More

    ವಾಹನ ಚಾಲಕರೇ ಎಚ್ಚರ! ನೀವು ತಪ್ಪು ಮಾಡದಿದ್ರೂ ನಿಮ್ಮ ವಾಹನಕ್ಕೆ ಬಿದ್ದಿರುತ್ತದೆ ದಂಡ

    ಬೆಂಗಳೂರು: ನಗರದ ವಾಹನ ಚಾಲಕರು ತುಂಬಾ ಎಚ್ಚರಿಕೆ ವಹಿಸಬೇಕಾದ ಸುದ್ದಿ ಇದು. ಏಕೆಂದರೆ, ನೀವು ತಪ್ಪು ಮಾಡದೇ ಇದ್ರೂ ನಿಮ್ಮ ವಾಹನಕ್ಕೆ ದಂಡ ಬಿದ್ದಿರುತ್ತದೆ. ಅಂಥದ್ದೊಂದು ಖತರ್ನಾಕ್​ ಕೃತ್ಯ ನಗರದಲ್ಲಿ ನಡೆಯುತ್ತಿದ್ದು, ಇದೀಗ ಬೆಳಕಿಗೆ ಬಂದಿದೆ.

    ಹೌದು, ನಗರದಲ್ಲಿ ನಕಲಿ‌ ನಂಬರ್ ಪ್ಲೇಟ್ ಹಾವಳಿ ಹುಟ್ಟಿಕೊಂಡಿದೆ. ಯಾರದ್ದೋ ಹೆಸರಿನಲ್ಲಿರುವ ನಂಬರ್ ಇನ್ಯಾವುದೋ ವಾಹನಕ್ಕೆ ಬಳಕೆ ಮಾಡಲಾಗುತ್ತಿದೆ. ದಂಡದ ರಶೀದಿ ಬಂದಾಗಲೇ ಈ ಬಗ್ಗೆ ವಾಹನ ಮಾಲೀಕರಿಗೆ ಗೊತ್ತಾಗುತ್ತಿದ್ದು, ಬೆಂಗಳೂರು ಸಂಚಾರಿ ಪೊಲೀಸರಿಗೆ ನಿರಂತವಾಗಿ ದೂರು ಬರುತ್ತಿದೆ.

    ಬಜಾಜ್ ಡಿಸ್ಕವರ್​ಗೆ ನೊಂದಣಿಯಾದ ಸೇಮ್ ನಂಬರ್ ಅಪಾಚೆ ವಾಹನಕ್ಕಿದ್ದು, ಆಂಧ್ರ ಪ್ರದೇಶದಲ್ಲಿದ್ದವರಿಗೂ ದಂಡ ಬಿದ್ದಿದೆ. ಜೀವನ್​ ಎಂಬುವರು ಎರಡು ವರ್ಷದಿಂದ ಆಂಧ್ರದಲ್ಲೆ ವಾಸ ಮಾಡುತ್ತಿದ್ದಾರೆ. ಅವರ ಬೈಕ್ ಕೂಡ ಅವರ ಬಳಿಯೇ ಇದೇ. ಆದರೆ ಬೆಂಗಳೂರು ನಗರದಲ್ಲಿ ಟ್ರಾಫಿಕ್ ನಿಯಮ ಉಲ್ಲಂಘನೆ ಆಗಿದೆ ಎಂದು ದಂಡ ಬಿದ್ದಿದೆ. ಇದನ್ನು ಗಮನಿಸಿರುವ ಜೀವನ್​ ಟ್ವೀಟ್​ ಮೂಲಕ ಬೆಂಗಳೂರು ಪೊಲೀಸರಿಗೆ ದೂರು ನೀಡಿದ್ದಾರೆ.

    ಕಳೆದ ಒಂದು ತಿಂಗಳಿನಲ್ಲಿ ಈ ಸಂಬಂಧ ನೂರಾರು ದೂರುಗಳು ದಾಖಲಾಗಿದೆ. ಕಿಡಿಗೇಡಿಗಳು ನಕಲಿ ನಂಬರ್ ಪ್ಲೇಟ್ ಬಳಸಿ ವಾಹನ ಬಳಸುತ್ತಿದ್ದಾರೆ. ನಕಲಿ ನಂಬರ್ ಪ್ಲೇಟ್ ಬಳಸಿ ಅಪರಾಧ ಕೃತ್ಯ ಎಸಗಿರುವ ಸಾಧ್ಯತೆಯೂ ಇದೆ. ಸದ್ಯ ನಕಲಿ‌ ನಂಬರ್ ಪ್ಲೇಟ್ ಹಾವಳಿಗೆ ಕಡಿವಾಣ ಹಾಕಬೇಕಿದೆ. (ದಿಗ್ವಿಜಯ ನ್ಯೂಸ್​)

    ಅಪ್ರಾಪ್ತೆ ಮೇಲೆ ಅತ್ಯಾಚಾರ​ ಪ್ರಕರಣ: ಶಾಕಿಂಗ್​ ಹೇಳಿಕೆ ಕೊಟ್ಟ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ

    ತಿಂಗಳ ಹಿಂದಷ್ಟೇ ಜನಿಸಿದ್ದ ಮುದ್ದು ಮಗುವಿಗೆ ತಂದೆಯಾಗಿದ್ದ ಪೊಲೀಸ್​ ಪೇದೆ ಬಾಳಲ್ಲಿ ದುರಂತ

    ರಕ್ಷಣಾ ಕಾರ್ಯಾಚರಣೆ ವೇಳೆ ಹೆಲಿಕಾಪ್ಟರ್​ನಿಂದ ಕೆಳಗೆ ಬಿದ್ದು ವ್ಯಕ್ತಿ ದುರಂತ ಸಾವು: ಭಯಾನಕ ದೃಶ್ಯ ಸೆರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts