More

    ಐತಿಹಾಸಿಕ ಸತ್ಯಗಳನ್ನು ಸುಳ್ಳು ಮಾಡುವ ಕೇಂದ್ರದ ಪ್ರಯತ್ನವನ್ನು ಕಾಂಗ್ರೆಸ್​ ಸದಾ ವಿರೋಧಿಸುತ್ತದೆ: ಸೋನಿಯಾ ಗಾಂಧಿ

    ನವದೆಹಲಿ: ತನ್ನ ರಾಜಕೀಯ ಸಿದ್ಧಾಂತದ ಪ್ರಚಾರವನ್ನು ಹರಡವುದಕ್ಕಾಗಿ ದೇಶದ ನಾಯಕರಾದ ಮಹಾತ್ಮ ಗಾಂಧಿ ಮತ್ತು ಜವಾಹರಲಾಲ್ ನೆಹರು ಅವರನ್ನು ನಿಂದಿಸಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್​ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ವಾಗ್ದಾಳಿ ನಡೆಸಿದರು.

    ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆ ಹಿನ್ನೆಲೆಯಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಸೋನಿಯಾ ಗಾಂಧಿ, ಕೇಂದ್ರ ಸರ್ಕಾರವನ್ನು ಗುರಿಯಾಗಿಸಿ ಟೀಕಾಪ್ರಹಾರ ನಡೆಸಿದರು. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಭಾರತೀಯ ಪಡೆಗಳ ತ್ಯಾಗವನ್ನು ಕಡೆಗಣಿಸುವ ಪ್ರಯತ್ನವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದರು.

    ಈ ದುರಹಂಕಾರದ ಸರ್ಕಾರವು ಐತಿಹಾಸಿಕ ಸತ್ಯಗಳನ್ನು ಸುಳ್ಳು ಮಾಡಲು ಮತ್ತು ಗಾಂಧಿ-ನೆಹರು-ಆಜಾದ್-ಪಟೇಲ್ ಅವರಂತಹ ನಾಯಕರ ಪ್ರತಿ ಪ್ರಯತ್ನವನ್ನು ಕೆಡಿಸುವ ಅವರ ಪ್ರಯತ್ನಗಳನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಯಾವಾಗಲೂ ವಿರೋಧಿಸುತ್ತದೆ ಎಂದು ಹೇಳಿದರು.

    ಇದೇ ಸಂದರ್ಭದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ದೇಶದ ಜನತೆಗೆ ಸೋನಿಯಾ ಗಾಂಧಿ ಅವರು ಶುಭಕೋರಿದರು. ಕಳೆದ 75 ವರ್ಷಗಳಲ್ಲಿ, ಹೆಚ್ಚು ಪ್ರತಿಭಾವಂತ ಭಾರತೀಯರು ವಿಜ್ಞಾನ, ಶಿಕ್ಷಣ, ಆರೋಗ್ಯ ಮತ್ತು ಮಾಹಿತಿ ಕ್ಷೇತ್ರಗಳಲ್ಲಿ ದೇಶವನ್ನು ಪ್ರಗತಿಯ ಹಾದಿಯಲ್ಲಿ ಮುನ್ನಡೆಸಿದ್ದಾರೆ. ಭಾರತದ ದೂರದೃಷ್ಟಿಯ ನಾಯಕರು ಮುಕ್ತ, ನ್ಯಾಯಸಮ್ಮತ ಮತ್ತು ಪಾರದರ್ಶಕ ಚುನಾವಣಾ ವ್ಯವಸ್ಥೆಯ ಅಡಿಪಾಯವನ್ನು ಹಾಕಿದರು. ಅವರು ಬಲವಾದ ಪ್ರಜಾಪ್ರಭುತ್ವ ಮತ್ತು ಸಾಂವಿಧಾನಿಕ ಸಂಸ್ಥೆಗಳನ್ನು ಒದಗಿಸಿದರು ಎಂದರು.

    ಭಾರತವು ತನ್ನ ವೈವಿಧ್ಯಮಯ ಸಂಸ್ಕೃತಿಗಳು ಮತ್ತು ಭಾಷೆಗಳ ಮೂಲಕ ವೈಭವಯುತ ರಾಷ್ಟ್ರವಾಗಿ ತನ್ನ ಇಮೇಜ್ ಅನ್ನು ಭದ್ರಪಡಿಸಿಕೊಂಡಿದೆ ಎಂದು ಇದೇ ಸಂದರ್ಭದಲ್ಲಿ ಒತ್ತಿ ಹೇಳಿದರು. (ಏಜೆನ್ಸೀಸ್​)

    ಸ್ವಾತಂತ್ರ್ಯದ ಅಮೃತ ಮಹೋತ್ಸವ: ಪಂಚಪ್ರಾಣ ಸಂಕಲ್ಪಕ್ಕೆ ಕರೆ, ಪ್ರಧಾನಿ ಮೋದಿ ಭಾಷಣದ ಹೈಲೈಟ್ಸ್ ಇಲ್ಲಿದೆ…

    ದೇಶಕ್ಕಾಗಿ ಯುವಕರು ಪ್ರಾಣ ಕೊಡುವ ಅವಶ್ಯಕತೆ ಇಲ್ಲ, ಬದಲಾಗಿ ದೇಶ ಕಟ್ಟುವ ಕೆಲಸ ಮಾಡ್ಬೇಕು: ಸಿಎಂ ಬೊಮ್ಮಾಯಿ

    https://www.vijayavani.net/amrit-mahotsava-padayatare-congress-walk-national-college-ground/

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts