More

    ಬಿಗ್​ಬಾಸ್​ ಸೀಸನ್​ 8ರಲ್ಲಿ ಹೊಸ ದಾಖಲೆ ಬರೆದ ದಿವ್ಯಾ ಉರುಡುಗ: ಅಭಿಮಾನಿಗಳು ಫುಲ್​ ಖುಷ್​!

    ಬೆಂಗಳೂರು: ಬಿಗ್​ಬಾಸ್​ ಸೀಸನ್​ 8ರಲ್ಲಿ ಒಳ್ಳೆಯ ಖ್ಯಾತಿ ಪಡೆದಿರುವ ದಿವ್ಯಾ ಉರುಡುಗ ಇದೀಗ ಹೊಸ ದಾಖಲೆಯನ್ನು ಬರೆದಿದ್ದಾರೆ. ಪ್ರಸಕ್ತ ಆವೃತ್ತಿಯ ಮೊದಲ ಮಹಿಳಾ ಕ್ಯಾಪ್ಟನ್​ ಎಂಬ ಖ್ಯಾತಿಯನ್ನು ದಿವ್ಯಾ ಉರುಡುಗ ಗಳಿಸಿದ್ದಾರೆ.

    ಬಿಗ್​ಬಾಸ್​ ಎರಡನೇ ಇನ್ನಿಂಗ್ಸ್​ ಎರಡನೇ ವಾರವನ್ನು ಪೂರ್ಣಗೊಳಿಸಿದ್ದು, ಮೂರನೇ ವಾರಕ್ಕೆ ಕಾಲಿಟ್ಟಿದೆ. ದಿನದಿಂದ ದಿನಕ್ಕೆ ಕಾರ್ಯಕ್ರಮ ಕುತೂಹಲ ಕೆರಳಿಸುತ್ತಾ ಸಾಗಿದೆ. ಇದರ ನಡುವೆ ದಿವ್ಯಾ ಅಭಿಮಾನಿಗಳಿಗೆ ಬಿಗ್​ ಮನೆಯಿಂದ ಖುಷಿ ಸುದ್ದಿಯೊಂದು ಹೊರಬಿದ್ದಿದೆ. ದಿವ್ಯಾ ಕ್ಯಾಪ್ಟನ್​ ಆಗಿದ್ದು ಬಿಗ್​ಬಾಸ್​ 8ನೇ ಆವೃತ್ತಿಯಲ್ಲಿ ಹೊಸ ದಾಖಲೆ ಬರೆದಿದ್ದಾರೆ.

    ಕರೊನಾ ವೈರಸ್​ನಿಂದಾಗಿ ಮೊದಲ ಇನ್ನಿಂಗ್ಸ್​ ಅಮಾನತು ಮಾಡಿದ ಬಳಿಕ ಮತ್ತೆ ಬಿಗ್​ಬಾಸ್​ ಶೋ ಆರಂಭವಾಗುತ್ತದೆ ಎಂಬ ಸುಳಿವೇ ಇರಲಿಲ್ಲ. ಆದರೆ, ಬಿಗ್​ಬಾಸ್​ ಎರಡನೇ ಇನ್ನಿಂಗ್ಸ್​ ಆರಂಭಿಸುವ ಮೂಲಕ ವೀಕ್ಷಕರಿಗೆ ಸರ್ಪ್ರೈಸ್​ ನೀಡಿದೆ. ಇದೀಗ ದಿವ್ಯಾ ಕ್ಯಾಪ್ಟನ್​ ಆಗಿದ್ದು ಮುಂದಿನ ವಾರ ಯಾವ ರೀತಿ ಅವರು ಪ್ರದರ್ಶನ ನೀಡಲಿದ್ದಾರೆ ಎಂದು ಕುತೂಹಲ ಅಭಿಮಾನಿಗಳಲ್ಲಿದೆ.

    ಈಗಾಗಲೇ ತಮ್ಮ ಆಟದ ಮೂಲಕ ಮತ್ತು ಅರವಿಂದ್​ ಜತೆಗಿನ ಲವ್​ ಕಹಾನಿ ಮೂಲಕ ದಿವ್ಯಾ ಮನೆ ಮಾತಾಗಿದ್ದಾರೆ. ಅಲ್ಲದೆ, ಬಿಗ್​ಬಾಸ್​ ಸ್ಪರ್ಧಿಗಳಲ್ಲಿ ಜನಮೆಚ್ಚಿದ ಸ್ಪರ್ಧಿಯು ಆಗಿದ್ದಾರೆ. ಇದೀಗ ಕ್ಯಾಪ್ಟನ್​ ಆಗಿರುವುದು ಅವರ ಖ್ಯಾತಿ ಮತ್ತಷ್ಟು ಹೆಚ್ಚಾಗಲಿದೆ. (ಏಜೆನ್ಸೀಸ್​)

    ಹೊರಗಿನಿಂದ ನೋಡಲು ಬ್ಯೂಟಿ ಪಾರ್ಲರ್: ಒಳಗೆ ಎಂಟ್ರಿ ಕೊಟ್ಟರೆ ಬೇರೆಯದ್ದೇ ಸ್ಟೋರಿ..!​

    ಎರಡೂ ಡೋಸ್ ಲಸಿಕೆ ಪಡೆದರೆ ಕೋವಿಡ್​ನಿಂದಾಗಿ ಸಾಯದಿರುವ ಸಾಧ್ಯತೆ ಎಷ್ಟು?

    ಅಂಬೆಗಾಲಿಡುವ ಮಗನ ಬಯೋಡೇಟಾ ಹಿಡಿದುಕೊಂಡು ಸಂದರ್ಶನಕ್ಕೆ ಹೋದ ಅಮ್ಮ; ಅಂಥದ್ದೇನಿತ್ತು ಅದರಲ್ಲಿ!?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts