More

    ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ BMTCಯಿಂದ 75 ಎಲೆಕ್ಟ್ರಿಕ್ ಬಸ್: ಸಿಎಂ ಬೊಮ್ಮಾಯಿರಿಂದ ಲೋಕಾರ್ಪಣೆ

    ಬೆಂಗಳೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ 75 ಎಲೆಕ್ಟ್ರಿಕ್ ಬಸ್ಸುಗಳನ್ನು ಸಿಎಂ ಬಸವರಾಜ್ ಬೊಮ್ಮಾಯಿ ಅವರು ಇಂದು ಲೋಕಾರ್ಪಣೆ ಮಾಡಿದರು. ವಿಧಾನಸೌಧದ ಮೆಟ್ಟಿಲುಗಳ ಮುಂಭಾಗ ಬಸ್​ಗಳ ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿ‌ ಲೋಕಾರ್ಪಣೆ ಮಾಡಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ರಾಜ್ಯ ಸರ್ಕಾರದಿಂದ 2022-23 ರಲ್ಲಿ ಸಾರಿಗೆ ಇಲಾಖೆಗೆ ಸರ್ಕಾರ 800 ಕೋಟಿ ನೆರವು ಕೊಟ್ಟಿದ್ದೇವೆ. ಇತ್ತೀಚೆಗೆ 400 ಕೋಟಿ ರೂ ಬಿಡುಗಡೆ ಮಾಡಲಾಗಿದೆ. ಒಟ್ಟು ಕಳೆದ ಎರಡು ಮೂರು ವರ್ಷಗಳಿಂದ ಸಾರಿಗೆ ಇಲಾಖೆಗೆ 3000 ಸಾವಿರ ಕೋಟಿ ನೆರವು ಕೊಡಲಾಗಿದೆ ಎಂದು ತಿಳಿಸಿದರು.

    300 ಬಸ್ ಗಳಿಗೆ ಅನುಮತಿ ಕೊಟ್ಟಿದ್ದೇವೆ. 75 ಬಸ್ ಲೋಕಾರ್ಪಣೆ ಆಗುತ್ತಿದೆ. ಇನ್ನೂ ಎರಡು ಹಂತದಲ್ಲಿ ಉಳಿದ ಬಸ್​ಗಳು ಬರುತ್ತವೆ. ಒಟ್ಟು 1200 ಎಲೆಕ್ಟ್ರಿಕ್ ಬಸ್​ಗಳು ಬರುತ್ತವೆ. ಬೆಂಗಳೂರಿಗರು ಆದಷ್ಟು ಸಾರಿಗೆ ಬಸ್ ಬಳಸಬೇಕು ಎಂದು ಮನವಿ ಮಾಡಿದರು.

    ಬಿಎಂಟಿಸಿಗೆ 25 ವರ್ಷ ಆಗಿದೆ. ಮುಂದಿನ ದಿನಗಳಲ್ಲಿ ಬಿಎಂಟಿಸಿ ಲಾಭದಾಯಕವಾಗಿರಲಿ. ಬಿಎಂಟಿಸಿಗೆ ಎಲ್ಲರಿಗೂ ಮಾತೃ ಸಂಸ್ಥೆ. ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡೋಣ. ಬರುವಂತಹ ದಿನಗಳಲ್ಲಿ ಹೆಚ್ಚಿನ ಸರ್ವಿಸ್ ಬೆಂಗಳೂರು ಜನತೆಗೆ ಕೊಡುವಂತೆ ಆಗಲಿ ಎಂದು ಹೇಳಿದರು.

    ಬಿಎಂಟಿಸಿಗೆ ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರ 922 ಎಲೆಕ್ಟ್ರಿಕ್‌ ಬಸ್​ಗಳು ಲೀಸ್​ಗೆ ಕೊಡಲಿದೆ. ನಮ್ಮ ಕಡೆಯಿಂದ 300 ಎಲೆಕ್ಟ್ರಿಕ್ ಬಸ್ ರಸ್ತೆಗೆ ಇಳಿಯಲಿವೆ. ಹಿಂದಿನ ಸರ್ಕಾರಗಳು ಹೇಗೆ ಬೇಕೋ ಹಾಗೆ ನಡೆಸಿಕೊಂಡು ಹೋದವು. ಹೀಗಾಗಿ ಸಾರಿಗೆ ಇಲಾಖೆಯಲ್ಲಿ ಇವತ್ತು ಸಾಕಷ್ಟು ಸಮಸ್ಯೆಗಳು ಸೃಷ್ಟಿಯಾಗಿವೆ. ನಮ್ಮ ಗುರಿ ಸಮಸ್ಯೆ ಮುಂದೆ ಹಾಕ್ಕೊಂಡು ಹೋಗುವುದಲ್ಲ. ಸಮಸ್ಯೆಗೆ ಪರಿಹಾರ ಕಂಡುಹಿಡಿಯುವುದು ಎಂದು ಬೊಮ್ಮಾಯಿ ಹೇಳಿದರು.

    ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ಮಾತನಾಡಿ, ಬಿಎಂಟಿಸಿಗೆ 300 ಎಲೆಕ್ಟ್ರಿಕ್ ಬಸ್ ಗಳು ಸೇರ್ಪಡೆಯಾಗಲಿವೆ. ಈ‌ ಹಿಂದೆ 9 ಮೀಟರ್ ನ‌ ಎಲೆಕ್ಟ್ರಿಕ್ ಬಸ್ ಗಳು ಲೋಕಾರ್ಪಣೆಯಾಗಿದ್ದವು. ಇವತ್ತು 12 ಮೀಟರ್ ಉದ್ದದ 75 ಎಲೆಕ್ಟ್ರಿಕ್ ಬಸ್ ಗಳು ಲೋಕಾರ್ಪಣೆ ಯಾಗಿವೆ ಎಂದು ತಿಳಿಸಿದರು.

    ಸ್ವಿಚ್ ಮೊಬಿಲಿಟಿ ಲಿಮಿಟೆಡ್​ನಿಂದ 12 ಮೀಟರ್ ಉದ್ದದ ನಾನ್ ಎಸಿ ಇ ಬಸ್ಸುಗಳ ರಸ್ತೆಗಿಳಿಯಲಿದ್ದು, 40+1 ಆಸನ ಹೊಂದಿವೆ. ಮೆಜೆಸ್ಟಿಕ್ – ವಿದ್ಯಾರಣ್ಯಪುರ, ಶಿವಾಜಿನಗರ – ಯಲಹಂಕ, ಯಲಹಂಕ – ಕೆಂಗೇರಿ, ಮೆಜೆಸ್ಟಿಕ್ – ಯಲಹಂಕ ಉಪನಗರ, ಹೆಬ್ಬಾಳ – ಸೆಂಟ್ರಲ್ ಸಿಲ್ಕ್ ಬೋರ್ಡ್ ಮಾರ್ಗಗಳಲ್ಲಿ ಈ ಬಸ್ಸುಗಳು ಸಂಚರಿಸಲಿವೆ.

    ನಡುರಸ್ತೆಯಲ್ಲಿ ಬಡ ಆಟೋ ಚಾಲಕನ ಮೇಲೆ ಹಲ್ಲೆ ಮಾಡಿ ದರ್ಪ ತೋರಿದ ಮಹಿಳೆ: ವಿಡಿಯೋ ವೈರಲ್​

    ಧ್ವಜಾರೋಹಣ, ಜಾಥಾ, ಮೆರವಣಿಗೆ… ಬೆಂಗಳೂರಲ್ಲಿ ಸಂಚಾರ ಬದಲು: ಎಲ್ಲೆಲ್ಲಿ ಪಾರ್ಕಿಂಗ್​, ಪಾಸ್​ ಹೇಗೆ? ಇಲ್ಲಿದೆ ಡಿಟೇಲ್ಸ್​

    ರಾಷ್ಟ್ರಪತಿ ಪದಕ ಪುರಸ್ಕೃತರ ಪಟ್ಟಿ ಬಿಡುಗಡೆ: ರಾಜ್ಯದ 18 ಪೊಲೀಸ್​ ಅಧಿಕಾರಿ, ಸಿಬ್ಬಂದಿಗೆ ಮೆರಿಟೋರಿಯಸ್​ ಅವಾರ್ಡ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts