More

    ಬಲ್ಕಿಸ್ ಬಾನು ಗ್ಯಾಂಗ್​ ರೇಪ್​ ಅಪರಾಧಿಗಳ ಬಿಡುಗಡೆ: ಗುಜರಾತ್​ ಸರ್ಕಾರಕ್ಕೆ ಸುಪ್ರೀಂಕೋರ್ಟ್​ ನೋಟಿಸ್​

    ನವದೆಹಲಿ: ಬಲ್ಕಿಸ್ ಬಾನು ಗ್ಯಾಂಗ್​ ರೇಪ್​ ಪ್ರಕರಣದ 11 ಅಪರಾಧಿಗಳನ್ನು ಬಿಡುಗಡೆ ಮಾಡಿರುವುದನ್ನು ವಿರೋಧಿಸಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್​, ಪ್ರಕರಣ ಸಂಬಂಧ ಗುಜರಾತ್​ ಸರ್ಕಾರಕ್ಕೆ ನೋಟಿಸ್​ ಹೊರಡಿಸಿದ್ದು, ಪ್ರತಿಕ್ರಿಯೆ ನೀಡುವಂತೆ ಕೇಳಿದೆ. ಅಲ್ಲದೆ, ಎರಡು ವಾರಗಳ ಬಳಿಕ ವಿಚಾರಣೆ ನಡೆಸುವುದಾಗಿ ತಿಳಿಸಿದೆ.

    ಬಿಡುಗಡೆ ವಿರೋಧಿಸಿ ಸಿಪಿಐ(ಎಂ) ಪೊಲಿಟ್ಬುರೊ ಸದಸ್ಯರಾದ ಸುಭಾಶಿನಿ ಅಲಿ, ತೃಣಮೂಲ ಕಾಂಗ್ರೆಸ್​ ಸಂಸದೆ ಮೊಹುವಾ ಮೊಯಿತ್ರಾ ಮತ್ತು ಮಹಿಳಾ ಹಕ್ಕುಗಳ ಕಾರ್ಯಕರ್ತೆಯರು ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸುವುದಾಗಿ ಸುಪ್ರೀಂಕೋರ್ಟ್​ ಹೇಳಿತು.

    ಕ್ಷಮಾಧಾನ ನೀತಿ ಅಡಿಯಲ್ಲಿ ಅಪರಾಧಿಗಳ ಬಿಡುಗಡೆಗೆ ಅನುಮತಿಸಿರುವ ಪ್ರಕ್ರಿಯೆ ಸರಿಯಾಗಿದೆಯೇ ಎಂಬುದನ್ನು ಒಮ್ಮೆ ಪರಿಶೀಲಿಸಬೇಕಿದೆ ಎಂದು ಮುಖ್ಯ ನ್ಯಾಯಮೂರ್ತಿ ಎನ್​.ವಿ. ರಮಣ ನೇತೃತ್ವದ ಸಾಂವಿಧಾನಿಕ ಪೀಠ ಹೇಳಿದೆ. ಬಿಡುಗಡೆ ವೇಳೆ ಅವರು ಕಾರ್ಯವಿಧಾನದ ಮೂಲಕ ಹೋದರೋ? ಇಲ್ಲವೋ? ಎಂಬುದು ನನಗೆ ಗೊತ್ತಿಲ್ಲ ಪರಿಶೀಲಿಸಬೇಕು ಎಂದು ಎನ್​.ವಿ. ರಮಣ ಅವರು ತಿಳಿಸಿದರು.

    2002ರ ಗುಜರಾತ್​ ಗಲಭೆ ಸಂದರ್ಭದಲ್ಲಿ ಬಲ್ಕಿಸ್​ ಬಾನು ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಅಲ್ಲದೆ, ಆಕೆಯ ಕುಟುಂಬದ 7 ಸದಸ್ಯರನ್ನು ಹತ್ಯೆ ಮಾಡಲಾಗಿತ್ತು. ಈ ಪ್ರಕರಣದ ಅಡಿಯಲ್ಲಿ ಬಂಧಿತರಾಗಿದ್ದ 11 ಅಪರಾಧಿಗಳನ್ನು ಕ್ಷಮಾಧಾನ ನೀತಿಯ ಅಡಿಯಲ್ಲಿ ಗುಜರಾತ್​ ಸರ್ಕಾರ ಕಳೆದ ಸ್ವಾತಂತ್ರ್ಯ ದಿನದಂದು ಬಿಡುಗಡೆ ಮಾಡಿದ್ದು, ಭಾರಿ ವಿವಾದವನ್ನು ಸೃಷ್ಟಿಸಿದೆ. (ಏಜೆನ್ಸೀಸ್​)

    ದುರಂತ ಅಂತ್ಯ ಕಂಡ ಟೆಕ್ಕಿ: ಸುಂದರಿಯ ಡೈರಿ-ಮೊಬೈಲ್​ನಲ್ಲಿರೋ ಬಾಯ್​ಫ್ರೆಂಡ್​ ರಹಸ್ಯದ ಹಿಂದೆ ಬಿದ್ದ ಪೊಲೀಸರು!

    ಬಿಜೆಪಿ ಹೇಳುವಂತೆ ಸಾವರ್ಕರ್ ಸ್ವಾತಂತ್ರ್ಯ ಸೇನಾನಿಯಾಗಿದ್ದರೆ ಭಾರತಕ್ಕೆ ಬರಲು ನಿರಾಕರಿಸಿದ್ದೇಕೆ? ಪ್ರಿಯಾಂಕ್ ಖರ್ಗೆ ಪ್ರಶ್ನೆ

    ಶಿರಾದಲ್ಲಿ ಭೀಕರ ಅಪಘಾತ, 9 ಮಂದಿ ದುರ್ಮರಣ: ಹೊಟ್ಟೆಪಾಡಿಗಾಗಿ ಗುಳೆ ಹೊರಟ್ಟಿದ್ದ ಬಡವರು ದುರಂತ ಅಂತ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts