More

    ವಾಹನ ಸವಾರರಿಗೆ ಮಾತ್ರವಲ್ಲ ಇನ್ಮುಂದೆ ಪಾದಾಚಾರಿಗಳಿಗೂ ಬೀಳಲಿದೆ ದಂಡ..!

    ಬೆಂಗಳೂರು: ವಾಹನ ಸವಾರರಿಗೆ ಮಾತ್ರವಲ್ಲ ಇನ್ನು ಮುಂದೆ ಪಾದಾಚಾರಿಗಳಿಗೂ ದಂಡ ವಿಧಿಸಲು ಬೆಂಗಳೂರು ಸಂಚಾರಿ ಪೊಲೀಸ್​ ಇಲಾಖೆ ಚಿಂತನೆ ನಡೆಸುತ್ತಿರುವ ವಿಚಾರ ವರದಿಯಾಗಿದೆ.

    ನಿಗದಿತ ಸ್ಥಳಗಳಲ್ಲಿ ಮಾತ್ರ ರಸ್ತೆಯನ್ನ ದಾಟಬೇಕು. ಜೀಬ್ರಾ ಕ್ರಾಸ್​ ಹೊರತುಪಡಿಸಿ ಎಲ್ಲೆಂದರಲ್ಲಿ ರಸ್ತೆ ದಾಟಿದರೆ, ಅಂತಹವರಿಗೆ ದಂಡ ವಿಧಿಸಲು ಸಂಚಾರಿ ಪೊಲೀಸ್​ ಇಲಾಖೆ ಮುಂದಾಗಿದೆ.

    ಬೇಕಾಬಿಟ್ಟಿಯಾಗಿ ಎಲ್ಲೆಂದರಲ್ಲಿ ರಸ್ತೆ ದಾಟಿ ಕಳೆದ ವರ್ಷ 69 ಜನ ಮೃತಪಟ್ಟಿದ್ದರು. ಅಪಘಾತಗಳಿಂದ ಜನರ ಜೀವ ಉಳಿಸಲು ಹೊಸ ನಿಯಮ ತರುವ ಪ್ರಸ್ತಾವನೆಯನ್ನು ಸಂಚಾರಿ ಪೊಲೀಸ್​ ಇಲಾಖೆ ತಯಾರು ಮಾಡಿದೆ.

    ಆದರೆ, ಈ ಹೊಸ ನಿಯಮ ಜಾರಿಗೂ ಮುನ್ನವೇ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ. ನಗರದಲ್ಲಿ ಜೀಬ್ರಾ ಕ್ರಾಸ್​ ವ್ಯವಸ್ಥೆ ಎಷ್ಟರ ಮಟ್ಟಿಗೆ ಇದೆ ಎಂಬ ಪ್ರಶ್ನೆ ಎತ್ತಿದ್ದಾರೆ. ಬರೀ ದಂಡವನ್ನೇ ಹಾಕುವುದಲ್ಲ ಅದಕ್ಕೆ ತಕ್ಕಂತೆ ಸೌಲಭ್ಯವು ಇರಬೇಕು ಎಂಬ ಮಾತುಗಳು ಕೇಳಿಬರುತ್ತಿವೆ. ಜೀಬ್ರಾ ಕ್ರಾಸ್​ ಎಲ್ಲೆಲ್ಲಿದೆ. ಅದನ್ನು ಹುಡುಕಿಕೊಂಡು ಹೋಗಿ ರಸ್ತೆ ದಾಟಬೇಕಾ ಎಂಬ ಪ್ರಶ್ನೆಗಳು ಎದ್ದಿವೆ.

    ಒಂದು ವೇಳೆ ಹೊಸ ನಿಯಮ ಜಾರಿಗೆಯಾದ್ರೆ ಸಂಚಾರಿ ಪೊಲೀಸ್​ ಇಲಾಖೆ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗುವುದು ಖಂಡಿತ ಎಂಬ ಮಾತಿಗಳು ಕೇಳಿಬರುತ್ತಿವೆ. ಆದರೆ, ಪೊಲೀಸ್​ ಇಲಾಖೆ ಏನು ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ. (ದಿಗ್ವಿಜಯ ನ್ಯೂಸ್​)

    ನಾನಿನ್ನೂ ಜೀವಂತವಾಗಿದ್ದೇನೆ ಅಂದ್ರೆ ಈ ಇಬ್ಬರು ಕಾರಣ! ಚರ್ಚೆ ಹುಟ್ಟುಹಾಕಿದ ಸಮಂತಾ ಹೇಳಿಕೆ

    ಮಾರ್ಚ್​ 18ಕ್ಕೆ ಬಿಡುಗಡೆಯಾದ್ರೆ RRR ಸಿನಿಮಾಗೆ ಕರ್ನಾಟಕದಲ್ಲಿ ಎದುರಾಗಲಿದೆ ಭಾರೀ ಸಂಕಷ್ಟ

    ಐಪಿಎಲ್ ಆಟಗಾರರ ಹರಾಜು ಪಟ್ಟಿ ಪ್ರಕಟ; 1,214 ಆಟಗಾರರು ನೋಂದಣಿ; 49 ಆಟಗಾರರ ಮೂಲ ಬೆಲೆ 2 ಕೋಟಿ ರೂ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts