More

    ಭಾರತ ವಿರುದ್ಧ ಪಾಕ್​ ಹೀನಾಯ ಸೋಲಿಗೆ ವಾಮಾಚಾರ ಕಾರಣ ಎಂದ ಟಿಕ್​ಟಾಕರ್​​ಗೆ ಟಕ್ಕರ್​ ಕೊಟ್ಟ ನೆಟ್ಟಿಗರು!

    ನವದೆಹಲಿ: ಅ. 14ರಂದು ಗುಜರಾತಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ವಿಶ್ವಕಪ್​ ಟೂರ್ನಿಯ 12ನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಭಾರತ ತಂಡ ಭರ್ಜರಿ ಗೆಲುವು ದಾಖಲಿಸಿದ ಗುಂಗಿನಿಂದ ಕ್ರೀಡಾಭಿಮಾನಿಗಳು ಇನ್ನೂ ಹೊರಬಂದಿಲ್ಲ. ಭಾರತೀಯ ಪಾಲಿಗೆ ಇದೊಂದು ಸುವರ್ಣ ದಿನವಾಗಿದ್ದರೆ, ಪಾಕ್​ ಪಾಲಿಗೆ ಕರಾಳ ದಿನ. ವಿಶ್ವಕಪ್​ ಇತಿಹಾಸದಲ್ಲಿ ಭಾರತದ ಮುಂದೆ ಸತತ 8 ಬಾರಿಗೆ ಪಾಕ್​ ಮಂಡಿಯೂರಿದೆ. ಇದನ್ನು ಸಹಿಸಲಾಗದೇ ಪಾಕ್​ ಕ್ರೀಡಾಭಿಮಾನಿಗಳು ಭಾರತದ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಇದೀಗ ಪಾಕ್​ ಟಿಕ್​ಟಾಕರ್ ಒಬ್ಬಳು ಭಾರತದ ವಿರುದ್ಧ ಗಂಭೀರ ಆರೋಪ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್​ ಆಗಿದ್ದಾಳೆ.

    ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ್​ ಶಾ ಅವರು ಪಾಕಿಸ್ತಾನದ ವಿರುದ್ಧ ವಾಮಾಚಾರ ಪ್ರಯೋಗ ಮಾಡಿದ್ದಾರೆ ಎಂದು ಪಾಕಿಸ್ತಾನದ​ ವಿವಾದಾತ್ಮಕ ಟಿಕ್​ಟಾಕರ್ ಹರೀಮ್​ ಶಾ ಆರೋಪ ಮಾಡಿದ್ದಾಳೆ.

    ಟ್ವೀಟ್​ನಲ್ಲಿ ಏನಿದೆ?
    ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿರುವ ಹರೀಮ್​ ಶಾ, ನಂಬಲಾರ್ಹ ಮೂಲಗಳ ಪ್ರಕಾರ ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ ಅವರು ಪಾಕಿಸ್ತಾನ ತಂಡದ ವಿರುದ್ಧ ವಾಮಾಚಾರ ಮಾಡಲು ಖ್ಯಾತ ವಾಮಾಚಾರ ತಜ್ಞ/ಮಂತ್ರಗಾರ ಕಾರ್ತಿಕ್​ ಚಕ್ರಬೂರ್ತಿ ಅವರನ್ನು ನೇಮಿಸಿದ್ದರು. ಐಸಿಸಿ ಈ ಬಗ್ಗೆ ತನಿಖೆ ಮಾಡಲೇಬೇಕು. ಇದು ನಿಜಕ್ಕೂ ಸ್ವೀಕಾರವಲ್ಲ ಎಂದು ಹರೀಮ್​ ಷಾ ಆರೋಪಿಸಿದ್ದಾಳೆ.

    ಹಿಗ್ಗಾಮುಗ್ಗಾ ಟ್ರೋಲ್​
    ಹರೀಮ್​ ಶಾ ಮಾಡಿರುವ ಟ್ವೀಟ್​ ಈವರೆಗೆ 5 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ. ಟ್ವೀಟ್​ ವೈರಲ್​ ಆಗುತ್ತಿದ್ದಂತೆ ಅನೇಕ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದು, ಹರೀಮ್​ ಶಾಳನ್ನು ಹಿಗ್ಗಾಮುಗ್ಗಾ ಟ್ರೋಲ್​ ಮಾಡುತ್ತಿದ್ದಾರೆ. ಅ.23ರಂದು ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ವಿರುದ್ಧದ ಪಂದ್ಯದ ವೇಳೆಯೂ ಅಫ್ಘಾನಿಸ್ತಾನಕ್ಕೂ ಭಾರತ ಇದೇ ರೀತಿಯಲ್ಲಿ ನೆರವಾಗಲಿ ಎಂದು ನೆಟ್ಟಿಗರು ಹಾಸ್ಯ ಚಟಾಕಿ ಹಾರಿಸಿದ್ದಾರೆ.

    ಇದನ್ನೂ ಓದಿ: ಗಂಡು ಮಗುವಿಗೆ 5000, ಹೆಣ್ಣಿಗೆ 3000 ರೂಪಾಯಿ: ಮಕ್ಕಳನ್ನು ಖರೀದಿಸಿ ಮಾರುತ್ತಿದ್ದ ವೈದ್ಯೆ ಅರೆಸ್ಟ್!​

    ಭಾರತಕ್ಕೆ ಕೌಂಟರ್​ ಕೊಡಲು ಪಾಕಿಸ್ತಾನ ಪಿಂಕಿ ಪೆರ್ನಿಯನ್ನು ನೇಮಿಸಿಕೊಳ್ಳಲಿ ಎಂದು ನೆಟ್ಟಿಗನೊಬ್ಬ ಕಾಮೆಂಟ್​ ಮಾಡಿದ್ದರೆ, ಇದು ಟ್ರೈಲರ್​ ಅಷ್ಟೇ ಆಫ್ಘಾನ್​ ಮತ್ತು ಪಾಕ್​ ವಿರುದ್ಧದ ಪಂದ್ಯಕ್ಕೆ ಮತ್ತೊಂದನ್ನು ರೆಡಿ ಮಾಡುತ್ತಿದ್ದೇವೆ ಎಂದು ಮತ್ತೊರ್ವ ನೆಟ್ಟಿಗ ಕಾಮೆಂಟ್​ ಮಾಡಿದ್ದಾನೆ. ಯೋಚನೆ ಮಾಡಬೇಡಿ ಫೈನಲ್​ಗೆ ಹೋಗಲು ಇನ್ನು ಎರಡ್ಮೂರು ಪಂದ್ಯಗಳಿವೆ ಎಂದು ಇನ್ನೊರ್ವ ನೆಟ್ಟಿಗ ಹರಿಮ್​ ಶಾ ಕಾಲೆಳೆದಿದ್ದಾರೆ.

    ಪಾಕ್​ ವಿರುದ್ಧ ವಿಶ್ವಕಪ್​ ಗೆಲುವಿನ ಸರಣಿ
    ಪಂದ್ಯದ ವಿಚಾರಕ್ಕೆ ಬರುವುದಾದರೆ, ಅ.14ರಂದು ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ಟೀಂ ಇಂಡಿಯಾ ಫೀಲ್ಡಿಂಗ್​ ಆಯ್ದುಕೊಂಡಿತು. ನಾಯಕ ರೋಹಿತ್​ ಶರ್ಮಾ ನಿರ್ಧಾರವನ್ನು ಸಮರ್ಥಿಸಿಕೊಂಡ ಭಾರತದ ಬೌಲರ್​ಗಳು ಎದುರಾಳಿ ಪಾಕ್​ ತಂಡವನ್ನು 42.5 ಓವರ್​ಗಳಲ್ಲಿ 191ಕ್ಕೆ ಆಲೌಟ್​ ಮಾಡಿದ್ದರು. ಭಾರತದ ಪರ ಜಸ್ಪ್ರೀತ್​ ಬುಮ್ರಾ (7-1-19-2), ಮೊಹಮ್ಮದ್​ ಸಿರಾಜ್ (8-0-50-2), ಹಾರ್ದಿಕ್ ಪಾಂಡ್ಯ (6-0-34-2), ಕುಲದೀಪ್ ಯಾದವ್ (10-0-35-2), ರವೀಂದ್ರ ಜಡೇಜಾ (9.5-0-38-2) ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

    192ರನ್​ಗಳ ಸುಲಭ ಗುರಿ ಬೆನ್ನತ್ತಿದ್ದ ಭಾರತ ತಂಡವು ನಾಯಕ ರೋಹಿತ್ ಶರ್ಮಾ (86 ರನ್, 63 ಎಸೆತ, 6 ಬೌಂಡರಿ, 6 ಸಿಕ್ಸರ್), ಶ್ರೇಯಸ್​ ಅಯ್ಯರ್​ (53 ರನ್, 62 ಎಸೆತ, 3 ಬೌಂಡರಿ, 2 ಸಿಕ್ಸರ್) ಸ್ಪೋಟಕ ಬ್ಯಾಟಿಂಗ್ ಫಲವಾಗಿ ಸುಲಭ ಗುರಿಯನ್ನು 30.3 ಒವರ್​ಗಳಲ್ಲಿ ತಲುಪಿ ಗೆಲುವಿನ ನಗೆ ಬೀರಿತ್ತು. ಈ ಮೂಲಕ ಭಾರತ ವಿಶ್ವಕಪ್​ನಲ್ಲಿ ಪಾಕಿಸ್ತಾನದ ವಿರುದ್ಧದ ತನ್ನ ಪ್ರಾಬಲ್ಯವನ್ನು ಮುಂದುವರೆಸಿದೆ. ವಿಶ್ವಕಪ್​ ಟೂರ್ನಿಯಲ್ಲಿ 8 ಬಾರಿ ಮುಖಾಮುಖಿಯಾಗಿದ್ದು, 8 ಬಾರಿಯೂ ಭಾರತವೇ ಜಯಿಸಿದೆ. (ಏಜೆನ್ಸೀಸ್​)

    ಪಾಕ್​ ವಿರುದ್ಧದ ಗೆಲುವನ್ನು ಇಸ್ರೇಲ್​ ಅರ್ಪಿಸಿ ರಿಜ್ವಾನ್​ಗೆ ಟಾಂಗ್​ ಕೊಟ್ರಾ ಸಿರಾಜ್​? ಇಲ್ಲಿದೆ ವೈರಲ್​ ಟ್ವೀಟ್​ನ ಅಸಲಿಯತ್ತು

    ಪಾಕ್​ ಆಟಗಾರರ ಎದುರು “ಜೈಶ್ರೀರಾಂ” ಘೋಷಣೆ: ಉದಯನಿಧಿ ಸ್ಟಾಲಿನ್ ಖಂಡನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts