More

    ಇನ್ಮುಂದೆ ಕರೊನಾ ಬಗ್ಗೆ ಸರ್ಕಾರ ಸೂಚಿಸಿದ ವೈದ್ಯರು ಮಾತ್ರ ಮಾತಾಡ್ಬೇಕು: ಕೆ. ಸುಧಾಕರ್​

    ಬೆಂಗಳೂರು: ಮಹಾಮಾರಿ ಕರೊನಾ ವೈರಸ್​ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈದ್ಯರು ತಮ್ಮ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಸಾಕಷ್ಟು ವಿಡಿಯೋಗಳನ್ನು ಜನತೆ ವೀಕ್ಷಿಸಿದ್ದಾರೆ. ಕರೊನಾ ಬಗ್ಗೆ ವೈದ್ಯರಲ್ಲೇ ಭಿನ್ನ ಹೇಳಿಕೆಗಳಿರುವುದನ್ನು ಗಮನಿಸಿದ್ದಾರೆ. ಈ ಹೇಳಿಕೆಗಳು ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದು, ಇದೀಗ ಕರೊನಾ ಬಗ್ಗೆ ಮಾತನಾಡುವ ವೈದ್ಯರ ಬಾಯಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಂಡಿದ್ದು, ಸರ್ಕಾರದ ಈ ನಿರ್ಧಾರ ತೀವ್ರ ಆಕ್ರೋಶಕ್ಕೂ ಗುರಿಯಾಗಿದೆ.

    ಕರೊನಾ ಬಗ್ಗೆ ಇನ್ಮುಂದೆ ಸರ್ಕಾರ ಸೂಚಿಸಿದವರು ಮಾತ್ರ ಮಾತನಾಡಬೇಕೆಂಬ ಆದೇಶ ಹೊರಡಿಸಲು ಸರ್ಕಾರ ನಿರ್ಧಾರ ಮಾಡಿದೆ.

    ಈ ಬಗ್ಗೆ ಮಾತನಾಡಿರುವ ಆರೋಗ್ಯ ಸಚಿವ ಕೆ. ಸುಧಾಕರ್​, ವೈದ್ಯರಿಂದ ನಾವಿದನ್ನು ನಿರೀಕ್ಷೆ ಮಾಡಿರಲಿಲ್ಲ. ಮೊದಲ ಎರಡು ಅಲೆಯಲ್ಲೂ ವೈದ್ಯರು ಕರೊನಾ ಬಗ್ಗೆ ಭಿನ್ನ ಹೇಳಿಕೆಗಳನ್ನು ನೀಡಿದ್ದರು. ಆದರೆ, ಆ ರೀತಿ ಮಾತನಾಡಬಾರದು. ಹೀಗಾಗಿ ಈ ಅಂಶವನ್ನು ಸರ್ಕಾರ ಗಮನಿಸಿದ್ದು, ಕರೊನಾ ವಿಚಾರವಾಗಿ ಸರ್ಕಾರ ನೇಮಿಸಿದ ಅಧಿಕೃತ ಮಾನವ ಸಂಪನ್ಮೂಲ ಅಧಿಕಾರಿ ಅಥವಾ ವೈದ್ಯರು ಮಾತ್ರ ಮಾತನಾಡಬೇಕೆಂಬ ಆದೇಶವುಳ್ಳ ಕಡತಕ್ಕೆ ಈಗಾಗಲೇ ಸಹಿ ಕೂಡ ಹಾಕಲಾಗಿದೆ. ಬಹುಶಃ ಇಂದು ಆದೇಶ ಹೊರಬೀಳಲಿದೆ ಎಂದು ಸುಧಾಕರ್​ ತಿಳಿಸಿದರು.

    ಬೆಂಗಳೂರಿನಲ್ಲಿ ಸುಮಾರು 14 ರಿಂದ 15 ವೈದ್ಯರು ಮತ್ತು ಆಯಾ ಜಿಲ್ಲಾ ಕೇಂದ್ರಗಳಲ್ಲಿ ನಾವು ಯಾರನ್ನು ಅಧಿಕೃತವಾಗಿ ನೇಮಕ ಮಾಡುತ್ತೇವೆಯೋ ಅವರು ಕೊಡುವ ಮಾಹಿತಿ ಮಾತ್ರ ಅಧಿಕೃತವಾಗಿರುತ್ತದೆ. ಅವರು ಮಾತ್ರ ಕರೊನಾ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದ್ದಾರೆ. ಬೇರೆಯವರಿಗೆ ಕರೊನಾ ಬಗ್ಗೆ ಗೊತ್ತಿಲ್ಲ ಅಂತಾ ಹೇಳುತ್ತಿಲ್ಲ. ಆದರೆ, ಭಿನ್ನ ಹೇಳಿಕೆಗಳಿಂದ ಜನರಲ್ಲಿ ಗೊಂದಲ ಉಂಟಾಗಬಾರದು ಅನ್ನೋ ಉದ್ದೇಶದಿಂದ ಈ ನಿರ್ಧಾರ ಮಾಡಲಾಗಿದೆ ಎಂದು ಸುಧಾಕರ್​ ಅವರು ಹೇಳಿದ್ದಾರೆ.

    ಸರ್ಕಾರದ ನಿರ್ಧಾರಕ್ಕೆ ತೀವ್ರ ಆಕ್ರೋಶ
    ಕರೊನಾ ಬಗ್ಗೆ ಇನ್ಮುಂದೆ ಸರ್ಕಾರ ಸೂಚಿಸಿದವರು ಮಾತ್ರ ಮಾತನಾಡಬೇಕೆಂಬ ನಿರ್ಧಾರಕ್ಕೆ ಪ್ರತಿಪಕ್ಷಗಳ ನಾಯಕರು ಮತ್ತು ವೈದ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ವಾಕ್​ ಸ್ವಾತಂತ್ರವನ್ನು ಹತ್ತಿಕ್ಕುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಇದು ಸರ್ಕಾರದ ಸರ್ವಾಧಿಕಾರಿ ಧೋರಣೆ ಎಂಬ ಟೀಕೆಗಳು ವ್ಯಕ್ತವಾಗುತ್ತಿದೆ. ಅಲ್ಲದೆ, ಇದರಲ್ಲಿ ವೈದ್ಯರನ್ನು ಕಟ್ಟಿಹಾಕುವ ಹುನ್ನಾರವಿದೆ ಎಂಬ ಆರೋಪ ಕೇಳಿಬಂದಿದೆ.

    ಬಹಳ ವರ್ಷಗಳ ಹಿಂದೆಯೇ ಧನುಷ್​-ಐಶ್ವರ್ಯಾ ಬೇರೆ ಆಗ್ಬೇಕಿತ್ತಂತೆ! ಆದ್ರೆ ಈ ಸಮಯಕ್ಕಾಗಿ ಕಾದಿದ್ದರು

    ಅಕ್ಕ or ಆಂಟಿ ಎಂದು ಕರೆಯಬೇಕೆ? ನೆಟ್ಟಿಗನ ಪ್ರಶ್ನೆಗೆ ಖ್ಯಾತ ನಿರೂಪಕಿ ಅನಸೂಯಾ ಉತ್ತರ ಹೀಗಿತ್ತು….

    ಸಂಕ್ರಾಂತಿ ಹಬ್ಬ ಮುಗಿಸಿ ರೈಲನ್ನೇರಿದ ಜೂ. ಕಲಾವಿದೆ ದುರಂತ ಸಾವು: ಸವಿನಿದ್ದೆಯೇ ಸಾವಾಗಿ ಬಂತು!

    ಬರೋಬ್ಬರಿ 10 ವರ್ಷ ಸರ್ಕಾರದ ಕಣ್ಣಿಗೆ ಮಣ್ಣೆರಚಿ ಸರ್ಕಾರಿ ಸಂಬಳ ಗಿಟ್ಟಿಸಿದ ಈತ ಸಿಕ್ಕಿಬಿದ್ದಿದ್ದೇ ರೋಚಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts