More

    ಬಿಜೆಪಿ ಶಾಸಕರ ವಿರುದ್ಧ ಪ್ರತಿಭಟನೆ: ವರದಿ ಮಾಡಿದ ಪತ್ರಕರ್ತ ಸೇರಿ 8 ಮಂದಿಯ ಬಟ್ಟೆ ಬಿಚ್ಚಿಸಿದ ಪೊಲೀಸರು!

    ಭೋಪಾಲ್​: ಪತ್ರಕರ್ತ ಮತ್ತು ರಂಗಭೂಮಿ ಕಲಾವಿದರು ಒಳಗೊಂಡ ಗುಂಪೊಂದನ್ನು ಪೊಲೀಸ್​ ಠಾಣೆಯೊಳಗೆ ಬಟ್ಟೆ ಬಿಚ್ಚಿಸಿ ಒಳ ಉಡುಪಿನಲ್ಲಿ ನಿಲ್ಲಿಸಿ, ಕೇವಲವಾಗಿ ನಡೆಸಿಕೊಂಡು ಅಮಾನವೀಯ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದ್ದು, ಇದಕ್ಕೆ ಸಂಬಂಧಿಸಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

    ಎಂಟು ಮಂದಿ ತಮ್ಮ ಕೈಗಳನ್ನು ಕಟ್ಟಿಕೊಂಡು ಅರಬೆತ್ತಲೆಯಾಗಿ ಗೋಡೆಯ ಮುಂದೆ ನಿಂತಿರುವ ಫೋಟೋ ಜಾಲತಾಣದಲ್ಲಿ ವೈರಲ್​ ಆಗಿದೆ. ಸ್ಥಳೀಯ ಬಿಜೆಪಿ ಶಾಸಕರ ವಿರುದ್ಧ ನಡೆದ ಪ್ರತಿಭಟನೆಯನ್ನು ವರದಿ ಮಾಡಲು ಹೋದಾಗ ಕೆಲವು ಪೊಲೀಸ್ ಸಿಬ್ಬಂದಿ ನಿಂದಿಸಿದ್ದಲ್ಲದೆ, ಥಳಿಸಿ, ವಿವಸ್ತ್ರಗೊಳಿಸಿದರು ಎಂದು ಫೋಟೋದಲ್ಲಿ ಗುರುತಿಸಲಾದ ಸ್ಥಳೀಯ ಪತ್ರಕರ್ತ ಮತ್ತು ಯೂಟ್ಯೂಬರ್ ಆರೋಪಿಸಿದ್ದಾರೆ.

    ಈ ಘಟನೆ ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ಕಳೆದ ಶನಿವಾರ ನಡೆದಿದೆ. ಬಿಜೆಪಿ ಶಾಸಕ ಕೇದಾರನಾಥ್ ಶುಕ್ಲಾ ಮತ್ತು ಅವರ ಪುತ್ರ ಗುರುದತ್ ಶುಕ್ಲಾ ವಿರುದ್ಧ ರಂಗಭೂಮಿ ಕಲಾವಿದ ನೀರಜ್​ ಕುಂದರ್ ಎಂಬಾತ​ ಅಸಭ್ಯ ಹೇಳಿಕೆ ನೀಡಿದ್ದಾರೆ ಎಂದು ಪೊಲೀಸರು ಬಂಧಿಸಿದ್ದಾರೆ. ಈ ನಡೆಯನ್ನು ಖಂಡಿಸಿ ನಡೆದ ಪ್ರತಿಭಟನೆಯನ್ನು ವರದಿ ಮಾಡಲು ಪತ್ರಕರ್ತರು ಹೋದಾಗ ಪೊಲೀಸರು ದುರ್ವರ್ತನೆ ತೋರಿದ್ದಾರೆಂದು ಪತ್ರಕರ್ತ ಗಂಭೀರ ಆರೋಪ ಮಾಡಿದ್ದಾರೆ.

    ದೂರು ನೀಡಿರುವ ಪತ್ರಕರ್ತನ ಹೆಸರು ಕನಿಷ್ಕ ತಿವಾರಿ. ತನ್ನನ್ನು ಮತ್ತು ತನ್ನ ಕ್ಯಾಮೆರಾಮೆನ್​ ಅನ್ನು ಬಂಧಿಸಲಾಗಿದ್ದು, ನಮ್ಮ ವಿರುದ್ಧ ಅತಿಕ್ರಮಣ ಮತ್ತು ಸಾರ್ವಜನಿಕರ ಶಾಂತಿಗೆ ಭಂಗ ಸೇರಿದಂತೆ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ಶಾಸಕರ ವಿರುದ್ಧ ಯಾಕೆ ಸುದ್ದಿಗಳನ್ನು ಮಾಡುತ್ತೀದ್ದೀರಿ ಎಂದು ಪೊಲೀಸರು ಪ್ರಶ್ನೆ ಮಾಡಿದರು ಎಂದು ದೂರಿದ್ದಾರೆ.

    ಫೋಟೋದಲ್ಲಿರುವ ಇತರರೊಂದಿಗೆ ತಮ್ಮನ್ನು 18 ಗಂಟೆಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿ ಇರಿಸಲಾಗಿತ್ತು ಎಂದು ಕನಿಷ್ಕ ತಿವಾರಿ ಹೇಳಿದ್ದಾರೆ. ಪೊಲೀಸರು ಏಪ್ರಿಲ್ 2 ರ ರಾತ್ರಿ 8 ಗಂಟೆಗೆ ನಮ್ಮನ್ನು ಕಸ್ಟಡಿಗೆ ತೆಗೆದುಕೊಂಡರು ಮತ್ತು ಏಪ್ರಿಲ್ 3 ರಂದು ಸಂಜೆ 6 ಗಂಟೆಗೆ ನಮ್ಮನ್ನು ಬಿಡುಗಡೆ ಮಾಡಿದರು ಎಂದು ತಿವಾರಿ ಆರೋಪಿಸಿದ್ದಾರೆ.

    ಹಲವಾರು ಸಾಮಾಜಿಕ ಕಾರ್ಯಕರ್ತರು ಮತ್ತು ರಂಗಭೂಮಿ ಕಲಾವಿದರು ಶ್ರೀ ಕುಂದರ್ ಬಂಧನವನ್ನು ಖಂಡಿಸಿ, ಪ್ರತಿಭಟಿಸಿದರು. ಆದರೆ ರಾಜ್ಯದ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಎತ್ತಿದಾಗ ಅವರನ್ನು ಪೊಲೀಸರು ಥಳಿಸಿದರು ಎಂದು ಪ್ರತಿಭಟನಾಕಾರರು ಆರೋಪ ಮಾಡಿದ್ದಾರೆ.

    ಇನ್ನು ಪೊಲೀಸ್ ಠಾಣೆಯ ಉಸ್ತುವಾರಿ ಅಭಿಷೇಕ್ ಸಿಂಗ್ ಪರಿಹಾರ್ ಅವರು ನಮ್ಮ ಫೋಟೋವನ್ನು ಕ್ಲಿಕ್ ಮಾಡಿದರು ಎಂದು ತಿವಾರಿ ಹೇಳಿದ್ದಾರೆ. ಶಾಸಕರ ವಿರುದ್ಧ ಬರೆದರೆ ನಗರದಲ್ಲಿ ಬೆತ್ತಲೆಯಾಗಿ ಮೆರವಣಿಗೆ ಮಾಡುವುದಾಗಿ ಬೆದರಿಕೆ ಹಾಕಿದರು. ಪೊಲೀಸರು ನಮ್ಮ ಪೋಸ್ಟ್ ಅನ್ನು ವೈರಲ್ ಮಾಡಿದ್ದಾರೆ. ಇದು ನಮ್ಮ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

    ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಘಟನೆಯನ್ನು ಗಮನಿಸಿದ್ದು, ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸೂಚನೆ ನೀಡಿದ್ದಾರೆ. (ಏಜೆನ್ಸೀಸ್​)

    ವಿಜಯನಗರದಲ್ಲಿ ಎಸಿ ಸ್ಫೋಟ: ಗಂಡ-ಹೆಂಡತಿ, ಇಬ್ಬರು ಮಕ್ಕಳು ಮಲಗಿದ್ದಲ್ಲೇ ದುರಂತ ಸಾವು

    ಬಿಸಿಯೂಟ ಸಹಾಯಕರ ಗೌರವಧನ 1 ಸಾವಿರ ರೂ.ಹೆಚ್ಚಳ

    ಸುಪ್ರೀಂಕೋರ್ಟ್​ನಲ್ಲಿ ಪಾಕ್​ ಪ್ರಧಾನಿಗೆ ಭಾರೀ ಮುಖಭಂಗ: ನಾಳೆಯೇ ಇಮ್ರಾನ್​ ಸರ್ಕಾರದ ಭವಿಷ್ಯ ನಿರ್ಧಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts