ಕೇರಳ ನರಬಲಿ ಪ್ರಕರಣ: ವಯಸ್ಕರ ಸಿನಿಮಾದಲ್ಲಿ ನಟಿಸುವ ಆಸೆ, ತನಿಖೆಯಲ್ಲಿ ಬಯಲಾಯ್ತು ಭಯಾನಕ ಸಂಗತಿ

blank

ತಿರುವನಂತಪುರ: ವಾಮಾಚಾರಕ್ಕಾಗಿ ಮಹಿಳೆಯರಿಬ್ಬರನ್ನು ಬಲಿ ಕೊಟ್ಟ ಪ್ರಕರಣದಲ್ಲಿ ಓರ್ವ ಮಹಿಳೆ ಸೇರಿದಂತೆ ಮೂವರು ಆರೋಪಿಗಳನ್ನು ಕೇರಳ ಪೊಲೀಸರು ಮಂಗಳವಾರ (ಅ.11) ಬಂಧಿಸಿದ್ದು, ಇದೀಗ ತನಿಖೆಯಲ್ಲಿ ಇನ್ನಷ್ಟು ಭಯಾನಕ ಸಂಗತಿಗಳು ಹೊರಬೀಳುತ್ತಿವೆ.

blank
ಕೇರಳ ನರಬಲಿ ಪ್ರಕರಣ: ವಯಸ್ಕರ ಸಿನಿಮಾದಲ್ಲಿ ನಟಿಸುವ ಆಸೆ, ತನಿಖೆಯಲ್ಲಿ ಬಯಲಾಯ್ತು ಭಯಾನಕ ಸಂಗತಿ
ರೋಸ್ಲಿ ಮತ್ತು ಪದ್ಮ ವಾಮಾಚಾರಕ್ಕೆ ಬಲಿಯಾದ ಮಹಿಳೆಯರು

ಇದೀಗ ಬಂದಿರುವ ಮಾಹಿತಿ ಪ್ರಕಾರ ವಯಸ್ಕರ ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ ಭರವಸೆ ನೀಡಿ, ಮಹಿಳೆಯರಿಬ್ಬರನ್ನು ಕರೆದೊಯ್ದು ನರ ಬಲಿ ನೀಡಲಾಗಿದೆ. ಈ ಪ್ರಕರಣ ಇಡೀ ಕೇರಳವನ್ನೇ ಬೆಚ್ಚಿ ಬೀಳಿಸಿದ್ದು, ತನಿಖೆಯಿಂದ ಸಾಕಷ್ಟು ಭಯಾನಕ ಸಂಗತಿಗಳು ಹೊರಬರುತ್ತಿವೆ. ಬಲಿಯಾದ ಪದ್ಮಾ ಎಂಬಾಕೆ ಆರೋಪಿ ಮುಹಮ್ಮದ್​ ಶಫಿಯ ವಾಹನದಲ್ಲಿ ಹೋಗುತ್ತಿರುವ ಸಿಸಿಟಿವಿ ದೃಶ್ಯವೇ ಇಡೀ ಪ್ರಕರಣ ಬೆಳಕಿಗೆ ಬರಲು ಮುಖ್ಯ ಕಾರಣ ಎಂದು ತಿಳಿದುಬಂದಿದೆ.

ವಯಸ್ಕರ ಸಿನಿಮಾದಲ್ಲಿ ನಟಿಸುವ ಅವಕಾಶ ಕೊಡಿಸುವುದಾಗಿ ಪದ್ಮಾಗೆ ಆಮಿಷ ಒಡ್ಡಿ ಪತ್ತನಂತಿಟ್ಟ ಜಿಲ್ಲೆಯ ಎಳಂತೂರಿನ ಮನೆಗೆ ಕರೆದುಕೊಂಡು ಹೋಗಿದ್ದಾಗಿ ಆರೋಪಿ ಶಫಿ ಪೊಲೀಸರ ವಿಚಾರಣೆಯಲ್ಲಿ ತಪ್ಪೊಪ್ಪಿಕೊಂಡಿದ್ದಾನೆ. ಮನೆಗೆ ಕರೆದುಕೊಂಡು ಹೋದ ನಂತರ ಆರೋಪಿ ಭಗವಲ್ ಸಿಂಗ್ ಮತ್ತು ಆತನ ಪತ್ನಿ ಲೈಲಾ ಮೇಲೆ ಪ್ರಭಾವ ಬೀರಿದ ಶಫಿ, ಪದ್ಮಾಳನ್ನು ಕೊಲೆ ಮಾಡಿ, ಆಕೆಯ ದೇಹವನ್ನು 56 ತುಂಡುಗಳಾಗಿ ಕತ್ತರಿಸಿ ವಿವಿಧೆಡೆ ಹೂತಿಡಲಾಗಿತ್ತು.

ಕೇರಳ ನರಬಲಿ ಪ್ರಕರಣ: ವಯಸ್ಕರ ಸಿನಿಮಾದಲ್ಲಿ ನಟಿಸುವ ಆಸೆ, ತನಿಖೆಯಲ್ಲಿ ಬಯಲಾಯ್ತು ಭಯಾನಕ ಸಂಗತಿ
ಆರೋಪಿ ದಂಪತಿ ಭಗವಾಲ್​ ಸಿಂಗ್​ ಮತ್ತು ಲೈಲಾ

ಆರೋಪಿ ಶಫಿಯನ್ನು ರಶೀದ್ ಎಂತಲೂ ಕರೆಯಲಾಗುತ್ತಿತ್ತು. ಈತ ಆರೋಪಿ ದಂಪತಿಗೆ ಮಾಂತ್ರಿಕನಂತೆ ಪೋಸ್ ನೀಡಿದ್ದನು ಮತ್ತು ನರಬಲಿ ಮಾಡಿದರೆ ಅಪಾರ ಸಂಪತ್ತು ಪಡೆಯಬಹುದು ಎಂದು ಹೇಳಿದ್ದ. ಶಫಿಯ ಮಾತು ನಂಬಿ ಆತನಿಗೆ ಒಂದೂವರೆ ಲಕ್ಷ ರೂಪಾಯಿ ಶುಲ್ಕವನ್ನು ದಂಪತಿ ಪಾವತಿಸಿದ್ದರು. ಹಣಕಾಸಿನ ತೊಂದರೆಯಿಂದ ಹೊರಬರಬಂದು, ಆರ್ಥಿಕ ಏಳಿಗೆ ಸಾಧಿಸಬಹುದೆಂಬ ಆಸೆಗೆ ಬಿದ್ದು ದಂಪತಿ ಈ ಕೃತ್ಯ ಎಸಗಿದ್ದಾರೆ.

ಕೇರಳ ನರಬಲಿ ಪ್ರಕರಣ: ವಯಸ್ಕರ ಸಿನಿಮಾದಲ್ಲಿ ನಟಿಸುವ ಆಸೆ, ತನಿಖೆಯಲ್ಲಿ ಬಯಲಾಯ್ತು ಭಯಾನಕ ಸಂಗತಿ
ಪ್ರಮುಖ ಆರೋಪಿ ಶಫಿ

ಈಗ ಬಂಧನದಲ್ಲಿರುವ ಮೂವರು ಆರೋಪಿಗಳು ಈ ವರ್ಷದ ಜೂನ್‌ನಲ್ಲಿ ರೋಸೆಲಿನ್ ಎಂಬ ಇನ್ನೊಬ್ಬ ಮಹಿಳೆಯನ್ನು ಕೊಂದು ನರಬಲಿ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಇಬ್ಬರು ಮಹಿಳೆಯರ ಚೂರುಚೂರು ದೇಹದ ಭಾಗಗಳನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಆರೋಪಿಗಳು ಮೃತದೇಹಗಳ ಕೆಲವು ಭಾಗಗಳನ್ನು ಸೇವಿಸುವ ಮೂಲಕ ನರಭಕ್ಷಕತೆಯಲ್ಲಿ ತೊಡಗಿದ್ದಾರೆ ಎಂಬ ಭಯಾನಕ ಸಂಗತಿಯು ಕೂಡ ತನಿಖೆಯಲ್ಲಿ ತಿಳಿದುಬಂದಿದೆ.

ಆರೋಪಿ ದಂಪತಿ ಕೊಲೆ ಮಾಡುವ ಮುನ್ನ ಶಫಿ ಸಂತ್ರಸ್ತರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ ಎನ್ನಲಾಗಿದೆ. ಈ ಮೂವರನ್ನು ಸೈಕೋಪಾತ್‌ಗಳೆಂದು ಹೆಸರಿಸಲಾಗಿದೆ. ಈ ಆರೋಪಿಗಳು ಇಂತಹ ಹೆಚ್ಚಿನ ಕೊಲೆಗಳು ಮತ್ತು ಇತರ ಅಪರಾಧಗಳನ್ನು ಮಾಡಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಲು ಹೆಚ್ಚಿನ ತನಿಖೆಗಳು ನಡೆಯುತ್ತಿವೆ. (ಏಜೆನ್ಸೀಸ್​)

ಬಡವರ ಅನ್ನಕ್ಕೆ ಕಳ್ಳರ ಕನ್ನ: ನೆರೆರಾಜ್ಯಗಳಿಗೆ ಪಡಿತರ ಅಕ್ರಮ ಸಾಗಾಟ; ಪಾಲಿಷ್ ಮಾಡಿ ಮಾರಾಟ

ಸಮಾನತೆ, ಧಾರ್ವಿುಕ ಸ್ವಾತಂತ್ರ್ಯ ಯಾವುದು ಮುಖ್ಯ?

ಆಸ್ಟ್ರೇಲಿಯಾದಲ್ಲಿ ಬಾಲಿವುಡ್ ಬೆಡಗಿ ಊರ್ವಶಿ ರೌಟೇಲಾ..

Share This Article
blank

ಈ ಗಿಡಗಳನ್ನು ಬೆಳೆಸಿದರೆ ಸಾಕು, ನಿಮ್ಮ ಮನೆಗೆ ಒಂದೇ ಒಂದು ಸೊಳ್ಳೆಯೂ ಬರುವುದಿಲ್ಲ..Plants

Plants: ಮಳೆಗಾಲ ಬಂತೆಂದರೆ ಸಾಕು ಅನೇಕ ಜನರು ತಮ್ಮ ಮನೆಯಂಗಳದಲ್ಲಿ ವಿವಿಧ ಗಿಡಗಳನ್ನ ನೆಡಲು ಪ್ರಾರಂಭಿಸುತ್ತಾರೆ.…

ರಾತ್ರಿ 9 ಗಂಟೆಯ ನಂತರ ಊಟ ಮಾಡ್ತೀರಾ? ಹಾಗಾದ್ರೆ ಈ ಎಲ್ಲಾ ಆರೋಗ್ಯ ಸಮಸ್ಯೆ ಬರಬಹುದು ಎಚ್ಚರ! Health

Health: ನಮ್ಮ ಆಧುನಿಕ ಜೀವನಶೈಲಿಯಲ್ಲಿ, ತಡರಾತ್ರಿ ಕೆಲಸ ಮಾಡುವುದು, ಹೆಚ್ಚು ಮೊಬೈಲ್​ ಬಳಕೆ ಮಾಡುವುದು, ತಡವಾಗಿ…

blank