More

    ಮಾಡಿದ್ದುಣ್ಣೋ ಮಹಾರಾಯ! ಮಗ ನುಡಿದ ಸಾಕ್ಷಿಯಿಂದಲೇ ತಂದೆಗೆ ನಾಲ್ಕು ವರ್ಷ ಜೈಲು ಶಿಕ್ಷೆ

    ಬಳ್ಳಾರಿ: ಪತ್ನಿಗೆ ಬಲವಂತವಾಗಿ ವಿಷ ಕುಡಿಸಲು ಹೋದ ಪತಿರಾಯ ಇದೀಗ ನಾಲ್ಕು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿದ್ದಾನೆ. ಗಮನಾರ್ಹವೆಂದರೆ, ಸ್ವಂತ ಮಗನ ಸಾಕ್ಷಿಯಿಂದಾಗಿಯೇ ತಂದೆ ಕಂಬಿ ಹಿಂದ ಕೊಳೆಯಬೇಕಾದ ದುಸ್ಥಿತಿ ಎದುರಾಗಿದೆ.

    2017ರ ಮೇ 18ರಂದು ನಡೆದ ಘಟನೆಯ ವಿಚಾರಣೆ ನಡೆಸಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ಹೊರಡಿದೆ. ತನ್ನ ತಾಯಿಗೆ, ತಂದೆ ವಿಷ ಕುಡಿಸುವುದನ್ನು ಮಗ ನೋಡಿದ್ದ. ಇದೇ ಪ್ರಕರಣದ ಪ್ರಮುಖ ಸಾಕ್ಷಿಯಾತ್ತಿ. ಮಗ ನೀಡಿದ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ 2ನೇ ಬಳ್ಳಾರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ. ಆರೋಪಿತನಿಗೆ 4 ವರ್ಷ ಕಠಿಣ ಶಿಕ್ಷೆ ಮತ್ತು 5 ಸಾವಿರ ದಂಡ ವಿಧಿಸಿ ಮಹತ್ವದ ತೀರ್ಪು ಹೊರಡಿಸಿದೆ.

    ವಿವರಣೆಗೆ ಬರುವುದಾದರೆ, ಸುಜಾತಾ ಎಂಬುವರು ಬಳ್ಳಾರಿ ನಿವಾಸಿಯಾದ ಪೆದ್ದಣ್ಣ ಎಂಬಾತನನ್ನು ವಿವಾಹವಾಗಿದ್ದರು. ದಂಪತಿಗೆ ಸುರೇಂದ್ರ ಹೆಸರಿನ 11 ವರ್ಷದ ಮಗ ಮತ್ತು 9 ವರ್ಷದ ಸ್ಫೂರ್ತಿ ಎನ್ನುವ ಮಗಳಾಗಿದ್ದಾಳೆ‌. ಆರಂಭದಲ್ಲಿ ದಂಪತಿ ಚೆನ್ನಾಗಿಯೇ ಇದ್ದರು. ಆದರೆ, ದಂಪತಿಗಳ ಮಧ್ಯೆ ವೈಷಮ್ಯ ಬೆಳೆದು ನಿತ್ಯದ ಜಗಳಕ್ಕೆ ಕಾರಣವಾಗಿತ್ತು. ಗಂಡನಿಂದ ಸಜಾತಾಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ಹೆಚ್ಚಾಯಿತು.

    2017ರ ಮೇ 18ರಂದು ಸಂಜೆ 4 ಗಂಟೆಗೆ ಆರೋಪಿತನು ಬೇರೆ ಮಹಿಳೆಯೊಂದಿಗೆ ಮನೆಯಲ್ಲಿ ಇದ್ದಾಗ, ಅದನ್ನು ಸಜಾತಾ ನೋಡಿದಳು. ಬಳಿಕ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆಯಿತು. ತಾನು ಬದುಕಿರಬೇಕಾದರೆ ಇನ್ನೊಬ್ಬಳನ್ನು ಮದುವೆಯಾಗಲು ನಾನು ಬಿಡುವುದಿಲ್ಲ ಎಂದು ಸುಜಾತಾ ಹೇಳಿದ್ದಳು. ಇದರಿಂದ ಕೋಪಗೊಂಡ ಪೆದ್ದಣ್ಣ, ಹೆಂಡತಿಯ ಮೇಲೆ ಹಲ್ಲೆ ಮಾಡಿ, ಬಳಿಕ ಬಲವಂತಾಗಿ ವಿಷ ಕುಡಿಸಿ ಕೊಲೆ ಮಾಡಲು ಯತ್ನಿಸಿದೆ. ಅದೇ ಸಮಯಕ್ಕೆ ಮಗ ಸುರೇಂದ್ರ ಮನೆಗೆ ಬಂದಾಗ, ಸುಜಾತಾಳನ್ನು ಆತ ಪರಾರಿಯಾಗಿದ್ದ.

    ಇತ್ತ ಅಸ್ವಸ್ಥಗೊಂಡ ಸುಜಾತಾಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪೊಲೀಸರು ಪೆದ್ದಣ್ಣ ವಿರುದ್ಧ ಐಪಿಸಿ ಸೆಕ್ಷನ್ 504, 323, 498(ಎ) ಹಾಗೂ 307 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಮಹಿಳಾ ಠಾಣೆಯ ಪೊಲಿಸರಿಂದ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ‌ಯು ಸಲ್ಲಿಕೆಯಾಗಿತ್ತು. ನ್ಯಾಯಾಲಯವು ಘಟನೆಯ ಪ್ರತ್ಯಕ್ಷದರ್ಶಿಯಾದ ಮಗ ಸುರೇಂದ್ರ ಹಾಗೂ ದೂರುದಾರಳಾದ ಹೆಂಡತಿ ಸುಜಾತ‌ ಸೇರಿದಂತೆ 8 ಸಾಕ್ಷಿಗಳ ವಿಚಾರಣೆ ನಡೆಸಿತ್ತು.

    ಎರಡು ಕಡೆ ವಾದ ಆಲಿಸಿದ ಬಳ್ಳಾರಿಯ 2ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ವಿದ್ಯಾಧರ ಶಿರಹಟ್ಟಿ, ಆರೋಪಿಯ ಮೇಲಿನ ಆರೋಪ ಸಾಬೀತಾಗಿದೆ ಎಂದು ಅಪರಾಧಿಗೆ 4 ವರ್ಷ ಕಠಿಣ ಶಿಕ್ಷೆ ವಿಧಿಸಿ, ಮಹತ್ವದ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಎಂ.ಬಿ. ಸುಂಕಣ್ಣ, ಲಕ್ಷ್ಮಿದೇವಿ ಪಾಟೀಲ್ ಅವರು ಸಾಕ್ಷಿ ವಿಚಾರಣೆ ಮಾಡಿ ವಾದ ಮಂಡಿಸಿದ್ದರು. (ದಿಗ್ವಿಜಯ ನ್ಯೂಸ್​)

    VIDEO| ವಿದ್ಯಾರ್ಥಿಯನ್ನು ದುರ್ಬಳಕೆ ಮಾಡಿಕೊಂಡ ಶಿಕ್ಷಕಿ: ತರಗತಿಯೊಳಗೆ ನಡೆಯಿತು ದುರ್ವರ್ತನೆ

    ಇವರೇ ನೋಡಿ ಪಾಕ್​ ಪೊಲೀಸ್​ ಇಲಾಖೆಯಲ್ಲಿ ಉನ್ನತ ಹುದ್ದೆಗೇರಿದ ಮೊದಲ ಹಿಂದು ಮಹಿಳೆ!

    ಕಟ್ಟಿಗೆ ತರಲು ಕಾಡಿಗೆ ಹೋದ ಮಹಿಳೆಗೆ ಸಿಕ್ಕಿತು ವಜ್ರ! ಆಕೆಯ ಖುಷಿಗೆ ಪಾರವೇ ಇಲ್ಲ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts