More

    ಅಕಾಲಿಕ ಮಳೆ ಹಾನಿ ಬಗ್ಗೆ ಅಧಿಕಾರಿಗಳು ಕೊಟ್ಟಿರುವ ವರದಿ ಪರಿಶೀಲಿಸಿ ಪರಿಹಾರ ಬಿಡುಗಡೆ: ಸಿಎಂ ಬೊಮ್ಮಾಯಿ

    ಬೆಂಗಳೂರು: ಮಳೆಯಿಂದ ಹಾನಿಗೊಳಗಾದ ಪ್ರದೇಶಗಳ ಬಾಕಿ ಪರಿಹಾರವನ್ನು ಬಿಡುಗಡೆ ಮಾಡಿದ್ದು, ಪ್ರಸ್ತುತ ರಾಜ್ಯದಲ್ಲಿ ಅಕಾಲಿಕ ಮಳೆಯಿಂದ ಉಂಟಾಗಿರುವ ಹಾನಿಯ ಬಗ್ಗೆ ಅಧಿಕಾರಿಗಳು ಕೊಟ್ಟಿರುವ ವರದಿಯ ಮೇಲೆ ಪರಿಹಾರದ ಬಗ್ಗೆ ಇಂದು ಸಂಜೆ ಚರ್ಚಿಸುತ್ತೇವೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.

    ಮಳೆಯಿಂದ ಬೆಳೆಗಳ ಹಾನಿ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿ ಅಕಾಲಿಕ ಮಳೆಯಾಗ್ತಿದೆ. ದಕ್ಷಿಣ, ಉತ್ತರ ಒಳನಾಡು, ಕರಾವಳಿಗಳಲ್ಲಿ ವ್ಯಾಪಕ ಮಳೆ ಆಗಿದೆ. ಕಳೆದ ಮೂರು ದಿನಗಳಲ್ಲಿ ಬೆಳೆ ಹಾನಿ, ರಸ್ತೆ ಹಾನಿ ಹಾಗೂ ಕೆಲವು ಸಾವು ಆಗಿದೆ ಎಂದರು.

    ಜುಲೈ, ಆಗಸ್ಟ್ ಹಾಗೂ ಸೆಪ್ಟೆಂಬರ್​ನಲ್ಲಿ 3 ಲಕ್ಷ ರೈತರ ಕೃಷಿ ಬೆಳೆ ಹಾನಿಯಾಗಿತ್ತು. 130 ಕೋಟಿ ರೂ. ಬೆಳೆ ಪರಿಹಾರ ಬಾಕಿ ಇತ್ತು. ಮೊನ್ನೆ ಅದನ್ನು ಕೊಡಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಪ್ರಸ್ತುತ ರಾಜ್ಯದಲ್ಲಿ ಸುರಿದ ನಿರಂತರ ಮಳೆಯಿಂದಾಗಿ ಉಂಟಾಗಿರುವ ಹಾನಿಯ ಬಗ್ಗೆ ಅಧಿಕಾರಿಗಳು ಕೊಟ್ಟಿರುವ ವರದಿ ಮೇಲೆ ಇವತ್ತು ಸಂಜೆ ಪರಿಹಾರದ ಕುರಿತು ಚರ್ಚೆ ಮಾಡುತ್ತೇವೆ ಎಂದರು.

    ಕೆಲ ಸಚಿವರು ಜಿಲ್ಲೆಗಳಲ್ಲಿದ್ದಾರೆ. ಜಿಲ್ಲೆಗಳಿಗೆ ಹೋಗಲು ಚುನಾವಣಾ ಆಯೋಗದ ಅನುಮತಿ ಬೇಕು. ನಿನ್ನೆ ಕಾರ್ಯದರ್ಶಿ ಮೂಲಕ ಆಯೋಗಕ್ಕೆ ಅನುಮತಿ ಕೇಳಿದ್ದೇವೆ. ಆಯೋಗ ಅನುಮತಿ ಕೊಟ್ರೆ ಎಲ್ಲ ಸಚಿವರೂ ಜಿಲ್ಲೆಗಳಿಗೆ ಹೋಗಿ ಮಳೆಯಿಂದಾದ ಹಾನಿಯ ಬಗ್ಗೆ ಪರಿಶೀಲನೆ ನಡೆಸುತ್ತಾರೆಂದು ತಿಳಿಸಿದರು.

    ಬಿಡಿಎ ಮೇಲೆ ಎಸಿಬಿ ದಾಳಿ ವಿಚಾರವಾಗಿ ಮಾತನಾಡಿ, ನಮ್ಮ ಸರ್ಕಾರ ಯಾವುದೇ ರೀತಿಯ ಭ್ರಷ್ಟಾಚಾರಕ್ಕೆ ಅವಕಾಶ ಕೊಡಲ್ಲ ಅಂತ ಹಿಂದೆಯೇ ಹೇಳಿದ್ದೇವೆ. ಎಸಿಬಿ ದಾಳಿ ಬಳಿಕ ಅವರು ಕೊಡುವ ವರದಿ, ಶಿಫಾರಸು ಮೇರೆಗೆ ಕ್ರಮ ತೆಗೆದುಕೊಳ್ಳುತ್ತೇವೆ. ಬಿಡಿಯಲ್ಲಿ ಯಾರನ್ನೂ ರಕ್ಷಿಸುವ ಕೆಲಸ ಮಾಡಲ್ಲ. ಬಿಡಿಎ ಭ್ರಷ್ಟಾಚಾರಗಳ ಬಗ್ಗೆ ವಿಶ್ವನಾಥ್ ಅವರು ನನಗೆ ಹೇಳಿದ್ದರು. ಯಾವುದೇ ಅಧಿಕಾರಿ ತಪ್ಪಿತಸ್ಥ ಇದ್ರೂ ಕ್ರಮ ಖಚಿತ. ಬಿಡಿಎ ಅನ್ನು ಒಂದ್ಸಲ ಸ್ವಚ್ಛ ಮಾಡಬೇಕು. ಮುಖ್ಯವಾಹಿನಿಗೆ ಬಿಡಿಎ ತರುವ ವ್ಯವಸ್ಥೆ ಮಾಡಬೇಕು. ಬಿಡಿಎ ಮೂಲಕ‌ ನಾಗರೀಕ ಸೇವೆ ಸಮರ್ಪಕವಾಗಿ ಸಿಗುವ ಕೆಲ ಮಾಡ್ತೇವೆ. ಬೆಂಗಳೂರಿನ ಮೇಲೆ ನಮಗೆ ವಿಶೇಷ ಕಾಳಜಿ ಇದೆ. ನಾನೂ ಕೂಡಾ ಹಲವು ಕಡೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದೆ. ಮುಂದೆಯೂ ಹೋಗ್ತೇನೆ. ಮಳೆ ಮುಗಿದ ಮೇಲೆ ದುರಸ್ತಿ ಕಾಮಗಾರಿಗಳನ್ನು ನಡೆಸ್ತೇವೆ ಎಂದು ಹೇಳಿದರು.

    ಇದು ವಿಶ್ವದ ಅತ್ಯಂತ ಶ್ರೀಮಂತ ಶ್ವಾನ: ಇದರ ಹೆಸರಲ್ಲಿರೋ ಒಟ್ಟು ಆಸ್ತಿ ಮೌಲ್ಯ ಕೇಳಿದ್ರೆ ಬೆರಗಾಗ್ತೀರಾ!

    ಬಹುಭಾಷಾ ನಟಿ ರಾಕುಲ್​ ಪ್ರೀತ್​ ಸಿಂಗ್​​ ಅವರ​ ಮುಂಬೈ ನಿವಾಸದಲ್ಲಿ ಅಗ್ನಿ ಅವಘಡ

    ಮಾಡೆಲ್​ಗಳಿಬ್ಬರ ದುರಂತ ಸಾವು: ಪಾರ್ಟಿಯಲ್ಲಿ ಡ್ರಗ್ಸ್​ ಅಮಲು, ಖಾಸಗಿ ವಿಡಿಯೋ ಬೆನ್ನತ್ತ ಪೊಲೀಸರು!

    ಪೇಜಾವರ ಶ್ರೀಗಳ ಪಾದದ ಧೂಳಿಗೂ ನೀವು ಸಮವಲ್ಲ: ಹಂಸಲೇಖ ವಿರುದ್ಧ ಶಿವರಾಣಿ ಆಕ್ರೋಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts