More

    ಪತ್ನಿ ಚನ್ನಮ್ಮ ಜತೆ ಕಾಶಿ ವಿಶ್ವನಾಥನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ ಸಿಎಂ ಬೊಮ್ಮಾಯಿ

    ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಮುಂಜಾನೆ ಪತ್ನಿ ಚನ್ನಮ್ಮ ಅವರ ಜತೆ ಕಾಶಿ ವಿಶ್ವನಾಥನ ದರ್ಶನ ಪಡೆದರು. ಈ ಸಂದರ್ಭದಲ್ಲಿ ಅವರು ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

    ಈ ವಿಚಾರವನ್ನು ಸಿಎಂ ಬೊಮ್ಮಾಯಿ ಅವರು ಟ್ವೀಟ್​ ಮೂಲಕ ಹಂಚಿಕೊಂಡಿದ್ದು, ಇಂದು ಬೆಳಿಗ್ಗೆ ಉತ್ತರ ಪ್ರದೇಶದ ವಾರಣಾಸಿಯಲ್ಲಿ ಶ್ರೀ ಕಾಶಿ ವಿಶ್ವನಾಥನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಲಾಯಿತು ಎಂದು ಬರೆದುಕೊಂಡಿದ್ದಾರೆ.

    ನವಭಾರತದ ಮಹತ್ವಾಕಾಂಕ್ಷೆಯ ಕಾಶಿ ವಿಶ್ವನಾಥ ಸನ್ನಿಧಾನ ಪುನರುತ್ಥಾನದ ‘ದಿವ್ಯಕಾಶಿ- ಭವ್ಯಕಾಶಿ’ ಯೋಜನೆಯ ಮೊದಲ ಹಂತಕ್ಕೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ (ಡಿ.13) ಚಾಲನೆ ನೀಡಿದರು. 5 ಲಕ್ಷ ಚದರ ಅಡಿಗೆ ವಿಸ್ತರಿಸಲ್ಪಟ್ಟ ಯಾತ್ರಿ ಸುವಿಧಾ ಕೇಂದ್ರ, ಪ್ರವಾಸಿ ಸೌಲಭ್ಯ ಕೇಂದ್ರ, ವೇದಿಕ್ ಕೇಂದ್ರ, ಮುಮುಕ್ಷು ಭವನ, ವೀಕ್ಷಣಾ ಗ್ಯಾಲರಿ ಸೇರಿ ಈ ಯೋಜನೆಯ ಭಾಗವಾಗಿರುವ 23 ಕಟ್ಟಡಗಳ ಲೋಕಾರ್ಪಣೆಯೂ ನಡೆಯಿತು.

    ಈ ವೇಳೆ ಮಾತನಾಡಿದ ಅವರು ಭಾರತದ ನಾಗರಿಕ ಪರಂಪರೆಯು ಸ್ಥಿತಿಸ್ಥಾಪಕತ್ವ ಗುಣ ಹೊಂದಿದೆ. ಔರಂಗಜೇಬನಂತಹ ದುರುಳರು ಅದನ್ನು ನಾಶಮಾಡಲು ಪ್ರಯತ್ನಿಸಿದರು. ಆದರೆ, ಪುರಾತನ ಪವಿತ್ರ ನಗರ ಕಾಶಿಯು ಅದರ ಹೊಸ ವೈಭವದೊಂದಿಗೆ ಹೊಸ ಅಧ್ಯಾಯವನ್ನು ಬರೆಯುತ್ತಿರುವಾಗ ಅಂತಹ ಪ್ರಯತ್ನಗಳು ಇತಿಹಾಸದ ಕಪ್ಪುಪುಟಗಳಿಗೆ ಸೇರಿತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

    ಪೂರ್ಣಚಂದ್ರ ತೇಜಸ್ವಿ ಪತ್ನಿ ಇನ್ನಿಲ್ಲ- ‘ನನ್ನ ತೇಜಸ್ವಿ’ ಮೂಲಕ ಮನೆಮಾತಾಗಿದ್ದ ರಾಜೇಶ್ವರಿ ಅಮ್ಮಾ

    ಹೊಸ ಕಾಶಿ, ದೇಶಕ್ಕೆ ಹೊಸ ದಿಶೆ: ಸ್ವಚ್ಛತೆ, ಸೃಜನೆ-ನವೋನ್ವೇಷಣೆ, ಸ್ವಾವಲಂಬಿ ಭಾರತ

    VIDEO| ಬಾರ್​ ಒಳಗಿನ ಕನ್ನಡಿ ಒಡೆದ ಪೊಲೀಸರಿಗೆ ಶಾಕ್​: ಒಂದೇ ಕೋಣೆಯ 17 ಮಹಿಳೆಯರ ರಹಸ್ಯ ಬಯಲು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts