಇರಲಿ ಇಂದಿನ ದಿನದಲ್ಲಿ ವೆಡ್ಡಿಂಗ್​ ಫೋಟೋಶೂಟ್​ ನವ ಜೋಡಿಯ ಅವಿಭಾಜ್ಯ ಅಂಗವಾಗಿದೆ. ಬಹುತೇಕ ಜೋಡಿಗಳು ತಮ್ಮ ವೆಡ್ಡಿಂಗ್​ ಫೋಟೋಗಳು ತುಂಬಾ ವಿಭಿನ್ನವಾಗಿರಬೇಕೆಂಬ ಕನಸನ್ನೂ ಹೊಂದಿರುತ್ತಾರೆ. ಸಾಧ್ಯವಾದಷ್ಟು ಸುಂದರವಾದ ತಾಣಗಳಲ್ಲಿ ಸೆರೆಹಿಡಿಯಬೇಕೆಂದು ಬಯಸುತ್ತಾರೆ. ಆದರೆ, ಕೇರಳದ ವಧುವೊಬ್ಬಳು ವಿಭಿನ್ನವಾಗಿ ವೆಡ್ಡಿಂಗ್​ ಫೋಟೋಶೂಟ್​ ಮಾಡಿಸಿದ್ದು, ಈ ಮೂಲಕವು ಸರ್ಕಾರದ ಅವ್ಯವಸ್ಥೆಯ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

    ಹೌದು, ಮಲಪ್ಪುರಂ ಜಿಲ್ಲೆಯ ನೀಲಂಬುರ್​ ಪಟ್ಟಣದಲ್ಲಿರುವ ರಸ್ತೆಯು ಗುಂಡಿಮಯವಾಗಿದೆ. ರಸ್ತೆಯ ಈ ಶೋಚನಿಯ ಸ್ಥಿತಿಯನ್ನು ಸರ್ಕಾರಕ್ಕೆ ಮನವರಿಕೆ ಮಾಡಬೇಕೆಂಬ ಉದ್ದೇಶದಿಂದ ಪೂಕೊಟ್ಟುಂಪದಂ ಮೂಲದ ಸುಜೀಶಾ ಎಂಬಾಕೆ ರಸ್ತೆ ಗುಂಡಿಗಳ ನಡುವೆಯೇ ವೆಡ್ಡಿಂಗ ಫೋಟೋಶೂಟ್​ ಮಾಡಿಸಿದ್ದಾರೆ.

    ನೀಲಂಬುರ್​ನಲ್ಲಿರುವ ಆ್ಯರೋ ವೆಡ್ಡಿಂಗ್​ ಕಂಪನಿ ಈ ಫೋಟೋಶೂಟ್​ ಮಾಡಿದೆ. ರಸ್ತೆಯು ಗುಂಡಿಮಯವಾಗಿದ್ದು, ಗುಂಡಿಗಳಲ್ಲಿ ನೀರು ತುಂಬಿ ಸವಾರರು ಬಹುದಿನಗಳಿಂದ ಪರದಾಡುವಂತಾಗಿದೆ. ಹೀಗಾಗಿ ಸಂಪೂರ್ಣ ಹಾಳಾದ ರಸ್ತೆಯ ಮಧ್ಯೆ ನಿಂತು ಫೋಟೋಶೂಟ್ ನಡೆಸುವುದು ಅಧಿಕಾರಿಗಳ ನಿಷ್ಕ್ರಿಯತೆಯ ವಿರುದ್ಧ ಪ್ರತಿಭಟಿಸುವ ಒಂದು ಸಾಧನವಾಗಿದೆ ಎಂದು ಛಾಯಾಗ್ರಾಹಕ ಆಶಿಕ್ ಹೇಳಿದರು. ಈ ಯೋಜನೆಯನ್ನು ವಧುವಿಗೆ ಸೂಚಿಸಿದಾಗ, ಅವರು ಸಹ ಒಪ್ಪಿಗೆ ನೀಡಿದರು ಎಂದು ಆಶಿಕ್​ ತಿಳಿಸಿದರು.

    ಹಲವಾರು ಇನ್​ಸ್ಟಾಗ್ರಾಂ ಬಳಕೆದಾರರು ಫೋಟೋಶೂಟ್‌ಗೆ ಧನಾತ್ಮಕ ಕಾಮೆಂಟ್‌ಗಳನ್ನು ಪೋಸ್ಟ್ ಮಾಡುವ ಮೂಲಕ ತಮ್ಮ ಬೆಂಬಲವನ್ನು ಸೂಚಿಸುತ್ತಿದ್ದು, ವಧುವಿಕೆ ಬಹುಪರಾಕ್​ ಎನ್ನುತ್ತಿದ್ದಾರೆ. (ಏಜೆನ್ಸೀಸ್​)

    ಲವರ್​​​ ಜತೆ ಸ್ಕೂಟಿಯಲ್ಲಿ ಹೋಗ್ತಿದ್ದ ಪತ್ನಿಯನ್ನು ರೆಡ್​ಹ್ಯಾಂಡ್​ ಆಗಿ ಹಿಡಿದ ಪತಿ! ಮುಂದೇನಾಯ್ತು ನೀವೇ ನೋಡಿ…

    ಅಶ್ಲೀಲ ವಿಡಿಯೋ ಸೋರಿಕೆ ಪ್ರಕರಣ​: ಬಾಯ್​ಫ್ರೆಂಡ್​ ಬೆದರಿಕೆಗೆ ಹೆದರಿ ವಿದ್ಯಾರ್ಥಿನಿಯಿಂದ ದುಷ್ಕೃತ್ಯ

    ಮೋದಿಗೆ ದೀದಿ ಕ್ಲೀನ್​ಚಿಟ್​: ಅವರ ತಪ್ಪೇ ಇಲ್ಲ ಎಂದ ಮಮತಾ ಮಾತಿಗೆ ರಾಜಕೀಯದಲ್ಲಿ ಬಿಸಿಬಿಸಿ ಚರ್ಚೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts